5.0 ಲಾಕ್ ಡೌನ್ : ರಾತ್ರಿ 9ರಿಂದ ಬೆಳಿಗ್ಗೆ 5 ಗಂಟೆಯವರೆಗೆ ನಿಷೇಧಾಜ್ಞೆ ಜಾರಿ..

ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು ದಿನ ಕಳೆದಂತೆ ಆತಂಕ ಹೆಚ್ಚಾಗುತ್ತಿದೆ. ಹೀಗಾಗಿ ಲಾಕ್ ಡೌನ್ 4.0 ಮುಕ್ತಾಯಗೊಂಡಂತೆ 5.0 ಜಾರಿಗೆ ತರಲಾಗಿದೆ. ಜೂನ್ 1 ರಿಂದ ಜೂನ್ 30ರವರೆಗೂ 5.0 ಲಾಕ್ ಡೌನ್ ಜಾರಿಗೊಳಿಸಲಾಗಿದ್ದು, ಹೊಸ ಮಾರ್ಗ ಸೂಚಿಯೊಂದಿಗೆ ಈ ಒಂದು ತಿಂಗಳೂ ರಾತ್ರಿಯಿಂದ ಬೆಳಿಗ್ಗೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆಯಂದು ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಆದೇಶ ಹೊರಡಿಸಿದ್ದಾರೆ.
ಈವರೆಗೂ ಸಂಜೆ 7 ಗಂಟೆಯಿಂದ ಬೆಳಗ್ಗೆ 7ರವರೆಗೆ ನಿಷೇಧಾಜ್ಞೆ ಹೇರಲಾಗಿತ್ತು. ಆದರೆ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಾರ್ಗಸೂಚಿ ಅನ್ವಯ ಬೆಳಿಗ್ಗೆ ಮತ್ತು ಸಂಜೆ 2 ಗಂಟೆ ಕಡಿತದೊಂದಿಗೆ ಒಂದು ತಿಂಗಳು ರಾತ್ರಿ 9 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರೆಗೆ ನಿಷೇಧಾಜ್ಞೆ ಮುಂದುವರಿಯಲಿದೆ.
 ಆಸ್ಪತ್ರೆ ಸೇವೆ, ಸಿಬ್ಬಂದಿ, ಅಗತ್ಯ ಸಂದರ್ಭಗಳನ್ನು ಹೊರತುಪಡಿಸಿ ರಾತ್ರಿ 9 ರಿಂದ ಬೆಳಿಗ್ಗೆ 5 ಗಂಟೆಯವರೆಗೆ ವಾಹನಗಳ ಓಡಾಟಕ್ಕೆ ನಿಷೇಧ ಹೇರಲಾಗಿದೆ.
ಜೂನ್ 1ರ ಮಧ್ಯರಾತ್ರಿಯಿಂದ ಜೂನ್ 30ರ ಮಧ್ಯರಾತ್ರಿಯವರೆಗೆ ನಿಷೇಧಾಜ್ಞೆ ಮುಂದುವರಿಕೆಗೆ ಕಮೀಷನರ್ ಆದೇಶ ಹೊರಡಿಸಿದೆ. ಇದುವರೆಗೂ ಸಂಜೆ 7 ಗಂಟೆಯಿಂದ ಬೆಳಗ್ಗೆ 7ರವರೆಗೆ ನಿಷೇಧಾಜ್ಞೆ ಹೇರಲಾಗಿತ್ತು. ಆದರೆ, ನಾಳೆಯಿಂದ ರಾತ್ರಿ 9 ಗಂಟೆಯಿಂದ ಬೆಳಗಿನ ಜಾವ 5 ಗಂಟೆಯವರೆಗೆ ನಿಷೇಧಾಜ್ಞೆ ಹೇರಲಾಗುವುದು.

ಕಳೆದೊಂದು ವಾರದಿಂದ ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು ಪ್ರತಿನಿತ್ಯ 100ರ ಒಳಗೆ ಇರುತ್ತಿದ್ದ ಕೇಸ್​ಗಳು ಈಗ 200ರ ಗಡಿ ದಾಟುತ್ತಿವೆ. 24 ಗಂಟೆಗಳಲ್ಲಿ ಬರೋಬ್ಬರಿ 299 ಕೊರೋನಾ ಸೋಂಕಿತರ ಪ್ರಕರಣಗಳು ದಾಖಲಾಗಿವೆ! ಕರ್ನಾಟಕದಲ್ಲಿ ಒಂದೇ ದಿನದ ಇಲ್ಲಿಯವರೆಗಿನ ಅತಿಹೆಚ್ಚು ಕೊರೋನಾ ಕೇಸ್​ ಇದಾಗಿದೆ. ಆ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 3221ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಕೊರೋನಾ ಸಾವಿನ ಸಂಖ್ಯೆ 51ಕ್ಕೆ ಏರಿಕೆಯಾಗಿದೆ. ಇಂದು 5ನೇ ಹಂತದ ಲಾಕ್​ಡೌನ್ ಶುರುವಾಗಿದೆ. ಬಹುತೇಕ ಆಫೀಸ್​ಗಳು, ದೇವಸ್ಥಾನಗಳು ತೆರೆಯಲಿದ್ದು, ಈ ನಡುವೆ ಕೊರೋನಾ ಕೇಸ್​ಗಳ ಪಟ್ಟಿ ಇನ್ನಷ್ಟು ಆತಂಕ ಹೆಚ್ಚಿಸಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights