ಸಿನಿಮಿಯ ರೀತಿಯಲ್ಲಿ ಮುರಿದು ಬಿದ್ದ ಮದುವೆ : ತಾಳಿ ಕಟ್ಟುವ ಕಡೆ ಕ್ಷಣದಲ್ಲಿ ಒಲ್ಲೆ ಎಂದ ಯುವತಿ!

ತಾಳಿ ಕಟ್ಟುವ ಕಡೆ ಕ್ಷಣದಲ್ಲಿ ಮದುವೆಗೆ ಯುವತಿ ಒಲ್ಲೆ ಎಂದ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದ ಚರ್ಚ್ ನಲ್ಲಿ ನಡೆದಿದೆ.

ಕ್ರಿಶ್ಚಿಯನ್ ಸಮುದಾಯ ವೀಣಾ ಕಡೇ ಕ್ಷಣದಲ್ಲಿ ಮದುವೆ ನಿರಾಕರಿಸಿದ ವಧು. ವೀಣಾಗೇ ಮೈಸೂರಿನ ಇಮ್ಯಾನುಯಲ್ ಜೊತೆ ನೆನ್ನೆ ಮದುವೆ ನಿಶ್ವಯವಾಗಿತ್ತು. ವೀಣಾ ಕಳೆದ ಎರಡು ವರ್ಷಗಳಿಂದ ಹರ್ಷಾ ಹಿಂದೂ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಯುವತಿ ಮನೆಯಲ್ಲಿ ಈಕೆಯ ಪ್ರೀತಿ ವಿಷಯ ತಿಳಿದು ಮದುವೆ ಮಾಡಲು ನಿರ್ಧರಿಸಿದ್ರು.

ಪ್ರಾಪ್ತ ವಯಸ್ಸಾಗಿರದ ಕಾರಣ ಪೋಷಕರು ನಿಗದಿ ಮಾಡಿದ್ದ ಮದುವೆಗೆ ವೀಣಾ ಒಪ್ಪಿದ್ದಳು. ಕಳೆದ ಎರಡು ತಿಂಗಳ ಹಿಂದೆ ನಿಶ್ವಿಥಾರ್ಥ ನಡೆದು ನೆನ್ನೆ ಮದುವೆ ನಿಗಧಿಯಾಗಿತ್ತು.

ಚರ್ಚ್ ನಲ್ಲಿ ಮದುವೆ ದಿನ ವೀಣಾಗೆ ೧೮ ವರ್ಷ ಪೂರ್ಣವಾಗಿತ್ತು. ನೆನ್ನೆ ಸಂಪ್ರದಾಯದಂತೆ ಮದುವೆ ಶಾಸ್ತ್ರಗಳು ಮುಗಿದು ತಾಳಿ ಕಟ್ಟಲು ಸಿದ್ದತೆ ಮಾಡಲಾಗಿತ್ತು. ಕ್ರಿಶ್ಚಿಯನ್ ಸಂಪ್ರದಾಯದಂತೆ ಧರ್ಮಗುರು ಫಾಧರ್ ಯುವತಿಯನ್ನು ಮದುವೆ ಒಪ್ಪಿಗೆಯ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಈ ವೇಳೆ ನನಗೆ ಈ ಮದುವೆ ಇಷ್ಟವಿಲ್ಲವೆಂದು ವಧು ಹೇಳಿದ್ದಾಳೆ.

ತಾನು ಹಿಂದು ಯುವಕನನ್ನು ಪ್ರೀತಿಸುತ್ತಿದ್ದು ಆತನನ್ನು ಮದುವೆಯಾಗುತ್ತೇನೆಂದು ಫಾಧರ್ ಮುಂದೆ ಹೇಳಿದ್ದಾಳೆ. ತಾನು ಪ್ರೀತಿಸುತ್ತಿದ್ದ ಯುವಕನನ್ನು ಚರ್ಚಿಗೆ ಕರೆಸಿಕೊಂಡು ಯುವತಿ ಮದುವೆಗೆ ಸಮ್ಮತಿಸಲು ಫಾಧರ್ ಮುಂದೆ ಮನವಿ ಮಾಡಿದ್ದಾಳೆ.

ಇದ್ರಿಂದ ಕೆಲಕಾಲ ಚರ್ಚಿನಲ್ಲಿ ಉಂಟಾದ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಕೂಡಲೇ ಸ್ಥಳಕ್ಕೆ ಬಂದ ಪಾಂಡವಪುರ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದ್ರು. ಬಳಿಕ ಯುವಕ ಯುವತಿಯನ್ನು ರಕ್ಷಣೆ ಮಾಡಿ ಠಾಣೆಗೆ ಪೊಲೀಸರು ಕರೆದೊಯ್ದಿದ್ದಾರೆ.

ಠಾಣೆಯಲ್ಲಿ ಇಬ್ಬರ ಹೇಳಿಕೆ ಪಡೆದು ಎರಡು ಕಡೆಯ ಪೋಷಕರನ್ನು ಕರೆದಾಗ ಪೊಲೀಸರು ಠಾಣೆಗೆ ಬರಲು ನಿರಾಕರಿಸಿದ್ದಾರೆ. ಯುವಕನನ್ನು ಠಾಣೆಯಲ್ಲೇ ಇಟ್ಟುಕೊಂಡು ಯುವತಿಯನ್ನು ಮಂಡ್ಯದ ಸಾಂತ್ವನ‌ ಕೇಂದ್ರಕ್ಕೆ ರವಾನೆ ಮಾಡಲಾಗಿದೆ. ಸೀನಿಮೀಯ ರೀತಿಯಲ್ಲಿ ಕಡೇ ಕ್ಷಣದಲ್ಲಿ ಪ್ರೀತಿಗಾಗಿ ಮುರಿದು ಬಿದ್ದ ಮದುವೆ ಇದಾಗಿದ್ದು, ಮದುವೆಗೆ ಬಂದವರೆಲ್ಲಾ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights