Big Breaking : ಶಾಲೆಯಲ್ಲಿ ಚಾಕಲೇಟ್ ಮಾದರಿಯ ಡ್ರಗ್ಸ್ ಮಾರಾಟ….!
ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಡ್ರಗ್ಸ್ ದಂಧೆಕೋರರ ಜಾಲವೊಂದು ಪ್ರತಿಷ್ಠಿತ ಶಾಲೆಗಳಲ್ಲಿ ಸದ್ದಿಲ್ಲದೆ ಆಟವಾಡುತ್ತಿದ್ದ ಘಟನೆ ಬೆಳಕಿಗೆ ಬಂದಿದೆ.
ಹೌದು… ಶಾಲೆಯಲ್ಲಿ ಮಾರಾಟವಾಗ್ತಿದ್ದ ಚಾಕಲೇಟ್ ಮಾದರಿಯ ಒಂದು ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಹೈಡ್ರೋ ಗಾಂಜಾ ಹೊಂದಿರುವ ಚಾಕಲೇಟ್ ಮಾರಾಟದ ಜಾಲವನ್ನು ನಗರದ ಪೊಲೀಸರು ಪತ್ತೆ ಹಚ್ಚಿ ವಶ ಪಡಿಸಿಕೊಂಡಿದ್ದಾರೆ.
ಕೋಲ್ಕತ್ತಾದಿಂದ ತಯಾರಿಸಲ್ಪಟ್ಟ ಈ ಚಾಕಲೇಟ್ ನ ಹೆಸರು ಡಾರ್ಕ್ ನೆಟ್. ನಾನಾ ಚಾಕಲೇಟ್ ಪ್ಲೇವರ್ ನಲ್ಲಿರುವ ಇದನ್ನ 8-10 ವರ್ಷದ ಮಕ್ಕಳಿಗೆ ಮಾರಾಟಮಾಡಲಾಗುತ್ತಿತ್ತು. ಜೊತೆಗೆ ಬಾರ್ ಆಂಡ್ ರೆಸ್ಟೋರೆಂಟ್, ಹುಕ್ಕಾ ಬಾರ್, ಶ್ರೀಮಂತರ ಮಕ್ಕಳಿಗೆ, ಐಷಾರಾಮಿ ಯುವಕರಿಗೆ, ಯುವತಿಯರಿಗೆ ಮಾರಾಟ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.
ಕೆನಾಡದಿಂದ ಭಾರತಕ್ಕೆ ಬಂದ ಚಾಕಲೇಟ್ ಮಾದರಿಯ ಡ್ರಗ್ಸ್ ನ್ನು ಪ್ರತಿಷ್ಟಿತ ಖಾಸಗೀ ಶಾಲೆಗಳಲ್ಲಿ ಮಾರಾಟ ಮಾಡುಲಾಗುತ್ತಿತ್ತು. ಈ ಚಾಕಲೇಟ್ ಸೇವನೆಯಿಂದ ಅನುಮಾನಗೊಂಡ ಪಾಲಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಮೇರೆಗೆ ಪೊಲೀಸರು ರೋಹಿತ್ ಹಾಗೂ ಕೊಲ್ಕತ್ತಾದಿಂದ ಬಂದಿದ್ದ ಅತೀಫ್ ಸಲೀಂ ನನ್ನು ಬಂಧಿಸಿದ್ದಾರೆ.
ಈ ಚಾಕಲೇಟ್ ನ್ನು ನೇರವಾಗಿ ಕೋಲ್ಕತ್ತಾದಿಂದ ಮಿಲ್ಕ್ ಪೌಡರ್ ಬಾಕ್ಸ್ ನ ಮೂಲಕ ಸಾಗಾಟ ಮಾಡಲಾಗುತ್ತಿತ್ತು. ಇಲ್ಲವೇ Wicki me ಆಪ್ ಮೂಲಕ ಚಾಕಲೇಟ್ ತರಿಸಿಕೊಳ್ಳುತ್ತಿತ್ತು. ಓದಲು ಮೆದುಳು ಚುರುಕಾಗಿ ಕೆಲಸ ಮಾಡುತ್ತದೆ ಎಂದು ಚಾಕಲೇಟ್ ಮಾರಾಟ ಮಾಡಲಾಗುತ್ತಿತ್ತು. ಈ ಒಂದು ಚಾಕಲೇಟ್ ನ ಬೆಲೆ 1000 ರಿಂದ 1500 ರೂಪಾಯಿ. ಇದನ್ನ ತಿಂದವರು ಚಾಕಲೇಟ್ ಗೆ ಗೊತ್ತಿಲ್ಲದೇ ಅಡಿಟ್ ಆಗುತ್ತಾರೆ. ಪುನ: ಖರೀದಿ ಮಾಡ್ತಾರೆ. ಚಾಕಲೇಟ್ ಮಾದರಿಯಾಗಿರುವುದರಿಂದ ಯಾರಿಗೂ ಕೂಡ ತಿಳಿಯುವುದು ಕಷ್ಟವಾಗಿತ್ತು. ಆದರೆ ಖಾಸಗೀ ಶಾಲೆಯ ಶ್ರೀಮಂತ ಕುಟುಂಬದವರು ತಮ್ಮ ಮಗು ಚಾಕಲೇಟ್ ತಿಂದಾಗಲೇಲ್ಲಾ ಆಡುವ ಬಗೆ ಕಂಡು ಅನುಮಾನದಿಂದ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಮೇರೆಗೆ ಚಾಕಲೇಟ್ ಪರಿಶೀಲಿಸಿದಾಗ ಅದು ಚಾಕಲೇಟ್ ಅಲ್ಲಾ ಚಾಕಲೇಟ್ ರೂಪದ ಡ್ರಗ್ಸ್ ಎಂಬುದು ಖಚಿತವಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.