ಸ್ವಾವಲಂಬಿ ಹೆಜ್ಜೆಗಳನ್ನಿಡುತ್ತಿರುವ ಭಾರತವನ್ನು 70 ವರ್ಷಗಳಿಂದ ಹಿಂಬಾಲಿಸುತ್ತಿದ್ದೇವೆ: ರಷ್ಯಾ ರಾಯಭಾರಿ

ಎಲ್ಲಾ ಕ್ಷೇತ್ರಗಳಲ್ಲಿ ಸ್ವಾವಲಂಬನೆ ಸಾಧಿಸುವತ್ತ ಹೆಚ್ಚುಗಳನ್ನು  ಇಡುತ್ತಿರುವ ಭಾರತದ ಹೆಜ್ಜೆಗಳನ್ನು ಕಳೆದ 70 ವರ್ಷಗಳಿಂದ ರಷ್ಯಾ ಹತ್ತಿರದಿಂದ ಗಮನಿಸುತ್ತಿದೆ ಎಂದು ರಷ್ಯಾದ ರಾಯಭಾರಿ ನಿಕೋಲಾಯ್ ಕುದ್ಶೇವ್ ಹೇಳಿದ್ದಾರೆ.

ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ರಷ್ಯಾ ಅತ್ಯಂತ ನಂಬಿಗಸ್ಥ ಪಾಲುದಾರ ರಾಷ್ಟ್ರವಾಗಿದ್ದು, ಭಾರತ-ರಷ್ಯಾ ನಡುವಿನ ಈ ಸಹಭಾಗಿತ್ವ ಹೀಗೆಯೇ ಮುಂದುವರೆಯಲಿದೆ ಎಂದು ನಿಕೋಲಾಯ್ ಭರವಸೆಯ ಆಶಯ ವ್ಯಕ್ತಪಡಿಸಿದ್ದಾರೆ.

ಭಾರತ ಸ್ವಾವಲಂಬಿಯಾಗುವತ್ತ ರಷ್ಯಾ ನಿರಂತರವಾಗಿ ಸಹಾಯ ಮಾಡುತ್ತಲೇ ಬಂದಿದ್ದು, ಈ ಸಂಬಂಧ ಭವಿಷ್ಯದಲ್ಲಿ ಮತ್ತಷ್ಟು ಗಟ್ಟಿಯಗಲಿದೆ ಎಂದು ನಿಕೋಲಾಯ್ ಭರವಸೆ ವ್ಯಕ್ತಪಡಿಸಿದ್ದಾರೆ.

ಭಾರತ ಇದೀಗ ಎಲ್ಲಾ ಕ್ಷೇತ್ರಗಳಲ್ಲೂ ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದು, ಸ್ವಾವಲಂಬನೆಯತ್ತ ದೃಢ ಹೆಜ್ಜೆಗಳನ್ನಿರಿಸುವುದು ಸಂತಸದ ಸಂಗತಿ ಎಂದು ನಿಕೋಲಾಯ್ ಹೇಳಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights