Exam : June ಎರಡನೇ ವಾರದಲ್ಲಿ SSLC, ಜೂ. 18ರಿಂದ ಜೆಇಇ, ಜುಲೈ 26ಕ್ಕೆ ನೀಟ್ ಪರೀಕ್ಷೆ..

ಲಕ್ಷಾಂತರ ವಿದ್ಯಾರ್ಥಿಗಳಿಗೆ ಯಕ್ಷ ಪ್ರಶ್ನೆಯಾಗಿದ್ದ SSLC ಪರೀಕ್ಷೆ ಕಡೆಗೂ ಜೂನ್ ತಿಂಗಳಿನಲ್ಲಿ ನಡೆಯುವುದು ಬಹುತೇಕ ಖಚಿತವಾಗಿದೆ. ಮಾರ್ಚ್‌ 27ಕ್ಕೆ ನಿಗದಿಯಾಗಿದ್ದ ಪರೀಕ್ಷೆ ಕೊರೋನಾ ಲಾಕ್‌ಡೌನ್ ಕಾರಣ ಮುಂದೂಡಿಕೆಯಾಗಿತ್ತು, ಕೇವಲ SSLC  ಮತ್ರೆವಲ್ಲದೇ ಇತರ ಶೈಕ್ಷಣಿಕ ಪರೀಕ್ಷೆಗಳೂ ಮುಂದಕ್ಕೆ ಹೋಗಿದ್ದನ್ನು ಇಲ್ಲಿ ಸ್ಮರಿಸಬಹುದು..

ವಿದ್ಯಾರ್ಥಿಗಳ ಭವಿಷ್ಯದಲ್ಲಿ SSLC ಮಹತ್ವದ ಘಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ಪರೀಕ್ಷೆ ಇಲ್ಲದೇ ಮುಂದೇನು ಎಂಬ ಆತಂಕ ವಿದ್ಯಾರ್ಥಿಗಳಲ್ಲಿ  ಮತ್ತು ಪಾಲಕರಿಗೆ ಕಾಡುತ್ತಿತ್ತು.  ಅವರ ಈ ಆತಂಕಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ತೆರೆ ಎಳೆಯುವಂತೆ ಮಾತನಾಡಿದ್ದಾರೆ, ಮುಂದಿನ ತಿಂಗಳು ಪರೀಕ್ಷೆ ನಡೆಯವು ಸುಳಿವು ನೀಡಿದ್ದಾರೆ.

ದೇಶದಲ್ಲಿ ಜಾರಿಯಲ್ಲಿರುವ ಲಾಕ್‌ಡೌನ್ ಈ ಮಾಸಾಂತ್ಯದ ವೇಳೆಗೆ ಸಂರ್ಪೂಣವಾಗಿ ಕೊನೆಗೊಳ್ಳುವ ನಿರೀಕ್ಷೆ ಇದ್ದು ಮುಂದಿನ ತಿಂಗಳು ಪರೀಕ್ಷೆ ನಡೆಸಲು ಯೋಜನೆ ಹಾಕಿಕೊಳ್ಳಲಾಗಿದೆ. ಎಲ್ಲ ಅಂದುಕೊಂಡಂತೆ ಆದರೆ ಜೂನ್ ತಿಂಗಳ 10ರ ನಂತರ SSLC ಪರೀಕ್ಷೆ ನಡೆಸಲಾಗುವುದು . ಈ ಬಗ್ಗೆ ವಿವರವಾದ ವೇಳಾಪಟ್ಟಿಯನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡುವ ನಿರೀಕ್ಷೆ ಇದೆ.

ಕಳೆದ ಮಾಸಾಂತ್ಯದಿಂದ ಶಶಳಛ ವಿದ್ಯಾರ್ಥಿಗಳಿಹೆ ದೂರದರ್ಶನದಲ್ಲಿ ಪ್ರತಿ ನಿತ್ಯ ಪುನರ್‌ಮನನ ಕಾರ್‍ಯಕ್ರಮಗಳು ಪ್ರಸಾರವಾಗುತ್ತಿದ್ದು, ಅವು ಈ ಮಾಸಾಂತ್ಯದವರೆಗೆ ಮುಂದುವರಿಯಲಿವೆ. ಈ ಮಧ್ಯೆ ಶಿಕ್ಷಣ ಸಚಿವ ಸುರೇಶ್ ಕುಮಾರ್‍ ಅವರು ಆಗಿಂದ್ದಾಗ್ಗೆ ವಿದ್ಯಾರ್ಥಿ ಸಮೂಹದೊಂದಿಗೆ ಮಾತನಾಡುವ ಮೂಲಕ ಅವರ ಸಮಸ್ಯೆಗಳನ್ನು ಅರಿತುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ..

ಇದೇ ವೇಳೇ ಈ ವರ್ಷದ ಜೆಪಿಇ ಮತ್ತು ನೀಟ್ ಪ್ರವೇಶ ಪರೀಕ್ಷೆಗಳ ದಿನಾಂಕವನ್ನು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ಘೋಷಣೆ ಮಾಡಿದ್ದಾರೆ.

ದೇಶಾದ್ಯಂತ ಜುಲೈ 26 ರಂದು ನೀಟ್ ಪರೀಕ್ಷೆ ಪಾರದರ್ಶಕ ಹಾಗೂ ನಿಸ್ಪಕ್ಷವಾಗಿ ನಡೆಯಲಿವೆ ಎಂದು ಸಚಿವರು ತಿಳಿಸಿದ್ದಾರೆ. ಇದೇ ವೇಳೆ ಜೆಇಇ ಪರೀಕ್ಷೆ ಜು18 ರಿಂದ 23ರವರೆಗೆ ನಡೆಯಲಿದ್ದು, ಯುಪಿಎಸ್‍ಸಿ ಪರೀಕ್ಷಗಳ ಬಗ್ಗೆ ಸದ್ಯದಲ್ಲಿಯೇ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights