Infi ಮೂರ್ತಿ ಅಳಿಯ ರಿಶಿ ಸುನಾಕ್ ಬ್ರಿಟನ್ನಿನ ನೂತನ ಹಣಕಾಸು ಮಂತ್ರಿಯಾಗಿ ನೇಮಕ..

ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ತಮ್ಮ ಸಂಪುಟ ಪುನರಚನೆ ಮಾಡಿದ್ದು ಭಾರತೀಯ ಮೂಲದ ರಿಶಿ ಸುನಾಕ್ ಅವರಿಗೆ ಮಹತ್ವದ ಗಣಕಾಸು ಖಾತೆ ನಿರ್ವಹಿಸುವ ಜವಾಬ್ದಾರಿ ನೀಡಿದ್ದಾರೆ. ರಿಶಿ ಭಾರತದ ಐಟಿ ದಿಗ್ಗಜ ಿನ್ಫೋಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಅವರ ಅಳಿಯ.
ಹಾಲಿ ಹಣಕಾಸು ಸಚಿವರಾಗಿದ್ದ ಪಾಕಿಸ್ತಾನ ಮೂಲದ ಸಾಜಿದ್‌ ಜಾವಿದ್‌ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ಕಾರಣ ನಡೆದ ಖಾತೆ ಮರು ಹಂಚಿಕೆಯಲ್ಲಿ ರಿಶಿಗೆ ಈ ಗುರುತರವಾದ ಜವಾಬ್ದಾರಿ ಹೆಗಲೇರಿದೆ. ನಾರಾಯಣಮೂರ್ತಿ, ಸುಧಾ ಪುತ್ರಿ ಅಕ್ಷತಾ ಅವರನ್ನು ಸುನಾಕ್ ವಿವಾಹವಾಗಿದ್ದು, ದಂಪತಿಗೆ ಇಬ್ಬರು ಪುತ್ರಿಯರಿದ್ದಾರೆ.

ಇದೇ ವೇಳೆ ಭಾರತೀ ಮೂಲದ ಇನ್ನಿಬ್ಬರಿಗೂ ಸಹ ಸಂಪುಟದಲ್ಲಿ ಸ್ಥಾಣ ಕಲ್ಪಿಸಲಾಗಿದೆ. ಪ್ರೀತಿ ಪಟೇಲ್ ಗೃಹ ಸಚಿವರಾಗಿ ಮುಂದುವರಿದಿದ್ದರೇ, ಅಲೋಕ್ ಶರ್ಮಾ ಅವರಿಗೆ ವಿದೇಶಾಂಗ ಖಾತೆಯ ಜವಾಬ್ದಾರಿ ಹೊರಿಸಲಾಗಿದೆ.

ಬ್ರೆಕ್ಸಿಟ್ ಒಪ್ಪಂದದಿಂದ ಹೊರಬಂದರುವ ಬ್ರಿಟನ್ ಆರ್ಥಿಕ ಕ್ಷೇತ್ರದಲ್ಲಿ ಸಾಖಷಟು ಸವಾಲಿನ ಪರಿಸ್ಥಿತಿ ಎದುರಿಸುತ್ತಿದೆ. ಇಂತಹ ಸಂದರ್ಭದಲ್ಲಿ ಭಾರತೀಯ ಮೂಲದ ವ್ಯಕ್ತಿಗೆ ಹೊಣೆಗಾರಿಕೆ ನೀಡಿರುವುದು ಗಮನ ಸೆಳೆದಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights