ಸಕ್ಕರೆನಾಡು ಮಂಡ್ಯದಲ್ಲಿ ಕಬ್ಬು ಬೆಳೆಗಾರರ ಮೇಲೆ ಜೀತದ ದೌರ್ಜನ್ಯ……

ಮಂಡ್ಯ ಜಿಲ್ಲೆಯಲ್ಲಿ ಕಬ್ಬು ಬೆಳೆದ ರೈತರ ಸ್ಥಿತಿ‌ ದಿನೇ ದಿನೇ ಶೋಚನೀಯವಾಗ್ತಿದೆ.‌ ಜಿಲ್ಲೆಯಲ್ಲಿನ ಎರಡು ಸಕ್ಕರೆ ಕಾರ್ಖಾನೆಗಳು ಸ್ಥಗಿತಗೊಂಡಿರೋದ್ರಿಂದ ಜಿಲ್ಲೆಯಲ್ಲಿ ೪೦ ಸಾವಿರ ಎಕ್ಟೇರ್ ಕಬ್ಬು ಜಮೀನಿನನಲ್ಲಿ ಹಾಗೆ ಇದೆ. ಕಾರ್ಖಾನೆಗೆ ಕಬ್ಬು ಸಾಗಿಸಲು ರೈತರಿಗೆ ಪರ್ಮಿಟ್ ಸಿಗದೆ ಒದ್ದಾಡ್ತಾ ಇದ್ದಾರೆ. ರೈತರ ಈ ಅಸಹಾಯಕತೆಯನ್ನು ದುರುಪಯೋಗ ಸಕ್ಕರೆ ಕಾರ್ಖಾನೆಯ ಫೀಲ್ಡ್ ಮ್ಯಾನ್ ಓರ್ವ ಪರ್ಮಿಟ್ ಕೊಡಿಸುವುದಾಗಿ ಹೇಳಿ ರೈತರಿಂದ ತನ್ನ ಜಮೀನಿನ ಜೀತ ಮಾಡಿಸಿಕೊಂಡಿದ್ದಾರೆ ಅನ್ನೋ ಆರೋಪ ಸಕ್ಕರೆನಾಡು ಮಂಡ್ಯದಲ್ಲಿ ಕೇಳಿ ಬಂದಿದೆ.

ಹೌದು! ಸಕ್ಕರೆನಾಡು ಮಂಡ್ಯದಲ್ಲಿ ಕಬ್ಬು ಬೆಳೆದ ರೈತರ ಸ್ಥತಿ ಅಧೋಗತಿಗೆ ಇಳಿದಿದೆ. ಜಿಲ್ಲೆಯ ಮೈಶುಗರ್ ಮತ್ತು PSSK ಕಾರ್ಖಾನೆ ಸ್ಥಗಿತಗೊಂಡಿದ್ದು ಹಿಲ್ಲೆಯಲ್ಲಿ ೪೦ ಲಕ್ಷ ಹೆಕ್ಟೇರ್ ಕಬ್ಬು ಹಾಗೇ ಇದೆ. ಕಟಾವು ಮಾಡಬೇಕಿದ್ದ ಕಬ್ಬು ಸೂಲಂಗಿ ಹೂ ಕಡೆದು ೨೦ ತಿಂಗಳು ಆಗಿದ್ರು ರೈತರ ಬೆಳೆದ ಕಬ್ಬಿಗೆ ಪರ್ಮಿಟ್ ಸಿಗ್ತಿಲ್ಲ.ಇದ್ರಿಂದ ಕಬ್ಬು ಬೆಳೆದ ರೈತ ಚಿಂತಾಕ್ರಾಂತನಾಗಿದ್ದು ದಿಕ್ಕು ತೋಚದೆ ಕುಳಿತ್ತಿದ್ದಾನೆ. ರೈತರ ಆಸಹಾಯಕ ಸ್ಥಿತಿಯನ್ನು ದುರಪಯೋಗ ಪಡೊಸಿಕೊಂಡ ಮದ್ದೂರು ಚಾಂಷುಗರ್ ಸಕ್ಕರೆ ಕಾರ್ಖಾನೆಯ ಫೀಲ್ಡ್ ಮ್ಯಾನ್ ಮಹೇಶ ಎಂಬಾತ ಕೆಲ ರೈತರಿಂದ ಕಬ್ಬಿಗೆ ಪರ್ಮಿಟ್ ಕೊಡಿಸುವುದಾಗಿ ಹೇಳಿ ತನ್ನ ಜಮೀನಿನಲ್ಲಿ ಬೆಳೆದಿದ್ದ ಭತ್ತದ ಬೆಳೆಯ ಕುಯ್ಲು ಮಾಡಿಸಿಕೊಂಡಿರೋ ಆರೋಪ ಕೇಳಿ ಬಂದಿದೆ .ಈ ಮೂಲಕ ಕಾರ್ಖಾನೆಯ ಈ ಫೀಲ್ಡ್ ಆಫೀಸರ್ ಕಬ್ಬು ಬೆಳೆದ ರೈತರ ಮೇಲೆ ಶೋಷಣೆ ಮಾಡ್ತಿದ್ದು ಸಾರ್ಜನಿಕರ ಆಕ್ರೋಶಕ್ಕೆ ಕಾರಣವಾಗಿದೆ‌.

ಇನ್ನು ಜಿಲ್ಲೆಯಲ್ಲಿ ಉತ್ತಮವಾಗಿ ಕೆಲಸ ಮಾಡ್ತಿದ್ದ ಮಂಡ್ಯದ ಮೈಷುಗರ್ ಹಾಗು ಪಾಂಡವಪುರದ PSSK ಸಕ್ಕರೆ ಕಾರ್ಖಾನೆ ಸ್ಥಗಿತದ ಬಳಿಕ ಜಿಲ್ಲೆಯ ಕಬ್ಬು ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.ಬೆಳೆದು ನಿಂತು ೧೬ ತಿಂಗಳಾದ್ರು ಕಬ್ಬು ಕಟಾವು ಸಾಧ್ಯವಾಗದೆ ಕಬ್ಬಿನಲ್ಲಿ ಸೂಲಿಂಗಿ ಬೆಳೆಯುತ್ತಿದೆ.ಇಷ್ಟಾದ್ರು ಸರ್ಕಾರವಾಗಲಿ‌ ಜಿಲ್ಲಾಡಳಿತವಾಗ್ಲಿ ಕಾರ್ಖಾನೆಯನ್ನು ಪುನರಾರಾಂಭಿಸದೆ ದಿನ ದೂಡ್ತಿರೋದು ಜಿಲ್ಲೆಯ ರೈತರ ಶೋಷಣೆಗೆ ಕಾರಣವಾಗಿದೆ. ಜಿಲ್ಲೆಯ ರೈತರ ಸಮಸ್ಯೆ ಬಗೆ ಹರಿಸದಿದ್ದರೆ ರೈತರೆಲ್ಲರು ಒಟ್ಟಾಗಿ ಮತ್ತೆ ಬೀದಿಗಿಳಿಯುವ ಬಗ್ಗೆ ರೈತ ಸಂಘದ ನಾಯಕರುರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಒಟ್ಟಾರೆ ಮಂಡ್ಯ ಜಿಲ್ಲೆಯ ಕಬ್ಬು ಬೆಳೆಗಾರ ಸಮಸ್ಯೆ‌ ದಿನದಿಂದ ದಿನಕ್ಕೆ ಉಲ್ಬಣಿಸಿದ್ದು,ಒಂದಲ್ಲ ಒಂದು ರೀತಿ ಶೋಷಣೆಗೆ ದಾರಿ ಮಾಡಿಕೊಡ್ತಿದೆ. ಇನ್ನಾದ್ರು ಸರ್ಕಾರ ಮತ್ತು ಜನಪ್ರತಿನಿಧಿಗಳು ಜಿಲ್ಲೆಯ ಕಬ್ಬು ಬೆಳೆಗಾರ ರೈತರ ಸಮಸ್ಯೆ ಬಗೆ ಹರಿಸಿ ರೈತರ ಶೋಷಣೆ ತಪ್ಪಿಸಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights