Corona hot spot : ದೇಶದಲ್ಲಿ 10 ಕೊರೋನಾ ಹಾಟ್‌ಸ್ಪಾಟ್‌ಗಳ ಪಟ್ಟಿಯ ಕರ್ನಾಟಕ ಇಲ್ಲ..

ದೇಶವನ್ನು ಅಲುಗಾಡಿಸಿರುವ ಕೊರೋನಾ ಮಹಾಮಾರಿಯ ವಿಧ್ವಂಸದ ನಡುವೆಯೇ ರಾಜ್ಯಕ್ಕೆ ತುಸು ಸಮಾಧಾನ ತರುವ ವಿಚಾರ ಹೊರಬಿದ್ದಿದೆ. ಕೊರೋನಾ ಸೋಂಕಿತರ ಸಾಂದ್ರತೆ ಅತಿ ಹೆಚ್ಚಿರುವ ಹಾಟ್‌ಸ್ಪಾಟ್‌ಗಳನ್ನು ಕೇಂದ್ರ ಸರಕಾರ ಗುರುತಿಸಿದ್ದು ಈ ಪಟ್ಟಿಯಲ್ಲಿ ರಾಜ್ಯದ ಯಾವ ಪ್ರದೇಶವೂ ಇಲ್ಲ ಎನ್ನುವುದೇ ಕೊಂಚ ನೆಮ್ಮದಿ.

ದೇಶದ 10 ನಗರ ಪ್ರದೇಶಗಳನ್ನು ಕೊರೋನಾ ಸೋಂಕಿನ ಹಾಟ್‌ಸ್ಪಾಟ್‌ ಎಂದು ಕೇಂದ್ರ ಆರೋಗ್ಯ ಇಲಾಖೆ ಗುರುತಿಸಿ ಸಮರೋಪಾದಿಯಲ್ಲಿ ಪತ್ತೆ ಕಾರ್‍ಯಕ್ಕೆ ಮುಂದಾಗಿದೆ. ಹತ್ತಕ್ಕೂ ಕರೋನಾ ಗೊಂಚಲು ಇರುವ ಪ್ರದೇಶಗಳನ್ನು ಹಾಟ್‌ಸ್ಪಾಟ್‌ ಎಂದು ಕೇಂದ್ರ ಆರೋಗ್ಯ ಇಲಾಖೆ ಗುರುತು ಮಾಡಿದೆ.

ಕರ್ನಾಟಕದಲ್ಲಿ ಈವರೆಗೆ ಸೋಂಕಿತರ ಸಂಖ್ಯೆ 109 ಇದ್ದು ಮೂರು ಮಂದಿ ಮೃತಪಟ್ಟಿದ್ದಾರೆ. ಇಷ್ಟಾದರೂ ರಾಜ್ಯದ ಯಾವ ಭಾಗವೂ ಈ ಹಾಟ್‌ಸ್ಪಾಟ್‌ ಪಟ್ಟಿಯಲ್ಲಿ ಇಲ್ಲ ಎನ್ನುವುದೇ ಸಮಾಧಾನದ ಸಂಗತಿಯಾಗಿದೆ.

ಕರೋನಾ ಸೋಂಕಿತರು ಮತ್ತು ಅವರ ಸಂಪರ್ಕಿತರ ಪತ್ತೆ ಮತ್ತು ಪರೀಕ್ಷೆಯನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರವು ಈ ಕಾರಸ್ಥಾನಗಳನ್ನು (ಹಾಟ್‌ಸ್ಪಾಟ್) ಗುರುತು ಮಾಡಿಲಾಗಿದೆ ಎಂದು ವರದಿ ಯಾಗಿದೆ. ದಿಲ್ಲಿಯ ನಿಜಾಂಉದ್ದೀನ್ ಹಾಗೂ ದಿಲ್ಷಾದ್ ಗಾರ್ಡನ್, ನೋಯ್ಡಾ, ಮೀರತ್ ಭಿಲ್ವಾರಾ, ಅಹಮದಾಬಾದ್, ಕಾಸರಗೋಡು, ಪಟ್ಟಣಂತಿಟ್ಟ, ಮುಂಬೈ ಹಾಗ ಪುಣೆ ನಗರಗಳನ್ನು ಹಾಟ್‌ಸ್ಪಾಟ್‌ಗಳೆಂದು ಗುರುತಿಸಲಾಗಿದೆ.

ದೇಶಾದ್ಯಂತ ಇದುವರೆಗೆ 1251 ಕೊರೊನಾ ಪ್ರಕರಣಗಳು ದಾಖಲಾಗಿವೆ. ಕಳೆದ‌ 24 ಗಂಟೆಯಲ್ಲಿ 227 ಕೊರೊನಾ ಪ್ರಕರಣ ಬೆಳಕಿಗೆ ಬಂದಿದೆ ಎಂದು ಇಲಾಖೆ ಹೇಳಿದೆ. ದೇಶದಲ್ಲಿ ಕೊರೊನಾಗೆ ಇಂದು ಮೂವರು ಸಾವನ್ನಪ್ಪಿದ್ದಾರೆ. 101 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಈ ಮಧ್ಯೆ ದಿಲ್ಲಿಯ ನಿಜಾಮುದ್ದೀನ್ ದರ್ಗಾದಲ್ಲಿ ಮಾಸಾರಂಭದಲ್ಲಿ ನಡೆದ ಬೃಹತ್ ನಮಾಜಿನಲ್ಲಿ ಪಾಲ್ಗೊಮಡಿದ್ದ ರಾಜ್ಯದ ಜನರ ಪೈಕಿ 13 ಮಂದಿಯಲ್ಲಿ ಕೊರೋನಾ ಸೋಂಕು ಹರಡಿಲ್ಲ.

ಈ ನಮಾಜಿನಲ್ಲಿ ರಾಜ್ಯದಿಂದ 54 ಜನ ಭಾಗವಹಿಸಿದ್ದರು. ಆ ಪೈಕಿ 13 ಜನರಲ್ಲಿ ಯಾವುದೇ ಸೋಂಕು ಪತ್ತೆಯಾಗಿಲ್ಲ. ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ನಡೆದ ನಮಾಜಿನಲ್ಲಿ ಭಾಗವಹಿಸಿ ಬಂದವರ ಸಂಖ್ಯೆ 54. ಇವರು ಬೆಂಗಳೂರು, ಬೀದರ್, ಗುಲ್ಬರ್ಗ, ಬಳ್ಳಾರಿ ಭಾಗದವರು ಎಂದು ತಿಳಿದು ಬಂದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights