ಸಿದ್ದರಾಮಯ್ಯ ಓರ್ವ ಬೊಗಳೆ ದಾಸ – ಡಿಸಿಎಂ ಗೋವಿಂದ ಕಾರಜೋಳ ಲೇವಡಿ
ಸಿದ್ದರಾಮಯ್ಯ ಓರ್ವ ಬೊಗಳೆ ದಾಸ ಎಂದು ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಡಿಸಿಎಂ ಗೋವಿಂದ ಕಾರಜೋಳ ಲೇವಡಿ ಮಾಡಿದ್ದಾರೆ.
ಸಿದ್ದರಾಮಯ್ಯ ಐದು ವರ್ಷ ಸಿಎಂ ಆಗಿ ಏನು ಮಾಡಿದ್ದಾರೆ ಎಂಬುದನ್ನು ಹೇಳಬೇಕು. ಕಾಂಗ್ರೆಸ ಜನರಿಗೆ ಮಾಡಿರುವ ಮೋಸಗಳಲ್ಲಿ ಸಿದ್ದರಾಮಯ್ಯ ಕೂಡ ಪಾಲುದಾರ. ಸಿದ್ದರಾಮಯ್ಯ ಕಾಲದಲ್ಲಿಯೂ ನೆರೆ, ಬರ ಬಂದಿತ್ತು. ಅನೇಕ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದರು. ಆಗ ಸಿದ್ದರಾಮಯ್ಯ ಏನ ಮಾಡಿದ್ದಾರೆ?
ಯಡಿಯೂರಪ್ಪ ಸಿಎಂ ಆಗಿದ್ದಾಗ ಒಬ್ಬರೇ ಇದ್ದರೂ ಪ್ರವಾಹ ಬಂದಾಗ ಓಡಾಡಿದ್ದಾರೆ. ಸಿದ್ದರಾಮಯ್ಯ ತಾವು ಸಿಎಂ ಆಗಿದ್ದಾಗ ಅಥಣಿ ನೆನಪಾಗಿರಲಿಲ್ಲ. ಈಗ ಉಪಚುನಾವಣೆ ಬಂದಾಗ ಅವರಿಗೆ ಅಥಣಿ ನೆನಪಾಗುತ್ತಿದೆ. ಕಾಂಗ್ರೆಸ್ನವರು ಅಂಬೇಡ್ಕರರು ತೀರಿಕೊಂಡಾಗ ಅಂತ್ಯಸಂಸ್ಕಾರ ಮಾಡಲು 6 ಅಡಿ ಜಾಗ ಕೊಡಲಿಲ್ಲ. ಕಾಂಗ್ರೆಸ್ಸಿಗೆ ಅಂಬೇಡ್ಕರ, ಸಂವಿಧಾನ ಮತ್ತು ದಿನ ದಲಿತರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಕಾಂಗ್ರೆಸ್ ಆ ನೈತಿಕತೆ ಕಳೆದುಕೊಂಡಿದೆ.
ಕಾಂಗ್ರೆಸ್ನವರು ಅಂದ್ರೆ ಬೊಗಳೆ ದಾಸರು. ಕಾಂಗ್ರೆಸ್ಸಿಗೆ ಈಗ ವೋಟ್ ಬ್ಯಾಂಕ್ ಉಳಿದಿಲ್ಲ. ಹೀಗಾಗಿ ಅವರು ಹತಾಶರಾಗಿದ್ದಾರೆ. ದಲಿತರು, ಅಲ್ಪಸಂಖ್ಯಾತರು ಕಾಂಗ್ರೆಸ್ನಿಂದ ದೂರು ಹೋಗಿದ್ದಾರೆ. ಇದರಿಂದ ಕಾಂಗ್ರೆಸ್ ಹುಚ್ಚಾಗಿ ಮೈ ಪರಚಿಕೊಳ್ತಿದೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಂಗಿ ಹರಕೊಂಡ ಓಡಾಡುತ್ತೆ. 12 ಕ್ಷೇತ್ರ ಗೆದ್ದರೆ ಸಿದ್ದರಾಮಯ್ಯರಿಗೆ ಒಂದು ತೊಲೆ ಬಂಗಾರ ನೀಡಿ ಸನ್ಮಾನ ಮಾಡ್ತೇವಿ. ಅಥಣಿಯಲ್ಲಿ ತೊಲೆ ಬಂಗಾರ ಹಾಕಿ ಅವರನ್ನು ಭರ್ಜರಿ ಮೆರವಣಿಗೆ ಮಾಡತೇವಿ. ಅಷ್ಟು ಕ್ಷೇತ್ರ ಗೆದ್ದು ತೋರಿಸಲಿ ನಾನು ಸವದಿ ಸೇರಿ ಸಿದ್ದರಾಮಯ್ಯ ಮೆರವಣಿಗೆ ಮಾಡುತ್ತೇವೆ ಎಂದು ಸವಾಲು ಹಾಕಿದ್ದಾರೆ.

