ಸಿಎಎ ವಿರುದ್ಧ, ಪರ ಧರಣಿ ವೇಳೆ ಬುಗಿಲೆದ್ದ ಹಿಂಸಾಚಾರ : ಸಾವಿನ ಸಂಖ್ಯೆ 9ಕ್ಕೆ ಏರಿಕೆ!
ಸಿಎಎ ವಿರುದ್ಧ ಪರ ಧರಣಿ ವೇಳೆ ಬುಗಿಲೆದ್ದ ಹಿಂಸಾಚಾರಕ್ಕೆ ಗಲಭೆಯಲ್ಲಿ 8 ಜನ ನಾಗರೀಕರು ಹಾಗೂ ಓರ್ವ ಪೇದೆ ಸಾವನ್ನಪ್ಪಿದ್ದು ದೆಹಲಿಯ 10 ಪ್ರದೇಶಗಳಲ್ಲಿ 144 ಸೆಕ್ಷನ್ ಜಾರಿ ಮಾಡಲಾಗಿದೆ.
ಸೂಕ್ಷ್ಮ ಪ್ರದೇಶಗಳಲ್ಲಿ 13 ಪ್ಯಾರಾ ಮಿಲಿಟರಿ ಪಡೆ ಮತ್ತು 1 ಸಾವಿರ ಶಸ್ತ್ರಸಜ್ಜಿತ ಪೊಲೀಸರನ್ನು ನಿಯೋಜಿಸಲಾಗಿದೆ. ಇಂದು ದುಷ್ಕರ್ಮಿಗಳು ಬಂದೂಕು ಹಿಡಿದುಕೊಂಡು ಕಂಡವರ ಮೇಲೆ ಹಲ್ಲೆ ಮಾಡಿ ದೃಶ್ಯಗಳು ಸೆರೆಯಾಗಿವೆ.
ದೆಹಲಿಯ ಭಜನ್ಪುರ, ಮೌಜ್ಪುರ ಮತ್ತು ಜಾಫರಾಬಾದ್ಗಳಲ್ಲಿ ಸಿಎಎ ಪರ ಮತ್ತು ವಿರೋಧಿ ಪ್ರತಿಭಟನಾಕಾರರ ನಡುವೆ ಸಂಘರ್ಷ ನಡೆದಿದ್ದು, ಅದು ಭಾರೀ ಹಿಂಸಾಚಾರಕ್ಕೆ ತಿರುಗಿದೆ.
ಹಿಂಸಾಚಾರದ ವಿಡಿಯೋಗಳು ವೈರಲ್ ಆಗಿವೆ. ವಾಹನ, ಆಟೋ ರಿಕ್ಷಾಗಳಿಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದನ್ನು ಒಂದು ವಿಡಿಯೋದಲ್ಲಿ ನೋಡಬಹುದು. ಹಾಗೇ ಇನ್ನೊಂದು ವಿಡಿಯೋದಲ್ಲಿ ಕೆಂಪು ಶರ್ಟ್ ಹಾಕಿಕೊಂಡವನೋರ್ವ ಪೊಲೀಸರತ್ತ ಗನ್ ತೋರಿಸುವುದನ್ನು ನೋಡಬಹುದು. ಪರಿಸ್ಥಿತಿ ನಿಯಂತ್ರಣದ ವೇಳೆ ಪೊಲೀಸ್ ಮುಖ್ಯಪೇದೆಯೋರ್ವರು ಮೃತರಾಗಿದ್ದಾಗಿ ವರದಿಯಾಗಿದೆ.

