20 ದಿನದಲ್ಲಿ ಮಾಸ್ಕ್ ಧರಿಸದವರಿಂದ 3.43 ಲಕ್ಷ ರೂ. ದಂಡ ವಸೂಲಿ ಮಾಡಿದ ಬಿಬಿಎಂಪಿ..!

ಕೊರೊನಾ ಹರಡುವುದನ್ನ ತಡೆಗಟ್ಟಲು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಕಡ್ಡಾಯ ನಿಯಮವನ್ನು ಜಾರಿಗೊಳಿಸಲಾಗಿತ್ತು. ಈ ನಿಯಮವನ್ನು ಪಾಲಿಸದೇ ಇರುವವರಿಯಿಂದ ದಂಡ ವಸೂಲಿ ಮಾಡಿದ ಬಿಬಿಎಂಪಿ 3.43 ಲಕ್ಷ ರೂ. ಹಣ ಸಂಗ್ರಹ ಮಾಡಿದೆ.

ಹೌದು… ರಾಜ್ಯದಲ್ಲಿ ಲಾಖ್ ಡೌನ್ 4.0 ಜಾರಿಯಲ್ಲಿದೆ. ಕೆಲವು ಷರತ್ತುಗಳೊಂದಿಗೆ ನಿಯಮವನ್ನು ಸಡಿಲಗೊಳಿಸಲಾಗಿದೆ.  ಆದರೆ ಲಾಕ್ ಡೌನ್ ಸಡಿಲಿಕೆಯಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್ ಕಡ್ಡಾಯವಾಗಿತ್ತು. ಈ ನಿಯಮ ಉಲ್ಲಂಘಿಸಿದವರಿಂದ 200 ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಈ ಹಿಂದೆ 1000 ಇದ್ದ ದಂಡದ ಮೊತ್ತವನ್ನು 200 ಕ್ಕೆ ಇಳಿಕೆ ಮಾಡಲಾಗಿತ್ತು. ಮೇ 5 ರಿಂದ 1,715 ನಾಗರಿಕರಿಗೆ ದಂಡ ವಿಧಿಸಿದ ಬಿಬಿಎಂಪಿ ಒಟ್ಟು 43 3.43 ಲಕ್ಷ ಸಂಗ್ರಹಿಸಿದೆ.

ಬೆಂಗಳೂರಿನ ಪೂರ್ವ ವಲಯದಲ್ಲಿ ಅತಿ ಹೆಚ್ಚು ಹಣ ಅಂದ್ರೆ 584 ಜನರಿಂದ 1,16,800 ರೂ. ಹಣ ಸಂಗ್ರಹಿಸಲಾಗಿದೆ. ಮಹಾದೇವಪುರ ವಲಯದಲ್ಲಿ 277 ನಾಗರಿಕರಿಗೆ ಒಟ್ಟು 55,400 ದಂಡ ವಿಧಿಸಲಾಗಿದೆ. ಪಶ್ಚಿಮ ವಲಯದಲ್ಲಿ 200 46,200 ಸಂಗ್ರಹಿಸಿದರೆ, ಯಲಹಂಕ 42 ವ್ಯಕ್ತಿಗಳಿಂದ, 4 8,400 ದಂಡವನ್ನು ಸಂಗ್ರಹಿಸಿದೆ ಬಿಬಿಎಂಪಿ. ಆರಂಭದಲ್ಲಿ, ದಂಡ ಮೊತ್ತವನ್ನು 1,000 ಕ್ಕೆ ನಿಗದಿಪಡಿಸಲಾಯಿತು, ಆದರೆ ಅದನ್ನು 200 ಕ್ಕೆ ಇಳಿಸಲಾಯಿತು.

ಇಂದು ರಾಜ್ಯದಲ್ಲಿ 196 ಕೊರೊನಾ ಕೇಸ್ ದಾಖಲಾಗಿದ್ದು, ಈವರೆಗೆ ಸೋಂಕಿತರ ಸಂಖ್ಯೆ 1939ಕ್ಕೇರಿಕೆಯಾಗಿದೆ. ಸಾವಿನ ಸಂಖ್ಯೆ 42ಕ್ಕೇರಿಕೆಯಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights