ಶೌಚಾಲಯ ಸ್ವಚ್ಚಗೊಳಿಸಿ ಶಿಕ್ಷಣಾಧಿಕಾರಿ : ಡಿ-ಗ್ರೂಪ್ ನೌಕರರಿಗೆ ಸ್ವಚ್ಚತೆಯ ಪಾಠ

ಗಬ್ಬು ನಾರುತ್ತಿದ್ದ ತನ್ನ ಕಚೇರಿಯ ಶೌಚಾಲಯವನ್ನ ತಾವೆ ಖುದ್ದು ಸ್ವಚ್ಚಗೊಳಿಸುವ ಮೂಲಕ ಕ್ಷೇತ್ರ ಶಿಕ್ಷಣಾಧಿಕಾರಿ ಡಿ-ಗ್ರೂಪ್ ನೌಕರರಿಗೆ ಸ್ವಚ್ಚತೆಯ ಪಾಠ ಹೇಳಿಕೊಟ್ಟಿದ್ದಾರೆ. ಕೋಲಾರ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ನಾಗರಾಜಗೌಡ ಸ್ವತಃ ತಮ್ಮ ಕಚೇರಿಯ ಶೌಚ್ಚಾಲಯವನ್ನ ಶುದ್ದ ಮಾಡುವ ಮೂಲಕ ನೂರಾರು ಶಿಕ್ಷಕರಿಗೆ ಮಾದರಿಯಾಗಿದ್ದಾರೆ.

ಕಚೇರಿಯ ಶೌಚಾಲಯವನ್ನು ಪೊರಕೆ ಹಿಡಿದು ಸ್ವಚ್ಚಗೊಳಿಸುವ ಮೂಲಕ ಮಾದರಿಯಾಗಿದ್ದರಲ್ಲದೆ, ಶಿಕ್ಷಕರು ಹಾಗೂ ಸರ್ಕಾರಿ ಇಲಾಖೆಗಳಲ್ಲಿನ ಅಧಿಕಾರಿಗಳು ಶೌಚಾಲಯಗಳನ್ನು ಸ್ವಚ್ಛ ಗೊಳಿಸಿಕೊಳ್ಳುವುದರಿಂದ ಸ್ವಚ್ಚ ಭಾರತ್ ಅಭಿಯಾನಕ್ಕೆ ಬೆಂಬಲ ವ್ಯಕ್ತಪಡಿಸಿದಂತೆ.

ಸ್ವಚ್ಚ ಭಾರತ ಕಲ್ಪನೆ ಪ್ರಧಾನಿ ಮೋದಿ ಅವರಿಂದ ಆರಂಭವಾಗಿದ್ದು, ಅಧಿಕಾರಿಗಳು ಅದನ್ನ ಸಮರ್ಪಕವಾಗಿ ಮೈಗೂಡಿಸಿಕೊಳ್ಳುವಂತೆ ಸಲಹೆ ಮಾಡಿದ್ದಾರೆ. ಇನ್ನೂ ಒಂದು ವರ್ಷದ ಹಿಂದೆ ಸರ್ಕಾರಿ ಶಾಲೆಯ ಶೌಚ್ಚಾಲಯವನ್ನ ಸ್ವಚ್ಚ ಮಾಡುವ ಮೂಲಕ ಬಂಗಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆಂಪಯ್ಯ ಮಾದರಿಯಾಗಿದ್ದರು, ಅದರಂತೆ ಕೋಲಾರ ಬಿಇಓ ಶೌಚಾಲಯ ಸ್ವಚ್ಚ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.

ಇನ್ನೂ ಬಿಇಓ ನಾಗರಾಜ್‌ಗೌಡ ಅವರ ಶೌಚ್ಚಾಲಯ ಸ್ವಚ್ಚ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಶಿಕ್ಷಕರು ಸೇರಿದಂತೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights