ಫ್ಯಾಕ್ಟ್‌ಚೆಕ್: ಆನೆಯ ದಾಳಿಯಿಂದ ಪಾರಾಗುವ ವಾಹನ ಸವಾರರು! ಈ ಘಟನೆ ಕೇರಳದಲ್ಲಿ ನಡೆದಿಲ್ಲ

ಜನವರಿ 9 ರಂದು ಕೇರಳದ ವಯನಾಡ್‌ನಲ್ಲಿ ಅರಣ್ಯ ಪ್ರಾಧಿಕಾರವು ಆನೆಯನ್ನು ಸೆರೆಹಿಡಿದ ಸುದ್ದಿ ಮಾಧ್ಯಮಗಳಲ್ಲಿ ವರದಿಯಾಗಿತ್ತು. ಈ ಘಟನೆ ನಡೆದ ಒಂದು ದಿನದ ನಂತರ, ರಸ್ತೆಯ ಮಧ್ಯದಲ್ಲಿ ಆನೆಯೊಂದು ವಾಹನ ಸವಾರರ ಮೇಲೆ ದಾಳಿ ಮಾಡುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದೆ. ಕೇರಳದ ಅರಣ್ಯ ಪ್ರದೇಶದ ರಸ್ತೆಯಲ್ಲಿ ಅಲೆದಾಡುತ್ತಿರುವ ಆನೆಯನ್ನು ವೀಡಿಯೊ ಒಳಗೊಂಡಿದೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳುತ್ತಿದ್ದಾರೆ.

ಅರಣ್ಯ ವ್ಯಾಪ್ತಿಯ ರಸ್ತೆಯಲ್ಲಿ ಜನರನ್ನು ತುಂಬಿಕೊಂಡ ವ್ಯಾನ್‌ವೊಂದು ಸಾಗುತ್ತಿದ್ದ ವೇಳೆ ರಸ್ತೆಯ ಮಧ್ಯದಲ್ಲಿ ನಿಂತಿದ್ದ ಆನೆ ವ್ಯಾನ್‌ಗೆ ಅಡ್ಡಲಾಗಿ ಬರುವುದನ್ನು ವಿಡಿಯೋಲ್ಲಿ ಕಾಣಬಹುದು. ಈ ಸಂದರ್ಭಲ್ಲಿ ವಾಹನದಲ್ಲಿ ಇದ್ದ ಜನರು ದೈತ್ಯ ಆನೆಯ ಬಳಿ ಕೆಲ ಆಹಾರ ಪದಾರ್ಥಗಳನ್ನು ಎಸೆಯುತ್ತಾರೆ, ಆದರೆ ಆನೆ ಅದನ್ನು ಲೆಕ್ಕಿಸದೆ ತನ್ನ ಸೊಂಡಲನ್ನು ವ್ಯಾನ್‌ನ ಒಳಗೆ ಹಾಕಿ ಆಹಾರಕ್ಕೆ ಹೆಚ್ಚಿನ ಬೇಡಿಕೆ ಇಡುತ್ತದೆ. ಜನರೆಲ್ಲ ಗಾಬರಿಗೊಂಡು ವಾಹನದಿಂದ ಹೊರಗೆ ಹಾರುತ್ತಾರೆ. ಆನೆ ವ್ಯಾನ್ ಮೇಲೆ ದಾಳಿ ಮಾಡಿ ಅದನ್ನು ಉರುಳಿಸಲು ಯತ್ನಿಸುತ್ತದೆ. ಆದರೆ ಜನರು ಆನೆಯನ್ನು ಬೆದರಿಸಿ ಮತ್ತೆ ಕಾಡಿಗೆ ಹಿಮ್ಮೆಟಿಸಲು ಯಶಸ್ವಿಯಾಗುತ್ತಾರೆ.

“ಕೇರಳದಲ್ಲಿ ಕಾಡು ಪ್ರಾಣಿಗಳು ಗೊಂದಲಕ್ಕೊಳಗಾಗಿವೆ. ನಿಸರ್ಗನ್ನು ಹಾಳು ಮಾಡಿದರೆ ಆಹಾರದ ಕೊರತೆ ಉಂಟಾಗದೆ ಮತ್ತೇನಾಗುತ್ತದೆ” ಎಂದು ವಿಡಿಯೋವನ್ನು ಹಂಚಿಕೊಂಡಿದ್ದಾರೆ. ವೀಡಿಯೋವನ್ನು ಶೇರ್ ಮಾಡಿರುವ ಮತ್ತೊಬ್ಬರು, ಆನೆಗೆ ಬುದ್ದಿ ಇಲ್ಲ ನಾವು ಹೋಗುವವರೆಗೂ ಕಾಯದೆ ರಸ್ತೆ ದಾಟಲು ಬರುತ್ತಿದೆ. ನಾವು ಮನುಷ್ಯರು ನಾವೇಕೆ ಪ್ರಾಣಿಗಾಗಿ ಕಾಯಬೇಕು ಎಂಬ ವ್ಯಂಗ್ಯವಾದ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ.

ಮತ್ತೊಂದೆಡೆ, Zee News ಜನವರಿ 9 ರಂದು ಅದೇ ವೀಡಿಯೊವನ್ನು ಹಂಚಿಕೊಂಡಿದ್ದು, ಇದು ಆಂಧ್ರಪ್ರದೇಶದ ಚಿತ್ತೂರಿನ ಪಲಮನೇರು ರಸ್ತೆಯಿಂದ ವರದಿಯಾಗಿದೆ. ಈ ಘಟನೆಯನ್ನು ಕೆಲವರು ಕೇರಳದಲ್ಲಿ ಇನ್ನು ಕೆಲವರು ಆಂದ್ರದಲ್ಲಿ ನಡೆದಿದೆ ಎಂದು ಹೇಳಿದ್ದಾರೆ. ಹಾಗಿದ್ದರೆ ಈ ಘಟನೆ ನಡೆದಿರುವುದಾದರೂ ಎಲ್ಲಿ, ವಾಸ್ತವ ಏನು ಎಂದು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಆನೆಯೊಂದು ವ್ಯಾನ್‌ ಮೇಲೆ ದಾಳಿ ಮಾಡಿದ ಘಟನೆ ಎಲ್ಲಿ ನಡೆದಿದೆ ಎಂದು ತಿಳಿಯಲು, ವೈರಲ್ ವಿಡಿಯೊದ ಸ್ಕ್ರೀನ್‌ಶಾಟ್‌ಅನ್ನು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, ಶ್ರೀಲಂಕಾದ ಸುದ್ದಿ ವೆಬ್‌ಸೈಟ್ ಲಂಕಾಶ್ರೀ ನ್ಯೂಸ್‌ನ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡ ಅದೇ ವೀಡಿಯೊ ಲಭ್ಯವಾಗಿದ್ದು. ಈ ವೀಡಿಯೊದಲ್ಲಿ, ವ್ಯಾನ್‌ನ ಹಿಂಭಾಗದಲ್ಲಿ “ಹಾಲಿಡೇ ಶ್ರೀಲಂಕಾ” ಎಂದು ಬರೆದಿರುವುದನ್ನು ಕಾಣಬಹುದು.

ಈ ಘಟನೆಯ ವಿಸ್ತೃತ ಆವೃತ್ತಿಯ ವಿಡಿಯೋದಲ್ಲಿ ಅನೇಕ ವಾಹನಗಳು ಹಾದುಹೋಗುವಾಗ ಆನೆಗೆ ಆಹಾರವನ್ನು ನೀಡುತ್ತಿರುವುದು ಕಂಡುಬರುತ್ತದೆ. ಜನರನ್ನು ಹೊತ್ತೊಯ್ಯುವ ವ್ಯಾನ್ ಮೇಲೆ ದಾಳಿ ಮಾಡಿದೆ. ಈ ವಿಡಿಯೋಗಳು ಕೂಡ ಶ್ರೀಲಂಕಾದಿಂದ ಬಂದದ್ದು ಎಂದು ಉಲ್ಲೇಖಿಸಲಾಗಿದೆ. ಈ ವೀಡಿಯೋ ಕೇರಳದ್ದಲ್ಲ ಎಂದು ಸೂಚಿಸಿದೆ.

ಇದಲ್ಲದೆ, ಅದೇ ವೀಡಿಯೊವನ್ನು ಒಳಗೊಂಡಿರುವ ಸುದ್ದಿ ವರದಿ ಕಂಡುಬಂದಿದ್ದು. ಆಹಾರ ಅರಸಿ ಜನ ತುಂಬಿದ್ದ ವ್ಯಾನ್ ಮೇಲೆ ಆನೆಯೊಂದು ದಾಳಿ ಮಾಡಿದ ಘಟನೆ ಶ್ರೀಲಂಕಾದಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ. ಉವಾ ಪ್ರಾಂತ್ಯದ ಮೊನರಾಗಲ ಜಿಲ್ಲೆಯ ಮೊನರಾಗಲ ಪಟ್ಟಣದಲ್ಲಿ ಈ ಘಟನೆ ನಡೆದಿದೆ.

ಮತ್ತೊಂದು ವರದಿಯು ಜನವರಿ 1, 2023 ರಂದು ಈ ಘಟನೆ ನಡೆದಿದೆ ಎಂದು ಉಲ್ಲೇಖಿಸಿದೆ, ಇದು ಆಗ್ನೇಯ ಶ್ರೀಲಂಕಾದಲ್ಲಿ ಹಿಂದೂ ಮಹಾಸಾಗರದ ಗಡಿಯಲ್ಲಿರುವ ಅರಣ್ಯ, ಹುಲ್ಲುಗಾವಲು ಮತ್ತು ಲಗೂನ್‌ಗಳ ಬೃಹತ್ ಪ್ರದೇಶವಾದ ಯಾಲಾ ರಾಷ್ಟ್ರೀಯ ಉದ್ಯಾನವನಕ್ಕೆ ಹೋಗುವ ರಸ್ತೆಯಲ್ಲಿ ಸಂಭವಿಸಿದೆ ಎಂದು ಹೇಳಿದೆ. ಉವಾ ಪ್ರಾಂತ್ಯದಲ್ಲಿ ನೆಲೆಗೊಂಡಿರುವ ಯಾಲವು ದೇಶದ ಎರಡನೇ ಅತಿದೊಡ್ಡ ರಾಷ್ಟ್ರೀಯ ಉದ್ಯಾನವನವಾಗಿದೆ. ಚಿರತೆಗಳು, ಆನೆಗಳು ಮತ್ತು ಮೊಸಳೆಗಳಂತಹ ವನ್ಯಜೀವಿಗಳಿಗೆ ಮತ್ತು ನೂರಾರು ಪಕ್ಷಿ ಪ್ರಭೇದಗಳಿಗೆ ನೆಲೆಯಾಗಿದೆ ಎಂದು ಹೇಳಲಾಗಿದೆ.

ಘಟನೆಯಲ್ಲಿ ದಾಳಿಗೊಳಗಾದ ಜನರು ಆನೆಗೆ ಆಹಾರ ನೀಡಲು ಪ್ರಯತ್ನಿಸುತ್ತಿದ್ದರು ಎಂದು ವರದಿಯಾಗಿದೆ. ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ದಾಳಿಯ ನಂತರ, ವನ್ಯಜೀವಿ ಮತ್ತು ಸಂರಕ್ಷಣಾ ಇಲಾಖೆ ಮಹಾನಿರ್ದೇಶಕರು ತಮ್ಮ ಅಧಿಕಾರಿಗಳಿಗೆ ಕಾಡು ಪ್ರಾಣಿಗಳಿಗೆ, ವಿಶೇಷವಾಗಿ ಆನೆಗಳಿಗೆ ಆಹಾರವನ್ನು ನೀಡುವವರನ್ನು ಬಂಧಿಸುವಂತೆ ಸೂಚಿಸಿದ್ದಾರೆ ಎಂದು ವರದಿಯಾಗಿದೆ. ಇದಲ್ಲದೆ, ಬುಟ್ಟಲ-ಕತರಗಾಮ ರಸ್ತೆಯಲ್ಲಿ ಅಡ್ಡಾಡುವ ಕಾಡಾನೆಗಳನ್ನು ಓಡಿಸಲು ಯಾಲ ಅರಣ್ಯ ಸೈಟ್ ಅಧಿಕಾರಿಗಳನ್ನು ನಿಯೋಜಿಸಲಾಗಿದ್ದು, ಅಂತಹ ಅವಘಡಗಳನ್ನು ತಡೆಗಟ್ಟಲು ಆದೇಶಿಸಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಇಂಡಿಯಾ ಟುಡೇ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಹುಲಿ ದಾಳಿಗೆ ಮೈಸೂರಿನಲ್ಲಿ ವ್ಯಕ್ತಿ ಮೃತಪಟ್ಟಿದ್ದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights