ಪಂಜಾಬ್ ಮಾಜಿ ಸಚಿವ, ಅಕಾಲಿ ನಾಯಕ ಸೇವಾ ಸಿಂಗ್ ಸೇಖ್ವಾನ್ ಎಎಪಿಗೆ ಸೇರ್ಪಡೆ!
ಶಿರೋಮಣಿ ಅಕಾಲಿದಳ (ಸಂಯುಕ್ತ) ನಾಯಕ ಮತ್ತು ಪಂಜಾಬ್ ಮಾಜಿ ಸಚಿವ ಸೇವಾ ಸಿಂಗ್ ಶೇಖ್ವಾನ್ ಅವರು ಗುರುವಾರ ಆಮ್ ಆದ್ಮಿ ಪಕ್ಷಕ್ಕೆ ಸೇರಿದ್ದಾರೆ.
ಶೇಖ್ವಾನ್ ಪ್ರಕಾಶ್ ಸಿಂಗ್ ಬಾದಲ್ ನೇತೃತ್ವದ ಅಕಾಲಿದಳ ಸರ್ಕಾರದಲ್ಲಿ ಮಂತ್ರಿಯಾಗಿದ್ದ ಅವರು, ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಅವರ ಸಮ್ಮುಖದಲ್ಲಿ ಎಎಪಿಗೆ ಸೇರಿದ್ದಾರೆ.
“ಅವರು ನಮ್ಮನ್ನು ಆಶೀರ್ವದಿಸಿದ್ದಾರೆ ಮತ್ತು ನಮ್ಮ ಕುಟುಂಬಕ್ಕೆ ಸೇರಿಕೊಂಡಿದ್ದಾರೆ. ನಾವು ಅವರನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸುತ್ತೇವೆ ಮತ್ತು ಅವರು ನಮಗೆ ಮಾರ್ಗದರ್ಶನ ನೀಡಬೇಕೆಂದು ನಾವು ಬಯಸುತ್ತೇವೆ” ಎಂದು ಕೇಜ್ರಿವಾಲ್ ಹೇಳಿದ್ದಾರೆ.
2018 ರಲ್ಲಿ ಶಿರೋಮಣಿ ಅಕಾಲಿದಳ ಪಕ್ಷದ ನಾಯಕತ್ವದ ವಿರುದ್ಧ ಬಂಡಾಯ ಎದ್ದಿದ್ದ ಶೇಖ್ವಾನ್ ಪಕ್ಷವನ್ನು ತೊರೆದಿದ್ದರು.
ಅದರ ನಂತರ, ಶೇಖ್ವಾನ್, ಮಾಜಿ ಸಂಸದ ರಂಜಿತ್ ಸಿಂಗ್ ಬ್ರಹ್ಮಪುರ ಮತ್ತು ಮಾಜಿ ಸಂಸದ ರಟ್ಟನ್ ಸಿಂಗ್ ಅಜ್ನಾಳ ಎಸ್ಎಡಿ (ತಕ್ಸಲಿ) ಸ್ಥಾಪಿಸಿದ್ದರು.
ਪੰਜਾਬ ਦੀ ਰਾਜਨੀਤੀ ਦਾ ਇੱਕ ਜਾਣਿਆ-ਪਛਾਣਿਆ ਨਾਮ, ਜੱਥੇਦਾਰ ਸੇਵਾ ਸਿੰਘ ਸੇਖਵਾਂ ਜੀ ਦਾ ਮੈਂ ਆਮ ਆਦਮੀ ਪਾਰਟੀ ਪਰਿਵਾਰ ਵਿੱਚ ਸਵਾਗਤ ਕਰਦਾ ਹਾਂ। ਆਮ ਆਦਮੀ ਪਾਰਟੀ ਹੁਣ ਸਮੁੱਚੇ ਪੰਜਾਬ ਦੀ ਉਮੀਦ ਬਣ ਗਈ ਹੈ, ਅਸੀਂ ਸਾਰੇ ਮਿਲ ਕੇ ਪੰਜਾਬ ਦੇ ਲੋਕਾਂ ਦੀ ਹਰ ਉਮੀਦ ਨੂੰ ਉਸ ਦੇ ਮੁਕਾਮ ਤੱਕ ਲੈ ਕੇ ਜਾਵਾਂਗੇ। pic.twitter.com/M7PexCEq6c
— Arvind Kejriwal (@ArvindKejriwal) August 26, 2021
ನಂತರ ಅವರು ಕಳೆದ ವರ್ಷ ಸುಖದೇವ್ ಸಿಂಗ್ ಧಿಂದ್ಸಾ ರಚಿಸಿದ SAD (ಡೆಮಾಕ್ರಟಿಕ್)ಗೆ ಹೋಗಿದ್ದರು.
ಸುಖದೇವ್ ಸಿಂಗ್ ಧಿಂದ್ಸ ನೇತೃತ್ವದ ಎಸ್ಎಡಿ (ಡೆಮಾಕ್ರಟಿಕ್) ಮತ್ತು ಎಸ್ಎಡಿ (ತಕ್ಸಲಿ) ವಿಸರ್ಜನೆಯ ನಂತರ ಈ ವರ್ಷದ ಮೇ ತಿಂಗಳಲ್ಲಿ ಎಸ್ಎಡಿ (ಸಂಯುಕ್ತ) ಅನ್ನು ಸ್ಥಾಪಿಸಲಾಗಿತ್ತು.
ಮುಂದಿನ ವರ್ಷದ ಆರಂಭದಲ್ಲಿ ಪಂಜಾಬ್ ವಿಧಾನಸಭಾ ಚುನಾವಣೆ ನಡೆಯಲಿದೆ.
ಇದನ್ನೂ ಓದಿ: ಬಿಜೆಪಿ ಪರ ಪ್ರಚಾರಕ್ಕೆ ಹೋದರೆ ಜನ ಉಗಿಯುತ್ತಾರೆ: ಶಿವಮೊಗ್ಗದಲ್ಲಿ ಬಿಜೆಪಿ ಅಧ್ಯಕ್ಷ ರಾಜೀನಾಮೆ!

