Airline: ಸಧ್ಯಕ್ಕಿಲ್ಲ ಅಂತಾರಾಷ್ಟ್ರೀಯ ವಿಮಾನ ಹಾರಾಟ; ಯಾವಾಗ ಆರಂಭ!
ಕೊರೊನಾ ವೈರಸ್ ಹರಡುವಿಕೆ ಹಿನ್ನೆಲೆಯಲ್ಲಿ ನಿಲ್ಲಿಸಲಾಗಿದ್ದ ಅಂತರರಾಷ್ಟ್ರೀಯ ವಿಮಾನಗಳ ಸಂಚಾರ ಸದ್ಯಕ್ಕೆ ಆರಂಭವಾಗುವ ಲಕ್ಷಣಗಳಿಲ್ಲ. ಈ ಬಗ್ಗೆ ಮಾತನಾಡಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ವಿದೇಶಗಳ ಪರಿಸ್ಥಿತಿ ಮತ್ತು ಅಲ್ಲಿನ ವಿಮಾನಯಾನ ಇಲಾಖೆಯ ನಿರ್ಧಾರದ ಮೇಲೆ ನಾವು ನಿರ್ಧರಿಸಬೇಕಾಗುತ್ತದೆ’ಎಂದು ಹೇಳಿದ್ದಾರೆ.
ಪ್ರಸ್ತುತ ದೇಶದಲ್ಲಿ ಪ್ರಾದೇಶಿಕ ವಿಮಾನ ಸಂಚಾರಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ವಿಮಾನ ಹಾರಾಟ ಮಾಡುತ್ತಿದೆ. ಆದರೆ, ‘ಅಂತರರಾಷ್ಟ್ರೀಯ ವಿಮಾನ ಸಂಚಾರ ಯಾವಾಗ ಆರಂಭವಾಗಬಹುದು ಎಂಬುದರ ಬಗ್ಗೆ ನಮಗೂ ತಿಳಿದಿಲ್ಲ. ಮಿತ್ರ ರಾಷ್ಟ್ರಗಳೊಂದಿಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಸಚಿವರು ಹೇಳಿದ್ದಾರೆ..
Any suggestion that international traffic has opened up & we are the only one not to open up needs reality check. The exact time when we will resume international flight depends on the other countries to be open to receive flights: Civil Aviation Minister Hardeep Singh Puri pic.twitter.com/CF45VYesxC
— ANI (@ANI) June 20, 2020
‘ಅಂತರರಾಷ್ಟ್ರೀಯ ಮಾರುಕಟ್ಟೆಯೂ ತೆರೆದಿದೆ. ಆ ಕುರಿತು ರಿಯಾಲಿಟಿ ಚೆಕ್ ಅಗತ್ಯವಿದೆ. ನಾವು ಅಂತರರಾಷ್ಟ್ರೀಯ ಸಂಚಾರವನ್ನು ಪುನರಾರಂಭಿಸಬೇಕಾದ ಸಮಯವೂ, ನಮ್ಮ ವಿಮಾನಗಳನ್ನು ಸ್ವೀಕರಿಸಲು ಮುಕ್ತವಾಗಿರುವ ಇತರ ದೇಶಗಳ ಮೇಲೆ ಅವಲಂಬಿತವಾಗಿರುತ್ತದೆ” ಎಂದು ಅವರು ತಿಳಿಸಿದ್ದಾರೆ..
ಕೇಸ್ ಟು ಕೇಸ್ ಆಧಾರದ ಮೇಲೆ ವಿಮಾನಗಳನ್ನು ತೆರೆಯುವ ಬಗ್ಗೆ ನಾವು ಯೋಚಿಸಬಹುದು” ಎಂದು ನಾಗರಿಕ ವಿಮಾನಯಾನ ಕಾರ್ಯದರ್ಶಿ ಪ್ರದೀಪ್ ಸಿಂಗ್ ಖರೋಲಾ ಹೇಳಿದ್ದಾರೆ. ಇದೇ ಸಂದರ್ಬದಲ್ಲಿ ಇನ್ನು ವಂದೇ ಭಾರತ್ ಮಿಷನ್ ಅಡಿ ಇದುವರೆಗೂ ವಿದೇಶಗಳಲ್ಲಿ ಸಿಲುಕಿಕೊಂಡಿದ್ದ 2,75,000 ಭಾರತೀಯರನ್ನು ವಿಮಾನ ಮತ್ತು ಹಡಗುಗಳಲ್ಲಿ ಮರಳಿ ದೇಶಕ್ಕೆ ಕರೆತರಲಾಗಿದೆ ಎಂದು ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.

