Covid 19 : ಮೈಸೂರು, ಕೊಡಗಿನಲ್ಲಿ ಮತ್ತೆ ಸೋಂಕು, ರಾಜ್ಯದಲ್ಲಿ ಒಂದೇ ದಿನ 84 ಹೊಸ ಕೇಸು..

ರಾಜ್ಯಕ್ಕೆ ಕೊರೋನಾಘಾತವಾಗಿದೆ..ರಾಜ್ಯದಲ್ಲಿ ಕೊರೋನಾ  ರುದ್ರ ನರ್ತನ ಮಾಡುತ್ತಿದ್ದು, ಒಂದೇ ದಿನ  84 ಹೊಸ ಕೇಸುಗಳು ಕಾಖಲಾಗಿವೆ.. ಮೈಸೂರು, ಕೊಡಗಿನಲ್ಲಿ ಮತ್ತೆ ಸೋಂಕು ಕಾಣಿಸಿಕೊಂಡರೆ, ಬೆಂಗಳೂರಿನಲ್ಲೂ ಹೆಚ್ಚಳವಾಗಿದೆ..

ಬೆಂಗಳೂರು ನಗರದಲ್ಲಿ ಸೋಂಕಿನ ತೀವ್ರತೆ ಹೆಚ್ಚಿದ್ದು 18 ಪ್ರಕರಣಗಳು ಪತ್ತೆಯಾಗಿವೆ. ಎರಡು ದಿನಗಳ ಹಿಂದಷ್ಟೇ ಕೊರೋನಾ ಮುಕ್ತವಾಗಿದ್ದ ಮೈಸೂರು ಮತ್ತು ತಣ್ಣಗಿದ್ದ ಕೊಡಗಿನಲ್ಲಿ ಸಹ ಕೊರೋನಾ ಮತ್ತೆ ಕಿಚ್ಚು ಅಡಿ ಇಟ್ಟಿದೆ. ರಾಜ್ಯದಲ್ಲಿ ಈವರೆಗೆ 672 ಮಂದಿಗೆ ಕೊರೋನಾ ಸೋಂಕು ತಗುಲಿದೆ. ಇದೇ ವೇಳೆ ಸೋಂಕಿನಿಂದ ಗುಣವಾದವರ ಸಂಖ್ಯೆ ಐನೂರು ದಾಟಿದ್ದು 521 ಮಂದಿ ಗುಣವಾಗಿದ್ದಾರೆ. 37 ಜನ ಸೋಂಕಿಗೆ ಬಲಿಯಾಗಿದ್ದಾರೆ.
ದಿನದಿಂದ ದಿನಕ್ಕೆ ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿದ್ದು, ಉತ್ತರ ಕರ್ನಾಟಕ ಸೋಂಕಿನ ಆಗರವಾಗಿ ಪರಿಶಮಿಸಿದೆ. ರಾಜ್ಯದಲ್ಲಿ ಈವರೆಗೆ ದಾಖಲಾಗಿರುವ ಪ್ರಕರಣಗಳ ಪೈಕಿ ಶೇ. 40ರಷ್ಟು ಉತ್ತರ ಕರ್ನಾಟಕದ ಭಾಗದ ಜಿಲ್ಲೆಗಳಲ್ಲಿಯೇ ಕಾಣಿಸಿಕೊಂಡಿರುವುದು ಕಳವಳಕ್ಕೆ ಕಾರಣವಾಗಿದೆ.

ಬೆಳಗಾವಿಯಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಶತಕದ ಗಡಿ ದಾಟಿದ್ದರೇ ಕಲಬುರ್ಗಿ, ಬಾಗಲಕೋಟೆ, ಬೀದರ್‍ ಮತ್ತು ವಿಜಯಪುರ ಜಿಲ್ಲೆಗಳಲ್ಲಿ 50ಕ್ಕೂ ಹೆಚ್ಚಿನ ಪ್ರಕರಣಗಳು ದಾಖಲಾಗಿವೆ. ಹೊರ ಊರುಗಳಿಗೆ ಅದರಲ್ಲಿಯೂ ಮುಂಬೈ, ಅಹಮದಾಬಾದಿಗೆ ಪ್ರಯಾಣ ಬೆಳೆಸಿ ವಾಪಸಾದವರಿಂದಲೇ ಉತ್ತರ ಕರ್ನಾಟಕದಲ್ಲಿ ಸೋಂಕಿನ ಪ್ರಮಾಣದಲ್ಲಿ ಹೆಚ್ಷಳ ಕಂಡುಬಂದಿದೆ.

ಲಾಕ್‌ಡೌನ್ ನಿಮಗತಳ ಸಡಿಲಿಕೆ ಹಾಗೂ ಹೊರ ರಾಜ್ಯಗಳಿಂದ ಜನರು ವಾಪಸಾಗುತ್ತಿರುವುದು ಸೋಂಕಿನ ಪ್ರಕರಣಗಳಲ್ಲಿ ಹೆಚ್ಚಳಕ್ಕೆ ಕಾರಣವಾಗಿದೆ. ಹಲವರಲ್ಲಿ ಯಾವುದೇ ಲಕ್ಷಣಗಳೇ ಇಲ್ಲದೇ ತಪಾಸಣೆಯೂ ವಿಳಂಬವಾಗಿದೆ  ವರದಿಯಾಗಿದೆ. ರಾಜ್ಯದಲ್ಲಿ ಕೊರೋನಾಗೆ ಮೊದಲ ಬಲಿ ದಾಖಲಾಗಿದ್ದೇ ಕಲಬುರ್ಗಿಯಲ್ಲಿ. ಅತ್ಯಂತ ಕಠಿಣ ಲಾಕ್‌ಡೌನ್ ನಡುವೆಯೂ ಅಲ್ಲಿ ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆ ಕಂಡಿದೆ.

ಈ ಮಧ್ಯೆ ಸಕ್ಕರೆಯ ನಾಡು ಮಂಡ್ಯ ಇಂದು ಅಕ್ಷರಶಃ ಸೋಂಕಿನ ಗೂಡಾಗಿ ಪರಿವರ್ತನೆ ಆಗಿದೆ. ಒಂದೇ ದಿನ ಮಂಡ್ಯದಲ್ಲಿ 21 ಮಂದಿಗೆ ಕೊರೋನಾ ಸೋಂಕು ಪತ್ತೆಯಾಗಿರುವುದು ವರದಿಯಾಗಿದೆ. ಅಂತಾರಾಜ್ಯ ಪ್ರವಾಸದ ಹಿನ್ನೆಲೆ ಸೋಂಕಿತರ ಸಂಖ್ಯೆ ಸ್ಫೋಟಗೊಳ್ಳಲು ಕಾರಣವಾಗಿದೆ. ಇದರಿಂದಾಗಿ ಮಂಢ್ಯ ಸೋಂಕಿನ ಮನೆಯಾಗಿದೆ. ಸೋಂಕಿತರಲ್ಲಿ ಹೆಚ್ಚಿನವರು ಮುಂಬೈಗೆ ಪ್ರಯಾಣ ಮಾಡಿದ್ದವರೇ ಆಗಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights