ವಿಶ್ವದೆಲ್ಲೆಡೆ ಕೊರೊನಾ ಹಾವಳಿ : 32.19 ಲಕ್ಷ ಜನರಿಗೆ ಸೋಂಕು – 2.28 ಲಕ್ಷ ಮಂದಿ ಸಾವು!

ಇಡೀ ಜಗತ್ತಿನಾದ್ಯಂತ ಕೊರೋನಾ ಹಾವಳಿ ಮುಂದುವರಿದಿದ್ದು,. ಇಡೀ ವಿಶ್ವದಲ್ಲಿ 32.19 ಲಕ್ಷ ಜನರಿಗೆ ಕೊರೋನಾ ಅಂಟಿದೆ. ಈ ಮಹಾಮಾರಿ ವೈರಸ್​ನಿಂದ 2.28 ಲಕ್ಷ ಮಂದಿ ಅಸುನೀಗಿದ್ದಾರೆ. ಈ ವೈರಸ್​ನಿಂದ ಗುಣಮುಖರಾದವರ ಸಂಖ್ಯೆ 10 ಲಕ್ಷ ಮಂದಿ.

ಪೆಂಡಂಭೂತದಂತೆ ಕಾಡುತ್ತಿರುವ ಕೊರೋನಾ ವೈರಸ್​ಗೆ ಅಮೆರಿಕದಲ್ಲಿ ಮೃತಪಟ್ಟವರ ಸಂಖ್ಯೆ 61 ಸಾವಿರಕ್ಕೆ ಏರಿಕೆ ಆಗಿದೆ. ನಿತ್ಯ ಸರಾಸರಿ 2 ಸಾವಿರ ಜನರು ಸಾಯುತ್ತಿದ್ದಾರೆ. ಇದು ಅಮೆರಿಕಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

24 ಗಂಟೆಯಲ್ಲಿ ಅಮೆರಿಕದಲ್ಲಿ ಕೊರೋನಾ ವೈರಸ್​ಗೆ 2,209 ಜನರು ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 61,668ಕ್ಕೆ ಏರಿಕೆ ಆಗಿದೆ. 10.64 ಲಕ್ಷ ಮಂದಿಯಲ್ಲಿ ಸೋಂಕಿರುವುದು ದೃಢಪಟ್ಟಿದೆ.

ಅತಿ ಹೆಚ್ಚು ಕೊರೋನಾ ಸೋಂಕಿತರಿರುವ ಎರಡನೇ ದೇಶ ಎಂಬ ಪಟ್ಟ ಸ್ಪೇನ್​ಗೆ ಸಿಕ್ಕಿದೆ. ಈ ದೇಶದಲ್ಲಿ ಸೋಂಕಿತರ ಸಂಖ್ಯೆ 2.36 ಲಕ್ಷದ ಗಡಿ ತಲುಪಿದೆ. 24 ಸಾವಿರ ಮಂದಿ ಮೃತಪಟ್ಟಿದ್ದಾರೆ. ಇಟಲಿಯಲ್ಲಿ 2 ಲಕ್ಷ ಜನರಿಗೆ ಸೋಂಕು ಅಂಟಿದ್ದು, ಸಾವಿನ ಸಂಖ್ಯೆ 28 ಸಾವಿರದ ಗಡಿ ತಲುಪಿದೆ. ಈ ಮೊದಲ ವಾರಗಳಿಗೆ ಹೋಲಿಸಿದರೆ ಇಟಲಿಯಲ್ಲಿ ಕೊರೋನಾ ಕೊಂಚ ನಿಯಂತ್ರಣಕ್ಕೆ ಬಂದಿದೆ ಎನ್ನಬಹುದು.

ಫ್ರಾನ್ಸ್​, ಜರ್ಮನಿ, ಇಂಗ್ಲೆಂಡ್​ನಲ್ಲೂ ಪರಿಸ್ಥಿತಿ ಕೈ ಮೀರಿದೆ. ಫ್ರಾನ್ಸ್​ನಲ್ಲಿ 1.67 ಲಕ್ಷ ಮಂದಿಗೆ ಕೊರೋನಾ ದೃಢಪಟ್ಟಿದೆ. 24 ಸಾವಿರ ಮಂದಿ ಮೃತಪಟ್ಟಿದ್ದಾರೆ. ಜರ್ಮನಿಯಲ್ಲಿ 1.61 ಲಕ್ಷ ಜನರಿಗೆ ಕೊರೋನಾ ಸೋಂಕಿದೆ. 6 ಸಾವಿರ ಜನರು ಮೃತಪಟ್ಟಿದ್ದಾರೆ.

ಭಾರತದಲ್ಲಿ 33,062 ಜನರು ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ದಿನದಿಂದ ದಿನಕ್ಕೆ ಸಾವಿನ ಸಂಖ್ಯೆಯೂ ಹೆಚ್ಚುತ್ತಿದ್ದು, ಇದುವರೆಗೂ 1,079 ಜನರು ಸಾವನ್ನಪ್ಪಿದ್ದಾರೆ. 8,437 ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights