6 ಗಂಟೆಗೆ ಮಂಗಳೂರಿನಲ್ಲಿ ಕರ್ಫ್ಯೂ ಮುಕ್ತಾಯ : ಮಾರುಕಟ್ಟೆಯಲ್ಲಿ ವ್ಯಾಪಾರ ಜೋರು
ಮಂಗಳೂರಿನಲ್ಲಿ ಇಂದು ಬೆಳಿಗ್ಗೆ 6 ಗಂಟೆಗೆ ಕರ್ಫ್ಯೂ ಮುಕ್ತಾಯ ಹಿನ್ನೆಲೆ, ಪ್ರಮುಖ ವಾಣಿಜ್ಯ ಕೇಂದ್ರ ಬಂದರು ಮಾರುಕಟ್ಟೆಯಲ್ಲಿ ವ್ಯಾಪಾರ ಜೋರಾಗಿದೆ.
ಬಂದರಿನಲ್ಲಿ ಮೀನಿನ ವ್ಯಾಪಾರ ವಹಿವಾಟು ಜೋರಾಗಿದೆ. ಪ್ರತಿನಿತ್ಯ ಕೋಟ್ಯಾಂತರ ವ್ಯಾಪಾರ ರೂಪಾಯಿ ವ್ಯಾಪಾರ ನಡೆಯುತ್ತಿದೆ.
ಇಂದಿನಿಂದ ಕರ್ಫ್ಯೂ ಮುಕ್ತಾಯವಾಗಿದ್ರಿಂದ ಸಂತೋಷದಿಂದ ಜನ್ರು ವ್ಯಾಪಾರ ಮಾಡುತ್ತಿದ್ದಾರೆ. ಪ್ರತಿದಿನ 500 ಬೋಟ್ ಗಳಲ್ಲಿ ಮೀನಿನ ವ್ಯಾಪಾರ ನಡೆಯುತ್ತದೆ. ರಾಜ್ಯದಲ್ಲಿ ಮಾತ್ರವಲ್ಲದೆ ಹೊರ ರಾಜ್ಯಗಳಿಗೆ ಮೀನು ರಫ್ತಾಗುತ್ತಿದೆ. ಪ್ರತಿನಿತ್ಯ 20 ಕೋಟಿಗೂ ಹೆಚ್ಚು ವ್ಯಾಪಾರ ನಡೆಯುತ್ತಿದೆ.
ಮೂರು ದಿನಗಳಿಂದ ಕರ್ಫ್ಯೂ ಇದ್ದಿದ್ದರಿಂದ ಇಂದು ಮೀನು ಕೊಂಡುಕೊಳ್ಳಲು ಗ್ರಾಹಕರು ಮುಗಿಬಿದ್ದಿದ್ದಾರೆ.ಈ ಬಂದರಿನಲ್ಲಿ ಪ್ರತಿನಿತ್ಯ 20 ಸಾವಿರಕ್ಕೂ ಹೆಚ್ಚು ಮಂದಿ ಕೆಲಸ ಮಾಡುತ್ತಾರೆ. ಮೂರು ದಿನ ಕರ್ಫ್ಯೂ ಇದ್ದರಿಂದ ಇಂದು ಮೀನಿನ ಬೆಲೆ ಸ್ವಲ್ಪ ಕುಸಿದಿದೆ.