Gadgets : ಕೊರೋನಾ ಆತಂಕಕ್ಕೆ ಜಿಯೋ plan, ಹೆಚ್ಚು ಡೇಟಾ ಬಳಸಿ, ಇನ್ನಷ್ಟು ಮಾತನಾಡಿ..

ದೇಶ ಕೊರೋನಾ ಆತಂಕದಲ್ಲಿ ಇರುವ ಸಂದರ್ಭದಲ್ಲಿಯೇ ರಿಲಯನ್ಸ್ ಜಿಯೋ ಸಂಸ್ಥೆಯು ತನ್ನ ಬಳಕೆದಾರರಿಗೆ ವಿಶೇಷ ರೀಚಾರ್ಜ್‌ ಯೋಜನೆಗಳನ್ನು ಹೊರತಂದಿದೆ. ಜಿಯೋ ತನ್ನ ಹಳೆಯ ರಿರ್ಚಾಜ್ ವೋಚರ್‌ಗಳ ಬದಲಾಯಿಸಿದ್ದು, ಡಬಲ್ ಡೇಟಾ ಮತ್ತು ಹೆಚ್ಚುವರಿ ಬೇರೆ ನೆಟ್‌ವರ್ಕ್‌ಗಳಿಗೆ ಕರೆ ಮಾಡುವ ಟಾಕ್‌ಟೈಮ್ ಒದಗಿಸಲು ಮಂದಾಗಿದೆ.

ಅಲ್ಲದೇ ತನ್ನ ನೆಟ್‌ವರ್ಕ್ ಬಿಟ್ಟು ಬೇರೆ ಆಪರೇಟರ್‌ಗಳಿಗೆ ಮಾಡುವ ಕರೆ ಸಮಯ ಮತ್ತು ಎರಡು ಪಟ್ಟು ಡೇಟಾವನ್ನು ನೀಡಲು ಡೇಟಾ ವೋಚರ್‌ಗಳನ್ನು ಜಿಯೋ ನವೀಕರಿಸಿದೆ.

ಜಿಯೋ ಹೇಳಿಕೆ ಪ್ರಕಾರ ರೂ.11, ರೂ.21, ರೂ. 51 ಮತ್ತು ರೂ.101 ರೀಚಾರ್ಜ್ ವೋಚರ್‌ ಪ್ಲಾನ್‌ಗಳು ಇನ್ನು ಮುಂದೆ ಗ್ರಾಹಕರಿಗೆ ಹೆಚ್ಚಿನ ಲಾಭ ಮಾಡಿಕೊಡಲಿದೆ.

ಜಿಯೋ ಪರಿಚಯಿಸಿರುವ ಈ ಪ್ಲಾನ್‌ಗಳು ಕ್ರಮವಾಗಿ 800 ಒಃ, 2ಉಃ, 6ಉಃ ಮತ್ತು 12 ಉಃ ಹೈಸ್ಪೀಡ್ ಡೇಟಾದೊಂದಿಗೆ ದೊರೆಯಲಿದೆ.

ಜಿಯೋ ಬಿಟ್ಟು ಬೇರೆ ನೆಟ್‌ವರ್ಕ್‌ಗಳಿಗೆ ಕರೆ ಮಾಡಲು ಕ್ರಮವಾಗಿ 75, 200, 500 ಮತ್ತು 1000 ನಿಮಿಷಗಳ ಟಾಕ್ ಟೈಮ್‌ ಅನ್ನು ಬಳಕೆದಾರರು ಆನಂದಿಸಬಹುದಾಗಿದೆ.

ಉದ್ಯಮಗಳು ತಮ್ಮ ಉದ್ಯೋಗಿಗಳನ್ನು ಮನೆಯಿಂದ ಕೆಲಸ ಮಾಡಲು (ವರ್ಕ್‌ ಫ್ರಮ್ ಹೋಮ್) ಪ್ರೋತ್ಸಾಹಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಜಿಯೋ ತನ್ನ ಬಳಕೆದಾರರಿಗೆ ಸಹಾಯ ಮಾಡಲು ಮುಂದಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights