AAP : ದಿಲ್ಲಿ ಗೆದ್ದ ಆಪ್‌ಗೆ ರಾಜ್ಯದ ರಾಜಧಾನಿ ಮೇಲೆ ಕಣ್ಣು – ಜನಸಂಪರ್ಕ ಜಾಥಾ…
ದಿಲ್ಲಿ ಗದ್ದುಗೆಯನ್ನು ಸತತ ಮೂರನೇ ಭಾರಿಗೆ ನಿರಾಯಾಸವಾಗಿ ಗೆದ್ದಿರುವ ಅರವಿಂ ಕೇಜ್ರಿವಾಲರ ಆಮ್ ಆದ್ಮಿ ಪಕ್ಷ ಈಗ ತನ್ನ ನೋಟವನ್ನು ವಿಸ್ತರಿಸಿಕೊಂಡಿದೆ. ಈ ವಿಸ್ತರಣೆಯಲ್ಲಿ ಬೆಂಗಳೂರಿಗೆ ಆದ್ಯತೆಯನ್ನು ನೀಡಿದೆ.

ಆಮ್ ಆದ್ಮಿ ಪಕ್ಷದ ಬಿಬಿಎಂಪಿ ಚುನಾವಣಾ ತಯಾರಿ ಬಿರುಸು ಪಡೆದುಕೊಂಡಿದ್ದು, ಐದು ದಿನಗಳ ಕಾಲ ನಗರದಾದ್ಯಂತ ಪಾದಯಾತ್ರೆ ಅಭಿಯಾನವನ್ನು ಆರಂಭಿಸಿದೆ. ಹೊಸ ಬೆಂಗಳೂರನ್ನು ನಿರ್ಮಿಸಲು ಸಂಕಲ್ಪತೊಟ್ಟಿರುವ ಆಮ್ ಆದ್ಮಿ ಪಕ್ಷವು ಬಿಬಿಎಂಪಿ ಚುನಾವಣೆಗೆ ವ್ಯಾಪಕ ಕಾರ್ಯಯೋಜನೆ ರೂಪಿಸಿಕೊಂಡಿದೆ.
ಇದರ ಅಂಗವಾಗಿ ಆಪ್ ಪಕ್ಷವು ಬುಧವಾರ ಬೆಂಗಳೂರಿನಲ್ಲಿ ಜನಸಂಪರ್ಕ ಜಾಥಾ ಹಮ್ಮಿಕೊಂಡಿತ್ತು. ಬೆಂಗಳೂರಿಗರ ಕುಂದು ಕೊರತೆಗಳನ್ನು ಅರಿತು, ಬೆಂಗಳೂರನ್ನು ವಿಶ್ವದರ್ಜೆಯ ಮಹಾನಗರವನ್ನಾಗಿಸಲು ಜನರ ಸಲಹೆ ಪಡೆಯುವ ಉದ್ದೇಶದಿಂದ ಬುಧವಾರ ನಗರದಲ್ಲಿ ಆಪ್ ಕಾರ್‍ಯಕರ್ತರು ಪಾದಯಾತ್ರೆ ಹಮ್ಮಿಕೊಂಡಿದ್ದರು.
ಪಕ್ಷದ ಕೆಲಸಗಳು, ಸಿದ್ದಾಂತಗಳ ಜೊತೆ ಕೈಜೋಡಿಸುವ ಜನರಿಗೆ ಸದಸ್ಯತ್ವ ನೀಡಿ, ಜನರ ಅಭಿಮತದೊಂದಿಗೆ ಅವರನ್ನು ಆಯ್ಕೆ ಮಾಡಿ ಬಿಬಿಎಂಪಿ ಚುನಾವಣೆಯಲ್ಲಿ ಕಣಕ್ಕಿಳಿಸುವುದು ಪಾದಯಾತ್ರೆಯ ಉದ್ದೇಶವಾಗಿದೆ ಎಂದು ಪಕ್ಷದದ ಬಿಬಿಎಂಪಿ ಕ್ಯಾಂಪೇನ್ ಉಸ್ತುವಾರಿಗಳಾದ ಶಾಂತಲಾದಾಮ್ಲೆಯವರು ತಿಳಿಸಿದರು.
ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಸಂಚಿತ್ ಸಹಾನೀ, ಬೆಂಗಳೂರು ಘಟಕದ ಅಧ್ಯಕ್ಷರಾದ ಮೋಹನ್ ದಾಸರಿ, ಬಿಬಿಎಂಪಿ ಚುನಾವಣಾ ಕ್ಯಾಂಪೇನ್ ಉಸ್ತುವಾರಿಗಳಾದ ಶಾಂತಲಾ ದಾಮ್ಲೆ, ರಾಜ್ಯ ಜಂಟಿ ಕಾರ್ಯದರ್ಶಿಗಳಾದ ದರ್ಶನ್ ಜೈನ್, ಲಕ್ಷ್ಮೀಕಾಂತ್ ರಾವ್ ಪಾದಯತ್ರೆಯಲ್ಲಿ ಪಾಲ್ಗೊಂಡಿದ್ದರು

