40 ಆಟಗಾರರೊಂದಿಗೆ ಮೋದಿ ವಿಡಿಯೋ ಕಾಂನ್ಫರೆನ್ಸ್ : ಕೊರೊನಾ ಜಾಗೃತಿ ಮೂಡಿಸಲು ಮನವಿ

ನಿನ್ನೆಯಷ್ಟೇ ಎಲ್ಲಾ ಸಿಎಂಗಳ ಜೊತೆಗೆ ಕೊರೊನಾ ಬಗ್ಗೆ ವಿಡಿಯೋ ಕಾಂನ್ಫರೆನ್ಸ್ ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೊದಿ ಅವರು ಇಂದು ದೇಶದ 40 ಆಟಗಾರರೊಂದಿಗೆ ವಿಡಿಯೋ ಕಾಂನ್ಫರೆನ್ಸ್ ನಲ್ಲಿ ಸಭೆ ಮಾಡಿದರು.

ಕೊರೊನಾ ಹರಡುವ ಭೀತಿಯಲ್ಲಿ ದೇಶವೇ ಲಾಕ್ ಡೌನ್ ಮಾಡಿದ ನಂತರ ಇದೇ ಮೊದಲ ಬಾರಿಗೆ ಮೋದಿ ದೇಶದ ಆಟಗಾರರೊಂದಿಗೆ ಸಂವಹನ ನಡೆಸಿದ್ದಾರೆ. ಈ ಸಂವಹನದಲ್ಲಿ ದೇಶದಲ್ಲಿ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದ ದೇಶದ ಪರಿಸ್ಥಿತಿ ಮತ್ತು ಲಾಕ್ ಡೌನ್ ನಿಂದ ಆಗಿರುವ ಪರಿಣಾಮಗಳ ಬಗ್ಗೆ ಚರ್ಚೆ ಮಾಡಿದ್ದಾರೆ.

ಈ ವಿಡಿಯೋ ಕಾನ್ಫೆರೆನ್ಸ್ ನಲ್ಲಿ ಕೊಹ್ಲಿ, ಸಚಿನ್ ಮತ್ತು ಗಂಗೂಲಿಯವರ ಜೊತೆ, ಓಟಾಗಾರ್ತಿ ಪಿಟಿ ಉಷಾ, ಬ್ಯಾಡ್ಮಿಂಟನ್ ಆಟಗಾರ ಪುಲ್ಲೇಲಾ ಗೋಪಿಚಂದ್, ಚೆಸ್ ಆಟಗಾರ ವಿಶ್ವನಾಥನ್ ಆನಂದ್, ರನ್ನರ್ ಹಿಮಾ ದಾಸ್, ಕುಸ್ತಿಪಟು ಭಜರಂಗ್ ಪುನಿಯಾ, ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು, ಕ್ರಿಕೆಟಿಗರಾದ ರೋಹಿತ್ ಶರ್ಮಾ, ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್ ಮತ್ತು ಚೇತೇಶ್ವರ ಪೂಜಾರ ಇತರ ಪ್ರಮುಖ ಕ್ರೀಡಾಪಟುಗಳು ಇದ್ದರು.

ಕೊರೊನಾ ಹರಡುವ ಬಗ್ಗೆ ದೇಶದಲ್ಲಿ ಜಾಗೃತಿ ಮೂಡಿಸುವಲ್ಲಿ ತಾವೆಲ್ಲರು ಕೈಜೋಡಿಸಬೇಕು ಎಂದು ವಿನಂತಿ ಮಾಡಿಕೊಂಡಿದ್ದಾರೆ. ಈ ಪರಿಸ್ಥಿತಿಯ ಬಗ್ಗೆ ಜನರಿಗೆ ತಿಳಿ ಹೇಳುವ ಪ್ರಮುಖ ಪಾತ್ರವನ್ನು ವಹಿಸಬೇಕು, ಲಾಕ್ ಡೌನ್ ಸಮಯದಲ್ಲಿ ಸರ್ಕಾರದ ನಿಯಮಗಳನ್ನು ಪಾಲಿಸುವಂತೆ ಆಟಗಾರರಲ್ಲಿ ಕೇಳಿಕೊಂಡಿದ್ದಾರೆ.

ಸಂವಹನ ನಂತರ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಕ್ರೀಡೆಗಳಲ್ಲಿ ಸ್ವಯಂ-ಶಿಸ್ತು, ಸ್ಥಿರತೆ, ತಂಡದ ಕೆಲಸ ಮತ್ತು ಹೋರಾಟದ ಮನೋಭಾವ ಬೇಕು. ಹಾಗೇಯೆ ಕೊರೊನಾ ವೈರಸ್ ಅನ್ನು ಸೋಲಿಸಲು ಇವುಗಳ ಅಗತ್ಯ ನಮಗಿದೆ ಎಂದಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights