21ದಿನ ಲಾಕ್ ಡೌನ್ : ಕೊರೊನಾ ಕರ್ಫ್ಯೂ ಉಲ್ಲಂಘಿಸಿದರೆ ನಿಮ್ ಕಥೆ ಅಷ್ಟೇ!

ಕರ್ನಾಟಕ ಲಾಕ್ ಡೌನ್ ನಡುವೆಯೂ ಮನೆ ಬಿಟ್ಟು ಹೊರಗಡೆ ಬಂದರೆ ಏನಾಗುತ್ತೆ ಅಂತ ಪ್ರಶ್ನೆ ಮಾಡಿ ಹೊರಗಡೆ ಬರುವವರಿಗೆ ಪೊಲೀಸರು ಸರಿಯಾಗೇ ಉತ್ತರ ಕೊಡುತ್ತಿದ್ದಾರೆ.

ಹೌದು.. ನೆನ್ನೆಯಷ್ಟೇ ಪ್ರಧಾನಿ ಮೋದಿ ದೇಶವನ್ನುದ್ದೇಶಿಸಿ ಮಾತನಾಡಿ 21ದಿನ ಭಾರತ ಲಾಕ್ ಡೌನ್ ಮಾಡಲಾಗುವುದು. ಇದಕ್ಕೆ ಜನ ಸಹಕರಿಸವೇಕಾಗಿ ಮನವಿ ಮಾಡಿಕೊಂಡ್ರು. ನೆನ್ನೆಯಿಂದ ಏಪ್ರಿಲ್ 14ರವೆರೆಗೂ ಭಾರತ್ ಲಾಕ್ ಡೌನ್ ಮಾಡಲಾಗಿದೆ . 144 ಸೆಕ್ಸನ್ ಜಾರಿ ಮಾಡಲಾಗಿದೆ. ಆದರೂ ಜನ ಹಬ್ಬದ ಪ್ರಯುಕ್ತ ಬೀದಿಗಿಳಿದಿದ್ದಾರೆ. ಇನ್ನೂ ಕೆಲವರು ಸುಖಾ ಸುಮ್ಮನೆ ಬೀದಿಗಿಳಿದು ಓಡಾಡುತ್ತಿರುವುದು ಕಂಡು ಬರುತ್ತಿದೆ. ಇಂಥವರಿಗೆ ಪೊಲೀಸರು ಲಾಠಿ ಬಿಸಿ ತಟ್ಟಿಸಿದ್ದಾರೆ. ಜೊತೆಗೆ ಇನ್ಯಾವೆಲ್ಲಾ ಕ್ರಮ ಕೈಗೊಳ್ಳುತ್ತಿದೆ ಅನ್ನೋದರ ವಿವರ ಇಲ್ಲಿದೆ ನೋಡಿ.

ಹಬ್ಬದ ಪ್ರಯುಕ್ತ ಒಂದು ಕಾರಣವಾದರೆ ಸುಖ ಸುಮ್ಮನೆ ವಾಹನಗಳ ಮೇಲೆ ಪುಡಾರಿಗಳು ಗುಂಪು ಗುಂಪಾಗಿ ಓಡಾಡುತ್ತಿರುವುದು ಕಂಡುಬರುತ್ತಿದೆ. ಹೀಗೆ ಮಾಡುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ನಾಳೆಯಿಂದ ಪಾಸ್ ಇಲ್ದೆ ವಾಹನಗಳು ರಸ್ತೆಗಳಿದರೆ ಕೇಸ್ ಹಾಕಲು ಪೊಲೀಸರು ಇಲಾಖೆ ನಿರ್ಧರಿಸಿದ್ದಾರೆ.

ಹೌದು… ಬಾಯಿಮಾತಿಗೆ, ಲಾಠಿ ಚಾರ್ಜ್ ಗೆ, ಜಾಗೃತಿಗೆ, ವಾಹನ ವಶಕ್ಕೂ ಜನ ಕ್ಯಾರೇ ಅನ್ನದೇ ಜನ ಬೀದಿಗಿಳಿದು ಕೊರೊನಾ ಭೀತಿ ಹೆಚ್ಚಿಸುತ್ತಿದ್ದಾರೆ. ಹೀಗಾಗಿ ಪೊಲೀಸ್ ಇಲಾಖೆ ಕಠಿಣ ಕ್ರಮಕ್ಕೆ ಮುಂದಾಗಿದೆ.

ರಾಜ್ಯದೆಲ್ಲೆಡೆ ಕೊರೊನಾ ಕರ್ಫ್ಯೂ ಜಾರಿ ಮಾಡಲಾಗಿದೆ. ಹಾಲು, ಆಹಾರ, ಔಷಧಿಗಳಿಗೆ ಕೊರತೆಯಾಗದಂತೆ ನೋಡಿಕೊಳ್ಳಿ ರಾಜ್ಯ ಸರ್ಕಾರಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಇದರ ನಡುವೆ ಕರ್ನಾಟಕದಲ್ಲೂ ಶಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಕರ್ಫ್ಯೂ ಉಲ್ಲಂಘಿಸಿದರೆ ಪೊಲೀಸರು ಲಾಠಿ ಚಾರ್ಜ್ ಹಾಗೂ ವಾಹನಗಳನ್ನು ವಶಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ವಿಜಯಪುರದಲ್ಲಿ ರೋಡಿಗಳಿದ 3 ಕಾರ್, 8 ಆಟೋ, 10 ಬೈಕ್ ಗಳು ಸೀಜ್ ಮಾಡಲಾಗಿದೆ.

ಇನ್ನೂ ರಾಯಚೂರಿನಲ್ಲಿ ಮಾರುಕಟ್ಟೆ ಬಂದ್ ಮಾಡುವಂತೆ ತಹಶೀಲ್ದಾರರಾದ ಡಾ. ಹಂಪಣ್ಣ ಬೆಳಿಗ್ಗೆ ಬೀದಿಗಿಳಿದು ಜನರನ್ನು ಚದುರಿಸುತ್ತಿದ್ದು  ಜನರನ್ನು ಗುಂಪುಗಟ್ಟಿಸುತ್ತಿದ್ದ ವ್ಯಾಪರಸ್ಥರಿಗೆ ಲಾಠಿ ರುಚಿ ತೋರಿಸಿದ್ದಾರೆ.

ಮೈಸೂರಿನಲ್ಲಿ ಪಾಲಿಕೆ ಜನ ಜನ ಜಾಗೃತಿ ಮೂಡಿಸಿದೆ. ಮಾರುಕಟ್ಟೆಗೆ ಬಂದರೆ ಜನ ಡಿಸ್ಟೆನ್ಸ್ ಮೆಂಟೇನ್ ಮಡುವಂತೆ ಜಾಗೃತಿ ಮೂಡಿಸುತ್ತಿದ್ದಾರೆ. ಮೈಸೂರು ಎಸ್ ಪಿ ಸಿಪಿ ರಿಷ್ಯಾಂತ ಅವರು ಜನ ಜಾಗೃತಿ ಮೂಡಿಸುವ ಮೂಲಕ ಜನರನ್ನ ಎಚ್ಚರಿಸುತ್ತಿದ್ದಾರೆ. ಜೊತೆಗೆ ಎಚ್ಚೆತ್ತುಕೊಳ್ಳದವರ ವಿರುದ್ಧ ಕ್ರಮ ಕೈಗೊಳ್ಳುತ್ತಿದ್ದಾರೆ.

ಬೆಂಗಳೂರಿನಲ್ಲಿ ಯಾವುದೇ ಸೂಕ್ತ ಕಾರಣವಿಲ್ಲದೇ ರಸ್ತೆಗಿಳಿದ್ರೆ ಅಂಥವರ ವಿರುದ್ಧ ಕೇಸ್ ಹಾಕಲು ನಿರ್ಧರಿಸಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights