ವಿತ್ತ ಸಚಿವೆ 4ನೇ ಸುದ್ದಿಗೋಷ್ಠಿ : ಕಲ್ಲಿದ್ದಲು ವಲಯವನ್ನು ಖಾಸಗೀಕರಣ ಮಾಡಿದ ಕೇಂದ್ರ…!

ಕೊರೊನಾ ಲಾಕ್ ಡೌನ್ ನಿಂದಾದ ನಷ್ಟವನ್ನು ಭರಿಸಲು, ಬಡವರ ಆರ್ಥಿಕ ಪುನರ್ಚೇತನಗೊಳಿಸಲು ಮೇ.12 ರಂದು ಪ್ರಧಾನಿ ನರೇಂದ್ರ ಮೋದಿ ಅವರು 20 ಲಕ್ಷ ಕೋಟಿ ವಿಶೇಷ ಆರ್ಥಿಕ ಪ್ಯಾಕೇಜ್ ಅನ್ನು ಘೋಷಿಸಿದ್ದಾರೆ.  ಇದರ ವಿವರಣೆಯನ್ನು ಕಳೆದ ಮೂರು ದಿನಗಳಿಂದ ವಿತ್ತ ಸಚಿವೆ ಸಂಜೆ ಸರಿಯಾಗಿ ನಾಲ್ಕು ಗಂಟೆಗೆ ನೀಡುತ್ತಿದ್ದು. ಇಂದೂ ಕೂಡ ಆರ್ಥಿಕ ಪ್ಯಾಕೇಜ್ ನ ವಿವರಣೆ ನೀಡಿದ್ದಾರೆ. ಈ ವೇಳೆ ಕೇಂದ್ರ ಸರ್ಕಾರ ಕಲ್ಲಿದ್ದಲು ವಲಯಕ್ಕೆ 50 ಸಾವಿಕ ಕೋಟಿ ಹೂಡಿಕೆ ಮಾಡಿ, ಕಲ್ಲಿದ್ದಲನ್ನು ಸಂಪೂರ್ಣವಾಗಿ  ಖಾಸಗೀಕರಣ ಮಾಡಿದೆ.

ಹೌದು…..  ಇಂದು ನಾಲ್ಕನೇ ಕಂತಿನ ಪ್ಯಾಕೇಜ್ ನ್ನು ವಿವರಿಸಿ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ನ, 20 ಲಕ್ಷ ಕೋಟಿಯಲ್ಲಿ 2 ಲಕ್ಷ ಕೋಟಿ ವಿವರಣೆ ನೀಡಿದರು. ‘ಸ್ವಾವಲಂಭಿ ಭಾರತ ನಿರ್ಮಾಣಕ್ಕೆ ಆರ್ಥಿಕ ಪ್ಯಾಕೇಜ್ ನೆರವಾಗಲಿದೆ. ಹಲವು ವಲಯಗಳ ನೀತಿಗಳನ್ನು ಮಾರ್ಪಡಿಸಬೇಕಾಗಿದೆ. ಸ್ವಾವಲಂಭಿ ಭಾರತಕ್ಕೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು. ಬಹುತೇಕ ವಲಯಗಳಲ್ಲಿ ನೀತಿಗಳು ಸಡಿಲಿಕೆಯಾಗಿವೆ. ಅಭಿವೃದ್ಧಿ, ಉದ್ಯೋಗ ಸೃಷ್ಟಿಗೆ ಬಹುತೇಕ ಅಗತ್ಯ ಕ್ರಮ ಕೈಗೊಂಡಿದ್ದೇವೆ. ಸಾರ್ವಜನಿಕ ವಲಯದ ಬ್ಯಾಂಕುಗಳ ಸುಧಾರಣೆಗೆ ಕೇಂದ್ರ ಒತ್ತು ನೀಡಲಿದೆ. ವಿದ್ಯುತ್, ನೀರಾವರಿ ವಲಯದಲ್ಲಿ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ. ಸಾಂಸ್ಥಿಕ ಸುಧಾರಣೆಗೆ ಇಂದು ನಾವು ಒತ್ತು ನೀಡಿದ್ದೇವೆ. ಹೂಡಿಕೆಗೆ ಉತ್ತೇಜನ ನೆರವು ನೀಡುವುದಾಗಿ’ ಹೇಳಿದರು.

ಜೊತೆಗೆ ‘ನಗದು ಹಣ ವರ್ಗಾವಣೆ, ಜಿಎಸ್ ಟಿ ಮೂಲಕ ಸುಧಾರಣೆ ಮಾಡಲಾಗಿದೆ.  ಹೂಡಿಕೆಯನ್ನು ಹೆಚ್ಚಿಸಲು ಉನ್ನತ ಸಮಿತಿಗಳ ರಚನೆ ಮಾಡಲಾಗುವುದು.  ಹೊಸ ಹೂಡಿಕೆ ಹೆಚ್ಚಿಸಲು ಪ್ರತೀ ರಾಜ್ಯಕ್ಕೂ ರ್ಯಾಂಕಿಂಗ್ ನೀಡುತ್ತೆವೆ. ಈ ಮೂಲಕ ಕೇಂದ್ರ ಹಾಗೂ ರಾಜ್ಯಗಳ ಸಮನ್ವಯತೆ ಸಾಧಿಸುವುದು. ರಾಜ್ಯದಲ್ಲಿರುವ ಕೈಗಾರಿಕೆಗಳ ಹೂಡಿಕೆಗೆ ಉತ್ತೇಜನ ನೀಡಲಾಗುವುದು. ಇದಕ್ಕಾಗಿ ಕೈಗಾರಿಕಾ ಮಾಹಿತಿ ವ್ಯವಸ್ಥೆ ನಿರ್ಮಾಣ ಮಾಡಲಾಗುವುದು.  ಭೂ ಬ್ಯಾಂಕ್ ಗಳ ಮೂಲಕ ಹೊಸ ಹೂಡಿಕೆಗೆ ನಿರ್ಧಾರ ಮಾಡಲಾಗುವುದು.ಕೇಂದ್ರ ಸರ್ಕಾರದ ಬಳಿ 5 ಲಕ್ಷ ಹೆಕ್ಟರ್ ಕೈಗಾರಿಕಾ ಭೂಮಿ ಲಭ್ಯವಿದೆ. ಕೈಗಾರಿಕಾ ಕ್ಲಸ್ಟರ್ ಗಳನ್ನು ಮೇಲ್ದರೆಗೆರಿಸುವುದು. ಜಾಗತಿಕ ಸ್ಪರ್ಧೆಗೆ ದೇಶವನ್ನು ಸಜ್ಜುಗೊಳಿಸುವುದು.ದೇಶದಲ್ಲಿ ಪ್ರಸ್ತುತ 3376  ಕೈಗಾರಿಕಾ ಪಾರ್ಕ್ ಗಳಿವೆ. ಭಾರತಕ್ಕಾಗಿ ಉತ್ಪಾದನೆ ಮತ್ತು ರಫ್ತಿಗೆ ಆಧ್ಯತೆ ನೀಡಲಾಗುವುದು. ಇಂಧನ ಪೂರೈಕೆ ಕಂಪನಿಗಳು, ಬಾಹ್ಯಾಕಾಶ, ಕಲ್ಲಿದ್ದಲು, ಖನಿಜ ಸಂಪತ್ತು, ರಕ್ಷಣಾ  ಉತ್ಪಾದನೆ,  ಅಣುಶಕ್ತಿ, ವೈಮಾನಿಕ ಸೇರಿದಂತೆ 8 ವಲಯಗಳಲ್ಲಿ ಸುಧಾರಣೆಗೆ ಹೂಡಿಕೆ ಮಾಡಲು ಕೆಂದ್ರ ನಿರ್ಧಾರ ಮಾಡಿದ’ ಎಂದರು.

ಕಲ್ಲಿದ್ದಲು ಆಮದು ಮಾಡಿ ಉತ್ಪಾದನೆ ಹೆಚ್ಚಳ ಜೊತೆಗೆ ಕಲ್ಲಿದ್ದಲು ಹೆಚ್ಚು ಹೊಂದಿರುವ 3ನೇ ರಾಷ್ಟ್ರವಾಗಿದೆ ಭಾರತ. ಕಲ್ಲಿದ್ದಲ್ಲು ವಲಯಕ್ಕೆ 50 ಸಾವಿಕ ಕೋಟಿ ಹೂಡಿಕೆ ಮಾಡಲಾಗುವುದು.  ಕಲ್ಲಿದ್ದಲು ಗಣಿಗಳನ್ನು ಯಾರು ಬೇಕಾದರು ಬಿಡ್ ಮಾಡಿ ಪಡೆಯಬಹುದು ಎಂದು ಕಲ್ಲಿದ್ದಲು ವಲಯವನ್ನು ಖಾಸಗೀಕರಣ ಮಾಡಿದೆ ಕೇಂದ್ರ ಸರ್ಕಾರ. ಯಾರು ಮುಂಗಡ ಹಣ ನೀಡುತ್ತಾರೋ ಅವರಿಗೆ ಕಲ್ಲಿದ್ದಲು ಗಣಿ ನೀಡಲಾಗುವುದು. ಗಣಿ ಹಂಚಿಕೆ ಮಾಡಲು ಯಾವುದೇ ಷರತ್ತು, ಯಾವುದೇ ಅರ್ಹತೆ ಇಲ್ಲ. ಭಾರತ ಕಲ್ಲಿದ್ದಲು ಸಂಪತ್ತು ಹೊಂದಿದ 3ನೇ ಅತೀ ದೊಡ್ಡ ದೇಶ. ಬಿಡ್ ಮೂಲಕ 50 ಕಲ್ಲಿದ್ದಲು ಗಣಿಗಳ ಮಾರಾಟಕ್ಕೆ ಮುಂದಾಗಿದೆ.

ನಿನ್ನೆ ನಡೆದ ಸುದ್ದಿಗೋಷ್ಠಿಯಲ್ಲಿ, ಮೀನುಗಾರಿಕೆಗೆ, ಕೃಷಿ ಮೂಲ ಸೌಕರ್ಯ ಅಭಿವೃದ್ಧಿಗೆ  ಆರ್ಥಿಕ ನೆರವನ್ನು ಘೋಷಿಸಿದ ಸಚಿವೆ ಇಂದು ಯಾವ ಕ್ಷೇತ್ರಕ್ಕೆ ನೆರವನ್ನು ನೀಡುವರು ಎನ್ನುವ ಭಾರೀ ನಿರೀಕ್ಷೆ ಇದೆ. ಪ್ರಮುಖವಾಗಿ ಕೃಷಿ, ಸಂಬಂಧಿತ  ಕ್ಷೇತ್ರಗಳಲ್ಲಿ ಚೇತರಿಕೆ ಸಾಧ್ಯವಾಗುವಂತಹ ಕ್ರಮಗಳನ್ನು ಅವರು ಘೋಷಿಸಿದ್ದರು. ಕೃಷಿವಲಯದಲ್ಲಿ ಮೂಲಸೌಕರ್ಯ ಸುಧಾರಿಸಲು 1 ಲಕ್ಷ ಕೋಟಿ ರೂ.ಗಳ ನಿಧಿ ಸ್ಥಾಪಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದರು. ಅಂತೆಯೇ ಲಾಕ್‌ಡೌನ್ ಅವಧಿಯಲ್ಲಿ ರೈತರ ಖಾತೆಗಳಿಗೆ 18,730  ಕೋಟಿ ರೂ ಹಣ ಜಮೆ ಮಾಡುವುದರೊಂದಿಗೆ, ರೈತರಿಂದ 74,300 ಕೋಟಿ ರೂ. ಕೃಷಿ ಉತ್ಪನ್ನಗಳನ್ನು ಖರೀಸಿರುವುದಾಗಿ ಹೇಳಿದ್ದಾರೆ ಕೃಷಿ, ಮೀನುಗಾರಿಕೆ, ಪಶುಸಂವರ್ಧನೆ, ಡೈರಿ ಮತ್ತು ಆಹಾರ ಸಂಸ್ಕರಣೆ ರಂಗಗಳಿಗೆ ಉತ್ತೇಜನ ನೀಡುವ ಕ್ರಮಗಳನ್ನು ಪ್ರಕಟಿಸಿದ್ದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights