ವಿಹೆಚ್‌ಪಿ ಮುಖಂಡನ ಮೇಲಿನ ಗಲಬೆ ಕೇಸ್‌ಗಳನ್ನು‌ ಕೈಬಿಡುತ್ತೇವೆ ಎಂದ ಗೃಹ ಸಚಿವ; ವಿಡಿಯೋ ವೈರಲ್‌

ವಿಶ್ವ ಹಿಂದೂ ಪರಿಷತ್‌ ಮುಖಂಡ ಶರಣ್‌ ಪಂಪ್‌ವೆಲ್‌ ಎಂಬಾತನ ಮೇಲಿನ ಗಲಬೆ ಪ್ರಕರಣಗಳನ್ನು ಸರ್ಕಾರದಿಂದ ವಾಪಸ್‌ ಪಡೆದು ಎಫ್‌ಐಆರ್‌ ಕೈಬಿಡುವುದಾಗಿ ಗೃಹ ಸಚಿವ ಬೊಬ್ಬಾಯಿ ಹೇಳಿರುವ ವಿಡಿಯೋ ವೈರಲ್‌ ಆಗಿದ್ದು, ಆ ಬಗ್ಗೆ ಎಲ್ಲೆಡೆ ಸುದ್ದಿಯಾಗಿತ್ತು.

ಕೇಸ್‌ಗಳನ್ನು ಬೊಮ್ಮಾಯಿ ವಾಪಸ್‌ ಪಡೆಯುವುದಾಗಿ ಹೇಳಿರುವ ವಿಡಿಯೋವನ್ನು ಸ್ವತಃ ಶರಣ್ ಪಂಪ್‌ವೆಲ್‌ ಎಂಬಾತನೇ  ಟ್ವೀಟ್‌ನಲ್ಲಿ ಹಂಚಿಕೊಂಡಿದ್ದ.

ಡಿಜೆ ಹಳ್ಳಿ ಪ್ರಕರಣಕ್ಕೆ ಸಂಬಂಧಿಸಿದ ಟ್ವೀಟ್‌ ಮಾಡಿದ್ದ ಶರಣ್, ಪ್ರವಾಹ ಪರಿಸ್ಥಿತಿ ಬಗ್ಗೆ ಪರಿಶೀಲಿಸಲು ಗೃಹಸಚಿವ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ಬೊಮ್ಮಾಯಿಯವರು ಉಡುಪಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದ್ದು, ಅದರ ಬಗ್ಗೆ ತನ್ನ ಟ್ವಿಟ್ಟರಿನಲ್ಲಿ ಡಿ.ಜೆ.ಹಳ್ಳಿಯಲ್ಲಿ ನಡೆದ ಗಲಭೆಯನ್ನು ಉಲ್ಲೇಖಿಸಿ “ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಮತ್ತು SDPI ಸಂಘಟನೆಯನ್ನು ನಿಷೇಧಿಸಬೇಕು ಮತ್ತು ಈ ಘಟನೆಯ ಹಿಂದೆ ರಾಷ್ಟ್ರವಿದ್ರೋಹಿ ಸಂಘಟನೆ ಪಾಕಿಸ್ತಾನದ ಗುಪ್ತಚರ ಸಂಸ್ಥೆಯಾದ ಐಎಸ್ಐ, ಭಯೋದ್ಪಾದಕರ ಕೈವಾಡವಿರುದರಿಂದ ಈ ಘಟನೆಯನ್ನು ರಾಷ್ಟ್ರೀಯ ತನಿಖಾ ದಳದ (NIA ) ಮುಖಾಂತರ ತನಿಖೆಗೆ ನಡೆಸಲು ಮಾನ್ಯ ಗೃಹಸಚಿವರಿಗೆ ಆಗ್ರಹಿಸಿದ್ದೇವೆ” ಎಂದು ಟ್ವೀಟ್ ಮಾಡಿದ್ದರು. ಆ ಟ್ವೀಟ್‌ನಲ್ಲಿ ಬೊಮ್ಮಾಯಿ ಆತನ ಮೇಲಿನ ಕೇಸ್‌ಗಳನ್ನು ಕೈಬಿಡುವುದಾಗಿ ಹೇಳಿದ್ದ ವಿಡಿಯೋವನ್ನು ಆತ ಹಂಚಿಕೊಂಡಿದ್ದ.

ಈ ವಿಡಿಯೋವನ್ನು ಪಡೆದುಕೊಂಡ ಮಾಧ್ಯಮಗಳು ಬೊಮ್ಮಾಯಿ ಅವರು, ಆತ ಹಲವಾರು ಕೋಮು ಗಲಭೆಗಳಲ್ಲಿ ಭಾಗಿಯಾಗಿ ಆರೋಪಿಯಾಗಿರುವ ಆತನ ಮೇಲಿನ ಕೇಸ್‌ಗಳನ್ನು ವಾಪಸ್‌ ಪಡೆದುಕೊಳ್ಳುತ್ತೇವೆ ಎಂದು ಭರಸೆ ನೀಡಿರುವುದು ಸ್ಪಷ್ಟವಾಗಿದೆ.

ಈ ಬಗ್ಗೆ ಎಲ್ಲೆಡೆ ವರದಿಯಾಗುತ್ತಿದ್ದಂತೆ ಶರಣ್ ಪಂಪ್‌ವೆಲ್ ಟ್ವಿಟ್ಟರ್‌ನಲ್ಲಿರುವ ತನ್ನ ಟ್ವೀಟ್ ಡಿಲೀಟ್ ಮಾಡಿದ್ದಾರೆ. ಫೋಟೋ ಜೊತೆಗೆ ಹೊಸ ಟ್ವೀಟ್ ಹಾಕಿದ್ದಾರೆ.

ಹೊಸ ಟ್ವೀಟ್‌ನಲ್ಲಿ “ಮೂರೂ ದಿವಸಗಳ ಹಿಂದೆ ದೇಶದ ಗೃಹ ಇಲಾಖೆಯು ದೇಶದಲ್ಲಿ ಕೋಮುಗಲಭೆ ಸೃಷ್ಟಿಸಲು ISI ಸಂಚು ರೂಪಿಸುತ್ತದೆ ಎಂದು ವರದಿ ನೀಡಿತ್ತು. ಹಾಗಾಗಿ ಘಟನೆಯ ಹಿಂದೆ ಪಾಕಿಸ್ತಾನ ಗುಪ್ತಚರ ಸಂಸ್ಥೆಯಾದ ISI ಯ ಕೈವಾಡವಿದೆ ಎಂದು ಸಂಶಯ ವ್ಯಕ್ತವಾಗಿರುತ್ತದೆ, #ಡಿಜೆಹಳ್ಳಿಜಿಹಾದಿಗಳಅಟ್ಟಹಾಸ” ಎಂದು ಬರೆದು ಬೊಮ್ಮಾಯಿ ಅವರ ಜೊತೆಗಿನ ಫೋಟೋ ಟ್ವೀಟ್ ಮಾಡಿದ್ದಾರೆ.

ಡಿಲೀಟ್ ಮಾಡಿರುವ ವಿಡಿಯೋದಲ್ಲಿ ಗೃಹಸಚಿವ ಬಸವರಾಜ ಬೊಮ್ಮಾಯಿಯವರು ಉಡುಪಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಹಲವು ಗಲಭೆಗಳಲ್ಲಿ ಭಾಗಿಯಾಗಿ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ವಿಶ್ವ ಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್‌ ಎದುರು ‘ನೋಡ್ರಿ ನಿಮ್ಮ ಮೇಲೆ ಯಾವುದೇ ಕೇಸು ಇದ್ದರೂ ತೆಗೆದು ಹಾಕುತ್ತೇವೆ’ ಎಂದು ಹೇಳಿದ್ದಾರೆ.

ವಿಡಿಯೋವನ್ನು ನೋಡಿ:

ಗಲಬೆಕೋರ ಆರೋಪಹೊತ್ತಿರುವ ವಿಹೆಚ್‌ಪಿ ಮುಖಂಡನ ಮೇಲಿನ ಕೇಸ್‌ಗಳನ್ನು ಕೈಬಿಡುತ್ತೇವೆ ಎಂದ ಗೃಹ ಸಚಿವ ಬೊಮ್ಮಾಯಿ

ಗಲಬೆಕೋರ ಆರೋಪಹೊತ್ತಿರುವ ವಿಹೆಚ್‌ಪಿ ಮುಖಂಡನ ಮೇಲಿನ ಕೇಸ್‌ಗಳನ್ನು ಕೈಬಿಡುತ್ತೇವೆ ಎಂದ ಗೃಹ ಸಚಿವ ಬೊಮ್ಮಾಯಿ

Posted by EnSuddi on Friday, August 14, 2020

ಸಿದ್ದರಾಮಯ್ಯನವರ ಸರ್ಕಾರದಲ್ಲಿ ಎಸ್‌ಡಿಪಿಐ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಕೈಬಿಟ್ಟಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಬಿಜೆಪಿ, ಈಗ ತನ್ನದೇ ಸರ್ಕಾರದಲ್ಲಿ ಬಲಪಂಥೀಯ ಕಾರ್ಯಕರ್ತರು ಭಾಗಿಯಾದ ಪ್ರಕರಣಗಳನ್ನು ವಾಪಸ್ ಪಡೆಯುತ್ತೇವೆ ಎಂದು ಹೇಳಿರುವುದು ಹಲವರ ವಿರೋಧಕ್ಕೆ ಕಾರಣವಾಗಿದೆ.

ಉಡುಪಿಯಲ್ಲಿ ಹಲವಾರು ಕೋಮು ಗಲಬೆಗಳಲ್ಲಿ ಭಾಗಿಯಾಗಿದ್ದ ಹಾಗೂ ಕೋಮು ದ್ವೇಷವನ್ನು ಹರಡುವ ಭಾಷಣಗಳನ್ನು ಮಾಡಿದ್ದ, ಹಲವು ಗಲಬೆಗಳಿಗೆ ಕಾರಣನಾಗಿದ್ದ ಆರೋಪಗಳನ್ನು ಹೊಂದಿರುವ ವಿಹೆಚ್‌ಪಿ ಮುಖಂಡ ಶರಣ್‌  ಪಂಪ್‌ವೆಲ್‌ ವಿರುದ್ಧದ ಕೇಸುಗಳನ್ನು ವಾಪಸ್ ಪಡೆಯುತ್ತೇವೆ ಎಂದು ಸ್ವತಃ ಗೃಹ ಸಚಿವರು ಹೇಳಿರುವುದು ಚರ್ಚೆಗೆ ವಿರೋಧಕ್ಕೆ ಕಾರಣವಾಗಿದೆ.


Read Also: ರಾಜಸ್ಥಾನದಲ್ಲಿ ಕಾಂಗ್ರೆಸ್‌ ಸರ್ಕಾರ ಅಳಿವು-ಉಳಿವಿನ ಕ್ಷಣಗಣನೆ ಆರಂಭ: ಡೀಟೇಲ್ಸ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights