ಫ್ಯಾಕ್ಟ್‌ಚೆಕ್: ‘ದಿ ಕಾಶ್ಮೀರ್ ಫೈಲ್ಸ್‌’ ಚಿತ್ರ ಆಸ್ಕರ್ ಪಟ್ಟಿಗೆ ಸೇರಿದೆ ಎಂದು ಸುಳ್ಳು ಹೇಳಿದ ನಿರ್ದೇಶಕ

2022 ರ ಆಸ್ಕರ್‌ಗಾಗಿ ಅಕಾಡೆಮಿ ಪ್ರಶಸ್ತಿಗಳಿಂದ ಅವರ ಚಲನಚಿತ್ರ ದಿ ಕಾಶ್ಮೀರ್ ಫೈಲ್ಸ್ ಶಾರ್ಟ್‌ಲಿಸ್ಟ್ ಮಾಡಲಾಗಿದೆ ಎಂದು ಚಲನಚಿತ್ರ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಮಂಗಳವಾರ ಟ್ವೀಟ್ ಮಾಡಿದ್ದಾರೆ. ಅವರ ಚಲನಚಿತ್ರ ದಿ ಕಾಶ್ಮೀರ್ ಫೈಲ್ಸ್ ಆಸ್ಕರ್ ಪ್ರಶಸ್ತಿಗಾಗಿ ಶಾರ್ಟ್‌ಲಿಸ್ಟ್ ಮಾಡಲಾಗಿದೆ ಎಂದು ಘೋಷಿಸಿದ್ದಾರೆ.

https://twitter.com/vivekagnihotri/status/1612699170787430403?ref_src=twsrc%5Etfw%7Ctwcamp%5Etweetembed%7Ctwterm%5E1612699170787430403%7Ctwgr%5Efc875cfa4d37ca2c656839870bbac44e2ed88df1%7Ctwcon%5Es1_&ref_url=https%3A%2F%2Fadmin.boomlive.in%2Fmain.jsp

“ಕಾಶ್ಮೀರ ಫೈಲ್ಸ್ ಅಕಾಡೆಮಿಯ ಮೊದಲ ಪಟ್ಟಿಯಲ್ಲಿ ಆಸ್ಕರ್ 2023 ಕ್ಕೆ ಶಾರ್ಟ್‌ಲಿಸ್ಟ್ ಆಗಿದೆ. ಇದು ಭಾರತದ 5 ಚಿತ್ರಗಳಲ್ಲಿ ಒಂದಾಗಿದೆ. ಅವರೆಲ್ಲರಿಗೂ ಶುಭ ಹಾರೈಸುತ್ತೇನೆ. ಭಾರತೀಯ ಚಿತ್ರರಂಗಕ್ಕೆ ಉತ್ತಮ ವರ್ಷ”. ಎಂದು ಇತ್ತೀಚೆಗೆ ಟ್ವಿಟ್ಟರ್ ಪೋಸ್ಟ್‌ನಲ್ಲಿ, ವಿವೇಕ್ ಅಗ್ನಿಹೋತ್ರಿ ಅವರು ಟ್ವೀಟ್ ಮಾಡಿದ್ದಾರೆ.

ಎರಡನೇ ಟ್ವೀಟ್‌ನಲ್ಲಿ, ಅಗ್ನಿಹೋತ್ರಿ ಚಿತ್ರದ ನಟರಾದ ಪಲ್ಲವಿ ಜೋಶಿ, ಅನುಪಮ್ ಖೇರ್, ಮಿಥುನ್ ಚಕ್ರವರ್ತಿ ಮತ್ತು ದರ್ಶನ್ ಕುಮಾರ್ ಅವರು ಅತ್ಯುತ್ತಮ ನಟರ ವಿಭಾಗಗಳಲ್ಲಿ ಶಾರ್ಟ್‌ಲಿಸ್ಟ್ ಆಗಿದ್ದಾರೆ ಎಂಧು ನಟರ ಹೆಸರಿನೊಂದಿಗೆ ಸ್ಕ್ರೀನ್‌ಶಾಟ್ ಅನ್ನು ಲಗತ್ತಿಸಿದ್ದಾರೆ.

ಈ ಸುದ್ದಿ ಕೇಳಿದ  ಅಭಿಮಾನಿಗಳು ಸಂಭ್ರಮಾಚರಣೆ ಮೂಲಕ ಚಿತ್ರತಂಡವನ್ನು ಅಭಿನಂದಿಸಲು ಪ್ರಾರಂಭಿಸಿದ ಹೊತ್ತಲ್ಲೆ, ಆಸ್ಕರ್‌ಗಾಗಿ FYI ಪಟ್ಟಿಗೆ ಇರುವ  ಮಾನದಂಡಗಳ ಪ್ರಕಾರ “ಚಲನಚಿತ್ರವು 6 US ಮೆಟ್ರೋಪಾಲಿಟನ್ ಪ್ರದೇಶಗಳಲ್ಲಿ 1 ವಾಣಿಜ್ಯ ಥಿಯೇಟರ್‌ನಲ್ಲಿ ಬಿಡುಗಡೆಗೊಂಡು 7 ದಿನಗಳ ಪ್ರದರ್ಶನವನ್ನು ಪೂರ್ಣಗೊಳಿಸಿರಬೇಕು” ಈ ಅರ್ಹತೆಯನ್ನು’  ಪರಿಗಣಿಸಲಾದ 301 ಚಲನಚಿತ್ರಗಳಲ್ಲಿ ಕಾಶ್ಮೀರ ಫೈಲ್ಸ್ ಒಂದಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ರಯೀಸ್ ನಿರ್ದೇಶಕ ರಾಹುಲ್ ಧೋಲಾಕಿಯಾ ಕೂಡ ಟ್ವೀಟ್ ಮಾಡಿ ಆಸ್ಕರ್ ಅರ್ಹತಾ ಮಾನದಂಡವನ್ನು ಸ್ಪಷ್ಟಪಡಿಸಿದ್ದಾರೆ.

ಸುಳ್ಳು ಹೇಳಿದ ವಿವೇಕ್ ಅಗ್ನಿಹೋತ್ರಿ :

ಕಾಶ್ಮೀರ ಫೈಲ್ಸ್ ಅಕಾಡೆಮಿಯ ಮೊದಲ ಪಟ್ಟಿಯಲ್ಲಿ ಆಸ್ಕರ್ 2023 ಕ್ಕೆ ಶಾರ್ಟ್‌ಲಿಸ್ಟ್ ಆಗಿದೆ. ಇದು ಭಾರತದ 5 ಚಿತ್ರಗಳಲ್ಲಿ ಒಂದಾಗಿದೆ. ಅವರೆಲ್ಲರಿಗೂ ಶುಭ ಹಾರೈಸುತ್ತೇನೆ. ಭಾರತೀಯ ಚಿತ್ರರಂಗಕ್ಕೆ ಉತ್ತಮ ವರ್ಷ”. ಎಂದು ಇತ್ತೀಚೆಗೆ ಟ್ವಿಟ್ಟರ್ ಪೋಸ್ಟ್‌ನಲ್ಲಿ, ವಿವೇಕ್ ಅಗ್ನಿಹೋತ್ರಿ ಅವರು ಟ್ವೀಟ್ ಸುಳ್ಳಿನಿಂದ ಕೂಡಿದೆ.

ವಾಸ್ತವೇನು:

ಆಸ್ಕರ್ ಅಕಾಡೆಮಿಯು (Academy of Motion Picture Arts and Sciences)  95ನೇ ಅಕಾಡೆಮಿ ಅವಾರ್ಡಿಗೆ ಅರ್ಹತೆ ಪಡೆದಿರುವ 301 ಚಿತ್ರಗಳ ಹೆಸರನ್ನು ಬಿಡುಗಡೆ ಮಾಡಿದೆ. ಇದು ಪ್ರಾಥಮಿಕ ಹಂತ. ‘ ದಿ ಕಾಶ್ಮೀರ್ ಫೈಲ್ಸ್’  ಈ ಪಟ್ಟಿಯಲ್ಲಿದೆ.(ಆ ಪಟ್ಟಿ ‘ಇಲ್ಲಿದೆ’.)

ಆಸ್ಕರ್‌ ಪ್ರಶಸ್ತಿಗೆ ಅರ್ಹತೆ ಪಡೆದುಕೊಳ್ಳಲು ಅಮೆರಿಕದ ಆರು ಮೆಟ್ರೊಪಾಲಿಟನ್ ನಗರಗಳಲ್ಲಿ (Los Angeles County; the City of New York; the Bay Area; Chicago, Illinois; Miami, Florida; and Atlanta, Georgia) ಎಲ್ಲಾದರೂ ಕನಿಷ್ಟ ಒಂದು ಕಡೆ ಬಿಡುಗಡೆಯಾಗಿಬೇಕು. ಪ್ರಶಸ್ತಿಗೆ ಪರಿಗಣಿಸಲಾದ ವರ್ಷದಲ್ಲಿ ಕನಿಷ್ಠ ಒಂದು ವಾರ ಸದರಿ ನಗರವೊಂದರಲ್ಲಿ ಪ್ರದರ್ಶನವಾಗಿರಬೇಕು. ಅಂದರೆ ಜನವರಿ 1, 2022ರಿಂದ ಡಿಸೆಂಬರ್ 31, 2022ರ ನಡುವೆ ಸತತ ಏಳು ದಿನ ಒಂದೇ ಜಾಗದಲ್ಲಿ ದಿ ಕಾಶ್ಮೀರ್ ಫೈಲ್ಸ್ ಪ್ರದರ್ಶನ ಕಂಡಿದೆ ಎಂದರ್ಥ. ಈ ಅರ್ಹತೆಯನ್ನು ದಿ ಕಾಶ್ಮೀರ್ ಫೈಲ್ಸ್ ಹೊಂದಿದೆ. ಹಾಗಾಗಿ ದಿ ಕಾಶ್ಮೀರ್ ಫೈಲ್ಸ್ ಚಿತ್ರಕ್ಕೆ ಸಿಕ್ಕಿರುವುದು ಇನ್ನು ಅರ್ಹತೆ ಮಾತ್ರ.

ಇವೆಲ್ಲದರ ನಡುವೆ ಚಲನಚಿತ್ರ ವಿಮರ್ಶಕರಾದ ಅಸೀಮ್ ಛಾಬ್ರಾ ಮತ್ತು ಮಯಾಂಕ್ ಶೇಖರ್ ಟ್ವೀಟ್ ಮಾಡಿ ಚಿತ್ರವು ಇನ್ನೂ ಆಯ್ಕೆಯಾಗಿಲ್ಲ ಅದರ ಮಾನಂಡಗಳಿಗೆ ಅರ್ಹತೆ ಪಡೆದಿದೆ ಎಂದು ವಿವರಿಸಿದ್ದಾರೆ. ಮತ್ತೊಬ್ಬ ಬಳಕೆದಾರರು, “ದಿ ಕಾಶ್ಮೀರ ಫೈಲ್ಸ್, ದಟ್ ಅಗ್ನಿಹೋತ್ರಿ ಲೈಸ್” (ಅಗ್ನಿಹೋತ್ರಿ ಸುಳ್ಳುಗಾರ) ಎಂದು ಕಾಮೆಂಟ್ ಮಾಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ದಿ ಕಾಶ್ಮೀರ್ ಫೈಲ್ಸ್‌ನ ತಂಡ ಚಲನಚಿತ್ರವನ್ನು FYI ವರ್ಗಕ್ಕೆ ಕಳುಹಿಸಿದ್ದಾರೆ, ಇದರಲ್ಲಿ ಚಲನಚಿತ್ರ ನಿರ್ಮಾಪಕರು ತಮ್ಮ ಚಲನಚಿತ್ರಕ್ಕೆ ನಿರ್ದಿಷ್ಟ ಮೊತ್ತದ ಶುಲ್ಕವನ್ನು ಪಾವತಿಸಿದ ನಂತರ ಆಸ್ಕರ್ ಪ್ಯಾನೆಲಿಸ್ಟ್‌ಗಳಿಂದ ವಿಮರ್ಶೆಗೆ ಕಳುಹಿಸುತ್ತಾರೆ. ಆದರೆ ವಿವೇಕ್ ಅಗ್ನಿಹೋತ್ರಿ  ತಮ್ಮ ಟ್ವಿಟರ್‌ನಲ್ಲಿ “ದಿ ಕಾಶ್ಮೀರ್ ಫೈಲ್ಸ್‌” ಚಿತ್ರ ಆಸ್ಕರ್‌ ಪಟ್ಟಿಯಲ್ಲಿ ಸ್ಥಾನ ಪಡೆದಿದೆ ಎಂದು ಸುಳ್ಳು ಹೇಳಿದ್ದಾರೆ.

ಕೃಪೆ: ಬೂಮ್

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಕಾಂತಾರ ಚಿತ್ರ ಆಸ್ಕರ್‌ಗೆ ನಾಮನಿರ್ದೇಶನಗೊಂಡಿದೆ ಎಂದು ತಪ್ಪು ವರದಿ ಮಾಡಿದ ಕನ್ನಡ ಮಾಧ್ಯಮಗಳು!


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights