Covid 19 : ದೇಶದಲ್ಲಿ ಕೊರೋನಾ ಕಾರಸ್ಥಾನಗಳು 25 ಜಿಲ್ಲೆಗಳು, ರಾಜ್ಯಕ್ಕಿಲ್ಲ ಇದರಲ್ಲಿ ಸ್ಥಾನ..

ದೇಶದಲ್ಲಿ ಕೊರೋನಾ ಅಟ್ಟಹಾಸ ಮುಮದುವರಿಯಲು 25 ಜಿಲ್ಲೆಗಳ ಕೊಡುಗೆ ಅಪಾರವಾಗಿದೆ. ಈ 25 ಜಿಲ್ಲೆಗಳ ಪಟ್ಟಿಯಲ್ಲಿ ರಾಜ್ಯದ ಹೆಸರಿಲ್ಲದಿರುವುದೇ ಸಮಾಧಾನದ ಸಂಗತಿಯಾಗಿದೆ. ವಾಣಿಜ್ಯ ನಗರಿ ಮುಂಬಯಿ ಸೇರಿದಂತೆ ಈ 25 ಜಿಲ್ಲೆಗಳು ದೇಶದ ಕೊರೋನಾ ಕಂಡದ ಪ್ರಮುಖ ಬೇರುಗಳಾಗಿ ಮಾರ್ಪಟ್ಟಿವೆ.

ಮುಂಬಯಿ ಉಪನಗರ, ಪಾಲಘಡ, ಥಾಣೆ, ನಾಶಿಕ್, ರಾಯಗಢಗಳಲ್ಲಿನ ಪ್ರಕರಣ ದೇಶದ ಒಟ್ಟು ಪ್ರಕರಣಗಳ ಸುಮಾರು ಅರ್ಧ ಭಾಗದಷ್ಟಿದೆ. ಇನ್ನು ದಿಲ್ಲಿಯ 10 ಜಿಲ್ಲೆಗಳು ಕೊರೋನಾ ಮಾರಿಯನ್ನು ಪೋಷಿಸುತ್ತಿವೆ ಎಂದು ಅಂಕಿ ಸಂಖ್ಯೆ ಸಮೇತ ವರದಿಗಳು ತಿಳಿಸಿವೆ.

ದೇಶದ ಎಲ್ಲ ರಾಜ್ಯಗಳಿಗೆಊ ಕೊರೋನಾ ವ್ಯಾಪಿಸಿದೆ. ಕೊರೋನಾದಿಂದ ದೂರವಿದ್ದ ಒಂದರಡು ರಾಜ್ಯಗಳಲ್ಲಿ ಸಹ ಲಾಕ್‌ಡೌನ್ ಸಡಿಲದ ನಂತರ ಮಾರಿಯ ಪ್ರವೇಶವಾಗಿದೆ. ಗುಜರಾತಿನ ಅಹಮದಾಬಾದ್ ಮತ್ತು ವಡೋದರಾ, ತಮಿಳುನಾಡು ರಾಜಧಾನಿ ಚೆನ್ನೈ, ತೆಲಂಗಾಣದ ರಾಜಧಾನಿ ಹೈದರಾಬದ್ ದಕ್ಷೀಣ ಭಾರತದಲ್ಲಿ ಕೊರೋನಾ ತಾಂಡವದ ಪ್ರಶಸ್ತ ತಾಣಗಳಾಗಿವೆ.

ಪಶ್ಚಿಮ ಬಂಗಾಳದ ಹೌರಾ ಪ್ರದೇಶ ಹಾಗೂ ಮಧ್ಯಪ್ರದೇಶದ ಇಂದೋರ್‍, ಮಾಂಡ್ಸೋರ್‍, ಉಜ್ಜಯಿಇ ಮತ್ತು ಬುರ್ಹಾಮ್ಪುರ ನಗರಗಳಲ್ಲಿ ಸಹ ಕೊರೋನಾ ಕೇಕೆ ಮಿತಿ ಮೀರಿದೆ. ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ದಿಲ್ಲಿ, ಮಧ್ಯಪ್ರದೇಶಗಳಂತೂ ಕೊರೋನಾ ಮಹಾ ಮಾರಿಯಿಂದಾಗಿ ತೀವ್ರ ಪೆಟ್ಟು ತಿಂದಿವೆ. ದೇಶದ ಒಟ್ಟು ಪ್ರಕರಣಗಳ ಮುಕ್ಕಾಲು ಪಾಲು ಈ ರಾಜ್ಯಗಳದ್ದೇ ಆಗಿದೆ.

ದೇಶಾದ್ಯಂತ ಸುಮಾರು 1.38 ಲಕ್ಷ ಜನರಿಗೆ ಸೋಂಕು ತಗುಲಿದೆ. ಆದರೆ ಲಕ್ಷದ್ವೀಪದಲ್ಲಿ ಇಲ್ಲಿಯವರೆಗೂ ಕೊರೊನಾ ಕಾಳಿಟ್ಟಿಲ್ಲ. 35 ಸಣ್ಣ ದ್ವೀಪಗಳಿರುವ ಲಕ್ಷದ್ವೀಪ 64 ಸಾವಿರ ಜನಸಂಖ್ಯೆಯನ್ನು ಹೊಂದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights