ಹುಣಸೂರು ಉಪಚುನಾವಣೆಯಲ್ಲಿ ಬೀಡಿ ಕಥೆ ಹೇಳಿದ ಕುಮಾರ‌ಸ್ವಾಮಿ…

ಹುಣಸೂರು ಉಪಚುನಾವಣೆ ಹಿನ್ನೆಲೆ ಜೆಡಿಎಸ್‌ ಅಭ್ಯರ್ಥಿ ಪರ ಮಾಜಿ‌ ಸಿಎಂ ಕುಮಾರ‌ಸ್ವಾಮಿ ಭರ್ಜರಿ ಕ್ಯಾಂಪೈನ್ ನಡೆಸಿದ್ದಾರೆ. ಹುಣಸೂರಿನ ಧರ್ಮಾಪುರಲ್ಲಿ ಮತಯಾಚನೆ ಮಾಡಿದ ಕುಮಾರಸ್ವಾಮಿ, ಅಭ್ಯರ್ಥಿ ಜೊತೆ ರೋಡ್ ಶೋ  ಮಾಡಿದರು. ಕುಮಾರ‌ಸ್ವಾಮಿಗೆ ಧರ್ಮಾಪುರ ಗ್ರಾಮಸ್ಥರಿಂದ ಭರ್ಜರಿ ಸ್ವಾಗತ ಕೋರಲಾಯಿತು. ಕುಮಾರ‌ಸ್ವಾಮಿ‌ಗೆ ಅಭ್ಯರ್ಥಿ ಸೋಮಶೇಖರ್, ಶಾಸಕ ಅಶ್ವಿನ್‌ಕುಮಾರ್, ಪರಿಷತ್ ಸದಸ್ಯ ಭೋಜೆಗೌಡ ಸಾಥ್ ನೀಡಿದರು.

ಹುಣಸೂರು ಧರ್ಮಾಪುರದಲ್ಲಿ ಉಪಚುನಾವಣೆ ಭಾಷಣದ ವೇಳೆ ಮಾಜಿ ಸಿಎಂ ಕುಮಾರಸ್ವಾಮಿ ಬೀಡಿ ಕಥೆ ಹೇಳಿದ್ದಾರೆ. ಈ ಕಥೆಗೆ ಬಿಜೆಪಿಯವರನ್ನ ಹೋಲಿಕೆ ಮಾಡಿದ್ದಾರೆ. ಕಥೆ ಏನು ಗೊತ್ತಾ..? ‘ಬೀಡಿ ಮಾರಾಟಕ್ಕೆ ವ್ಯಾಪಾರಿಯೋಬ್ಬ ಕಥೆ ಕಟ್ಟುತ್ತಾನೆ. ಬೀಡಿ ಸೇಸಿದ್ರೆ ನಿಮ್ಮ ಮನೆಗೆ ಕಳ್ಳ ಬರೋಲ್ಲ, ನಾಯಿ ಕಚ್ಚೋಲ್ಲ, ಕಷ್ಟವೇ ಬರೋಲ್ಲ ಅಂತಾನೆ. ಬೀಡಿ ಸೇದಿ ಕೆಮ್ಮು ಬಂತು, ಕೈಗೆ ಕೋಲು ಬಂತು ಕೊನೆಗೆ ಸತ್ತೆ ಹೋದ.ಬೀಡಿ ಮಾರಾಟಗಾರ ಹೇಳಿದ್ದು ಸತ್ಯ ಆಯ್ತು ಆದ್ರೆ ಅದು ವಾಸ್ತವ ಅಲ್ಲ. ಹಾಗೆ ಬಿಜೆಪಿಯವರು ನಿಮಗೆ ಬಣ್ಣ ಬಣ್ಣದ ಕಥೆ ಕಟ್ಟುತ್ತಾರೆ. ಅವರು ಬರ್ತಾರೆ ಭರವಸೆ ಕೊಟ್ಟು ವಾಪಸ್ ಹೋಗ್ತಾರೆ. ತಾನು ಖರೀದಿಯಾದ ರೀತಿಯಲ್ಲೆ ನಿಮ್ಮನ್ನು ಖರೀದಿ ಮಾಡಲು ವಿಶ್ವನಾಥ್ ಬರ್ತಾರೆ. 2000 ರೂ ನೋಟು ಹಿಡ್ಕೊಂಡು ಬರ್ತಾರೆ. ಅವರನ್ನ ನಂಬಬೇಡಿ ಎಂದು ಹೇಳಿದ್ದಾರೆ.

ನಾನೇನು ಕಾಂಗ್ರೆಸ್ ಮನೆ ಬಾಗಿಲಿಗೆ ಸಿಎಂ ಮಾಡಿ ಅಂತ ಹೋಗಿರಲಿಲ್ಲ. ಅವರಿಗೆ ಬಹುಮತ ಬರಲಿಲ್ಲ ಅಂತ ಅವರೇ ಬಂದ್ರು. ನಮ್ಮ‌ ತಂದೆ ನನ್ನ ಮಗನಿಗೆ ಹೃದಯ ಚಿಕಿತ್ಸೆ ಆಗಿದೆ ನೀವೆ ಯಾರಾದ್ರು ಸಿಎಂ ಆಗಿ ಅಂದ್ರು. ಆದ್ರು ರಾಹುಲ್ ಹಾಗೂ ಸೋನಿಯಾಗಾಂಧಿ ಹಠ ಮಾಡಿ ನನಗೆ ಸಿಎಂ ಪಟ್ಟ ಕಟ್ಟಿದ್ರು. ಆಗ ನಾನು ಕಾಂಗ್ರೆಸ್ ಆಫರ್ ಒಪ್ಪಿಕೊಂಡಿದ್ದು ಜನರಿಗೆ ಕೊಟ್ಟಿದ್ದ ಭರವಸೆ ಈಡೇರಿಸಲಿ. ಅದು ಸಹ ಸಾಲ ಮನ್ನ ಮಾಡಲು ಸಿಎಂ ಆಗಲು ಒಪ್ಪಿದೆ. ಸಿಎಂ ಆದ ತಕ್ಷಣ 40 ಸಾವಿರ ಕೋಟಿಯಷ್ಟು ಸಾಲ ಮನ್ನ ಮಾಡಿದೆ‌. ಅಂದ್ರೆ ಸರ್ಕಾರ ಮನಸ್ಸು ಮಾಡಿದ್ರೆ ಏನು ಬೇಕಾದ್ರು ಮಾಡಬಹುದು. ಹಾಗಾಗಿ ಸ್ಥಿರ ಸರ್ಕಾರಕ್ಕೆ ಮತ ಹಾಕಿ ಎಂದರು.

ನಾನು ಸಿಎಂ ಆಗಿದ್ದಾಗ ಬಿಜೆಪಿಯಿಂದ 10-15 ಜನರನ್ನ ಸೆಳೆಯೋಕೆ ಆಗ್ತಿರಲಿಲ್ವಾ. ನನ್ನ‌ ಬಳಿ ಬಂದಂತ ಬಿಜೆಪಿ ನಾಯಕರನ್ನ ನಾನು ವಾಪಸ್ ಕಳುಹಿಸಿದೆ. ನನಗೆ ಅಧಿಕಾರ ಮುಖ್ಯವಲ್ಲ ಅಂತ ಬಂದಿದ್ದ ಬಿಜೆಪಿ ಶಾಸಕರನ್ನ ವಾಪಸ್ ಕಳುಹಿಸಿದೆ. ನಾನು ಅಂತ ಮನುಷ್ಯ. ಆದ್ರೆ ಯಡ್ಯೂರಪ್ಪ ಬೇರೆ ಪಕ್ಷದವರನ್ನ ಸೆಳೆಯೋದು ರೋಗ‌. ಅವರು ಅಧಿಕಾರಕ್ಕೆ ಬಂದಾಗೇಲ್ಲ ಕಾಂಗ್ರೆಸ್ ಜೆಡಿಎಸ್‌ ಶಾಸಕರನ್ನ‌ ಸೆಳೆಯೋ ಚಾಳಿ ಇದೆ. ಅದರ ಪರಿಣಾಮವಾಗಿ ಇವತ್ತು ಈ ಉಪಚುನಾವಣೆ ಬಂದಿದೆ ಎಂದರು.

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights