FactCheck: ಭಾರತ ಚೀನಾ ನಡುವಿನ ಸಂಘರ್ಷದ ವಿಡಿಯೋ ಬಹಿರಂಗವಾಗಿದೆಯಾ? ವಿಡಿಯೋದಲ್ಲಿ ಏನಿದೆ?

ಭಾರತ ಮತ್ತು ಚೀನಾ ದೇಶಗಳ ಸೈನ್ಯಗಳ ನಡುವೆ ಗಾಲ್ವಾನ್ ಕಣಿವೆಯಲ್ಲಿ  ‘ಹಿಂಸಾತ್ಮಕ ಘರ್ಷಣೆ’ಯನ್ನು ಚಿತ್ರೀಕರಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹಲವಾರು ಮಂದಿ ಒಂದು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಭಾರತ ಮತ್ತು ಚೀನಾ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ವಿಡಿಯೋ ಇದು ಎಂದು ವ್ಯಾಖ್ಯಾನಿಸಲಾಗಿದೆ.

ಲಡಾಕ್‌ನ ಗಾಲ್ವಾನ್ ಕಣಿವೆಯಲ್ಲಿ ಭಾರತ-ಚೀನಾ ಗಡಿಯಲ್ಲಿ ಸೋಮವಾರ ರಾತ್ರಿ ‘ಎರಡೂ ಕಡೆ ಸಾವುನೋವುಗಳೊಂದಿಗೆ’ ಹಿಂಸಾತ್ಮಕ ಮುಖಾಮುಖಿ ನಡೆದಿದೆ ಎಂದು ಭಾರತೀಯ ಸೇನೆಯು ಜೂನ್ 16, ಮಂಗಳವಾರ ಹೇಳಿದೆ.

ವೈರಲ್‌ ಆಗುತ್ತಿರುವ ವಿಡಿಯೋದ ವಾಸ್ತವಾಂಶವೇನೆಂದು ಪರಿಶೀಲಿಸೋಣ…

ವಾದ: ಜೂನ್ 15, ಸೋಮವಾರ ರಾತ್ರಿ ನಡೆದ ಭಾರತ ಮತ್ತು ಚೀನಾ ನಡುವಿನ ಘರ್ಷಣೆಯ ವಿಡಿಯೋ ಎಂದು ಫೇಸ್‌ಬುಕ್ ಮತ್ತು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗುತ್ತಿದೆ.

ನಿಜ: ಈ ವೈರಲ್ ವಿಡಿಯೋ 2017 ರದ್ದಾಗಿದೆ. ಲಡಾಖ್‌ನ ಪಾಂಗೊಂಗ್ ಸರೋವರದ ಬಳಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ ಘರ್ಷಣೆ ನಡೆಸುತ್ತಿದೆ ಎಂದು ’ದಿ ಪ್ರಿಂಟ್’ ವರದಿ ಮಾಡಿದೆ.

19 ಆಗಸ್ಟ್ 2017ರ ದಿ ಪ್ರಿಂಟ್‌ ಟ್ವೀಟ್ ಪ್ರಕಾರ, ‘ಭಾರತೀಯ ಮತ್ತು ಚೀನಾದ ಸೈನಿಕರು ಆಗಸ್ಟ್ 15 ರಂದು ಲಡಾಕ್‌ನ ಪಾಂಗೊಂಗ್ ಸರೋವರದಲ್ಲಿ ಘರ್ಷಣೆ ನಡೆಸುತ್ತಿದ್ದಾರೆ’ ಎಂದು ವೀಡಿಯೊದಲ್ಲಿ ತೋರಿಸಲಾಗಿದೆ.

ಇಂಡಿಯಾ ಟುಡೆ ಮತ್ತು ಎನ್‌ಡಿಟಿವಿಯಂತಹ ಹಲವಾರು ಸುದ್ದಿ ಸಂಸ್ಥೆಗಳು ಕೂಡ ಇದೇ ವಿಡಿಯೋವನ್ನು 2017ರಲ್ಲಿ ಅಪ್‌ಲೋಡ್ ಮಾಡಿವೆ.

ಒಟ್ಟಿನಲ್ಲಿ ಜೂನ್ 15 ರಂದು ಭಾರತೀಯ ಮತ್ತು ಚೀನಾದ ಪಡೆಗಳ ನಡುವಿನ ‘ಮುಖಾಮುಖಿ’ ಯಂದು 2017ರ ಹಳೆಯ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights