1ರಿಂದ 9ನೇ ತರಗತಿ, ಪ್ರಥಮ ಪಿಯುಸಿ ಮಕ್ಕಳಿಗಿಲ್ಲ ಪರೀಕ್ಷೆ : ಎಲ್ಲರೂ ಪಾಸ್ ಎಂದ ಸರ್ಕಾರ..

ಕೊರೊನಾ ಎಫೆಕ್ಟ್ ನಿಂದಾಗಿ ದೇಶವೇ ತಲ್ಲಣಗೊಂಡಿದೆ. ಶಾಲಾ – ಕಾಲೇಜು, ಮಾಲ್, ಮಾರುಕಟ್ಟೆ, ಥಿಯೇಟರ್ ಬಂದ್. ದಿನನಿತ್ಯದ ಅಗತ್ಯ ವಸ್ತುಗಳು ಬಿಟ್ಟ್ರೆ ಎಲ್ಲವೂ ಬಂದ್ ಆಗಿದೆ. ಕೊರೊನಾ ಸೋಂಕು ಹರಡುವ ಭೀತಿಯಲ್ಲಿ ಸರ್ಕಾರ ಆರಂಭದಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿತ್ತು. ಆದರೀಗ ಕೊರೊನಾ ಸೋಂಕಿತರ ಸಂಖ್ಯೆಗೆ ದಿನೇ ದಿನೇ ಹೆಚ್ಚಾಗುತ್ತಿರುವ ಪರಿಣಾಮ ಶಾಲೆಗಳನ್ನು ತೆರೆಯುವುದಿರಲಿ ಪರೀಕ್ಷೆ ನಡೆಸುವುದು ಕೂಡ ದೊಡ್ಡ ತಲೆ ನೋವಾಗಿ ಪರಿಣಮಿಸಿದೆ. ಆದರೆ ಇದಕ್ಕೆ ತೆರೆ ಎಳೆದ ಗುಜರಾತ್ ಸರ್ಕಾರ 1 ರಿಂದ 9ನೇ ತರಗತಿ ಹಾಗೂ ಪ್ರಥಮ ಪಿಯುಸಿ ಮಕ್ಕಳಿಗೆ ಪರೀಕ್ಷೆ ಇಲ್ಲದೇ ಉತ್ತೀರ್ಣ ಮಾಡಿದೆ.

ಹೌದು… ಇಂಥದೊಂದು ನಮಹತ್ವದ ನಿರ್ಧಾರವನ್ನು ಗುಜರಾತ್ ಸರ್ಕಾರ ಘೋಷಿಸಿದೆ. ಕೊರೊನಾ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವ ಭೀತಿಯಲ್ಲಿ ಜನ ಮಕ್ಕಳುನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿರುವ ಬೆನ್ನೆಲ್ಲೆ  ಇಂಥಹದ್ದೊಂದು ನಿರ್ಧಾರ ಸರ್ಕಾರ ಕೈಗೊಂಡಿದೆ. ಮಕ್ಕಳ ಹಿತದೃಷ್ಟಿಯಿಂದ ಇಂತಹದೊಂದು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಗುಜರಾತ್ ಸಿಎಂ ತಿಳಿಸಿದ್ದಾರೆ.

ಗುಜರಾತ್‍ನಲ್ಲಿ ಮಾರ್ಚ್ ತಿಂಗಳ ಆರಂಭದಲ್ಲೇ 10ನೇ ತರಗತಿ ಹಾಗೂ ದ್ವಿತೀಯ ಪಿಯುಸಿ ಬೋರ್ಡ್ ಪರೀಕ್ಷೆಗಳನ್ನು ಶಿಕ್ಷಣ ಮಂಡಳಿಯು ನಡೆಸಿದೆ. ಆದಾಗ್ಯೂ ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಮಾರ್ಚ್ 15ರಿಂದ ಶಾಲೆಗಳನ್ನು ಮುಚ್ಚಲಾಗಿತ್ತು. ಹೀಗಾಗಿ ಇತರ ತರಗತಿಯ ಪರೀಕ್ಷೆಗಳನ್ನು ನಡೆಸಲು ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಪಾಸ್ ಮಾಡಲು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಸಿಎಂ ಕಚೇರಿಯ ಕಾರ್ಯದರ್ಶಿ ಅಶ್ವನಿ ಕುಮಾರ್ ತಿಳಿಸಿದ್ದಾರೆ.

https://twitter.com/ANI/status/1242546925858992133

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights