ಸೆ.25ರಂದು ಪ್ರಕಟವಾಗಲಿರುವ ಡಿ.ಕೆ.ಶಿವಕುಮಾರ್ ಜಾಮೀನು ಅರ್ಜಿಯ ಆದೇಶ….

ಅಕ್ರಮ ಹಣ ಸಂಗ್ರಹ ಹಾಗೂ ವರ್ಗಾವಣೆ ಸಂಬಂಧಿಸಿದಂತೆ ಬಂಧಿಯಾಗಿರುವ ಮಾಜಿ ಸಚಿವ ಡಿಕೆ ಶಿವಕುಮಾರ್ ಅವರ ಜಾಮೀಜು ಅರ್ಜಿ ವಿಚಾರಣೆ ಸೆ.25ಕ್ಕೆ ಮುಂದೂಡಲಾಗಿದೆ.

ಡಿಕೆ ಶಿವಕುಮಾರ್ ಪರ ವಕೀಲ ಅಭಿಷೇಕ್ ಮನುಸಿಂಘ್ವಿ ವಾದ ಮಂಡಿಸಿ, ಇಡಿ ಊಹಾತ್ಮಕದಿಂದ ಹೊರ ಬಂದು ಕಥೆ ಹೇಳುವದನ್ನು ನಿಲ್ಲಿಸಬೇಕು. ಇಡಿ ಸುಳ್ಳನ್ನು ಆರೋಪಿ ಸತ್ಯ ಎಂದು ಒಪ್ಪಿಕೊಳ್ಳಬೇಕಾ. ಇಡಿ ವಿಚಾರಣೆ ವೇಳೆ ವಿಫಲವಾಗಿದೆ. ಅರ್ಥ ಕಕ್ಷಿದಾರರಿಗೆ ಜಾಮೀನು ನೀಡಬೇಕು. 18 ದಿನ ನೇರವಾಗಿ ವಿಚಾರಣೆ ನಡೆಸಬೇಕಿದೆ. ಡಿಕೆಶಿ ದೇಶ ಬಿಟ್ಟು ಪರಾರಿಯಾಗುವಂತಹ ವ್ಯಕ್ತಿಯೂ ಅಲ್ಲ. ಅಕ್ರಮವನ್ನು ವಿಚಾರಣೆ ವೇಳೆ ಸಾಬೀತು ಮಾಡಲು ವಿಫಲವಾಗಿದೆ. ಹೇಳಿಕೆಗಳು ಬದಲಾಗಿದ್ರೆ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಿ. ಇಡಿ ಆರೋಪ ಕೇವಲ ಮೌಖಿಕವಾಗಿದ್ದು, ಇಡಿ ವಾದ ಸಿನಿಮಾ ಕಥೆಯಾಗಿದೆ

ಸಿಂಘ್ವಿ ಅವರ ವಾದದ ಬಳಿಕ ಡಿಕೆಶಿ ಪರ ಮತ್ತೋರ್ವ ವಕೀಲರಾದ ಮುಕುಲ್ ರೋಹ್ಟಗಿ ತಮ್ಮ ವಾದ ಆರಂಭಿಸಿ, ನಮ್ಮ ಕಕ್ಷಿದಾರ ಏಳು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಗೌರವಾನ್ವಿತ ವ್ಯಕ್ತಿ ಜನಪ್ರತಿನಿಧಿಯಾಗಿದ್ದಾರೆ. ಕಕ್ಷಿದಾರರ ಮನೆಯಲ್ಲಿ ಕೇವಲ 41 ಲಕ್ಷ ರೂ. ಮಾತ್ರ ದೊರಕಿದೆ. ಈ ವೇಳೆ ರೋಹ್ಟಗಿ ಸುಪ್ರೀಂ ಕೋರ್ಟಿನ ತೀರ್ಪುಗಳನ್ನು ಓದಿದರು. ಕಕ್ಷಿದಾರರ ಮನೆಯಲ್ಲಿ ವಶಪಡಿಸಿಕೊಂಡಿರುವ 41 ಲಕ್ಷ ರೂ.ಯಿಂದ ರಾಷ್ಟ್ರದ ಅರ್ಥಿಕತೆ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದರು.

ಸುದೀರ್ಘವಾದ ವಾದ, ಪ್ರತಿವಾದ ಆಲಿಸಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಅಜಯ್ ಕುಮಾರ್ ಕುಹಾರ್ ಸೆ.25 ರಂದು ಮಧ್ಯಾಹ್ನ 3.30ಕ್ಕೆ ಆದೇಶ ಪ್ರಕಟಿಸುವುದಾಗಿ ತಿಳಿಸಿದರು. ಡಿಕೆ ಶಿವಕುಮಾರ್ ಪರ ವಕೀಲ ಅಭಿಷೇಕ್ ಮನುಸಿಂಘ್ವಿ ವಾದ ಮಂಡಿಸಿ ಇಡಿ ವಾದ ವಾದ ಕೇವಲ ಊಹಾತ್ಮಕ, ಸಿನಿಮಾ ಸ್ಟೋರಿಯಂತಿದೆ. ಹೀಗಾಗಿ ಜಾಮೀನು ಮಂಜೂರು ಮಾಡಿ ಎಂದು ಕೇಳಿಕೊಂಡರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights