Corona in state : ಕೊರೋನಾ ಸೋಂಕಿತರು 511, ಗುಣಮುಖರಾದವರು 206….

ರಾಜ್ಯದಲ್ಲಿ ಕ್ರಮೇಣ ಕೊರೋನಾ ವೈರಾಣುವಿನ ಅಟ್ಟಹಾಸ ಇಳಿಮುಖವಾಗುತ್ತಿರುವ ಸೂಚನೆಗಳು ಕಂಡುಬರುತ್ತಿವೆ. ಹೊಸದಾಗಿ ಸೋಂಕು ಪೀಡಿತರ ಸಂಖ್ಯೆಗಿಂತ ಸೋಂಕಿನಿಂದ ಗುಣವಾದವರ ಸಂಖ್ಯೆಯಲ್ಲಿ ಗಣನೀಯ ಏರಿಕೆಯಾಗುತ್ತಿರುವುದು ಇದಕ್ಕೆ ಪೂರಕವಾಗಿದೆ.

ಕಳೆದ 48 ತಾಸಿನಲ್ಲಿ 19 ಮಂದಿ ಕೊರೋನ ಸೋಂಕಿತರು ಪತ್ತೆಯಾದರೇ 24 ಮಂದಿ ಈ ಮಾರಿಯನ್ನು ಗೆದ್ದು ಬಂದಿರುವುದಾಗಿ ವರದಿಯಾಗಿದೆ. ರಾಜ್ಯದಲ್ಲಿ ಮಂಗಳವಾರ ಸಂಜೆಯ ವೇಳೆಗೆ 295 ಮಂದಿ ಕೊರೋನಾ ಸೋಂಕಿತರಿದ್ದರೇ, 207 ಮಂದಿ ಇದರಿಂದ ಮುಕ್ತಿ ಪಡೆದಿದ್ದಾರೆ. 20 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.

ಸೋಮವಾರ ಸಂಜೆಯಿಂದೀಚೆಗೆ ವರದಿಯಾದ ಪ್ರಕರಣಗಳಲ್ಲ ಕಲಬುರ್ಗಿಯಲ್ಲೇ ಅತಿ ಹೆಚ್ಚು ಅಂದರೆ 6 ಪ್ರಕರಣಗಳಿದ್ದರೇ ಬಾಗಲಕೋಟೆಯಲ್ಲಿ 3 ಬೆಂಗಳೂರು ಹಾಗೂ ಗದಗದಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ. ರಾಜ್ಯದ ವಿವಿಧೆಡೆ ಇನ್ನೂ 966 ಮಂದಿ ತಿವ್ರ ನಿಗಾದಲ್ಲಿದ್ದು ಅವರ ಚಿಕಿತ್ಸಾ ವರದಿಗಳ ಬಂದ ಮೇಲಷ್ಟೇ ಕೊರೋನಾ ಯಾವ ಸ್ಥಿತಿಯಲ್ಲಿದೆ ಎಂದು ಹೇಳಲು ಸಾಧ್ಯ.

ಇದೆಲ್ಲದರ ನಡುವೆ ಮುಖ್ಯಮಂತ್ರಿ ಯಡಿಯೂರಪ್ಪನವರು ರಾಜ್ಯದ ಆರ್ಥಿಕ ಸಂಪನ್ಮೂಲದ ಸ್ಥಿತಿಗತಿಗಳನ್ನು ಅಧಿಕಾರಿಗಳ ಜೊತೆ ಅವಲೋಕನ ನಡೆಸಿದ್ದಾರೆ. ಸರಕಾರಕ್ಕೆ ನಿರೀಕ್ಷತ ಪ್ರಮಾಣದಲ್ಲಿ ಆದಾಯ ಸಂಗ್ರಹಕ್ಕೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿ ಕೊರೊನಾ ಸೋಂಕಿನಿಂದ ಮುಕ್ತವಾಗಿರುವ ಜಿಲ್ಲೆಗಳಲ್ಲಿ ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ಲಾಕ್‌ಡೌನ್ ಸಡಿಲಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಈ ಆದೇಶದ ಪ್ರಕಾರ ರಾಜ್ಯದ 14 ಜಿಲ್ಲೆಗಳಲ್ಲಿ ನೆರೆಹೊರೆಯ ಎಲ್ಲ ಅಂಗಡಿಗಳನ್ನು ತೆರೆಯಲು, ಕೈಗಾರಿಕೆಗಳನ್ನು ಪುನಾರಂಭಿಸಲು ಅವಕಾಶ ನೀಡಲಾಗಿದೆ. ಆದರೆ ಮದ್ಯದಂಗಡಿ, ರೆಸ್ಟೋರೆಂಟ್‌ಗಳಿಗೆ ಇದು ಅನ್ವಯವಾಗುವುದಿಲ್ಲ.

ಕೊರೋನಾ ಮುಕ್ತವಾಗಿರುವ ಚಾಮರಾಜನಗರ, ಕೊಪ್ಪಳ, ಚಿಕ್ಕಮಗಳೂರು, ರಾಯಚೂರು, ಚಿತ್ರದುರ್ಗ, ರಾಮನಗರ, ಹಾಸನ, ಶಿವಮೊಗ್ಗ, ಹಾವೇರಿ, ಯಾದಗಿರಿ, ಕೋಲಾರ, ದಾವಣಗೆರೆ, ಉಡುಪಿ ಮತ್ತು ಕೊಡಗಿನಲ್ಲಿ ಲಾಕ್‌ಡೌನ್ ಭಾಗಶಃ ತೆರವಾಗಲಿದೆ.

ಇನ್ನು ಹೆಚ್ಚಿನ ಪ್ರಕರಣಗಳಿಲ್ಲದ ಜಿಲ್ಲೆಗಳಾದ ಬಳ್ಳಾರಿ, ಮಂಡ್ಯ, ಬೆಂ. ಗ್ರಾಮಾಂತರ, ಗದಗ, ತುಮಕೂರು, ಚಿಕ್ಕಬಳ್ಳಾಪುರ, ಉತ್ತರ ಕನ್ನಡ ಮತ್ತು ಧಾರವಾಡದಲ್ಲಿ ತಾಲೂಕವಾರು ಪರಿಸ್ಥಿತಿ ನೋಡಿಕೊಂಡು ನಿರ್ಬಂಧ ಸಡಿಲಿಸುವ ಅಧಿಕಾರವನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ನೀಡಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights