Lock down : ಮಂಗಳವಾರ ರಾತ್ರಿ 8 ಬದಲು ಬೆಳಗ್ಗೆ 10.30ಕ್ಕೆ PM ನರೇಂದ್ರ ಮೋದಿ ಭಾಷಣ..

ಕೊರೋನಾ ಸಮರದ ಅಂಗವಾಗಿ ದೇಶದಲ್ಲಿ ಹೇರಲಾಗಿರುವ ಲಾಕ್‌ಡೌನ್ ವಿಸ್ತರಣೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು  ಏಪ್ರಿಲ್ 14ರ ಮಂಗಳವಾರ ಬೆಳಗ್ಗೆ 10.30ಕ್ಕೆ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಕಳೆದ ತಿಂಗಳ 25ರಿಂದ ಲಾಗೂವಾಗಿರುವ ಲಾಕ್‌ಡೌನ್ ಮಂಗಳವಾರ ಅಂತ್ಯಗೊಳ್ಳಲಿದ್ದು ಈ ಹಿನ್ನೆಲಯಲ್ಲಿ ಪ್ರಧಾನಿ ಮಾತು ಮಹತ್ವ ಪಡೆದುಕೊಂಡಿದೆ.

ಬಹುತೇಕ ಅಂಶ ಲಾಕ್‌ಡೌನ್ ವಿಸ್ತರಣೆ ಖಚಿತವಾಗಿದ್ದರೂ ಅದರ ಸ್ವರೂಪ ಹೇಗಿರಬಹುದು ಎಂಬ ದೇಶವಾಸಿಗಳ ಕುತೂಹಲವನ್ನು ಪ್ರಧಾನಿ ಮಾತು ತಣಿಸಲಿದೆ. ಕಳೆದ ಶನಿವಾರ ಹಲವಾರು ಮುಖ್ಯಮಂತ್ರಿಗಳ ಜೊತೆ ಮೋದಿ ಅವರು ಮಾತುಕತೆ ನಡೆಸಿದ್ದು ಲಾಕ್‌ಡೌನ್‌ ಅನ್ನು ಇನ್ನೂ 15 ದಿನ ಮುಮದುವರಿಸು ವಿಚಾರದಲ್ಲಿ ಒಮ್ಮತ ಮೂಡಿದೆ.

ಅಲ್ಲದೇ ಲಾಕ್‌ಡೌನ್ ವಿಸ್ತರಣೆಯ ನಿರ್ಧಾರವನ್ನು ರಾಜ್ಯ ಸರಕಾರಗಳಿಗೆ ಬಿಡದೇ ಕೇಂದ್ರ ಸರಕಾರವೇ ನಿರ್ಧರಿಸುವುದು ಲೇಸು ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಲಹೆ ನೀಡಿದ್ದರು. ಆದರೆ ಲಾಕ್‌ಡೌನ್ 2.0 ಹೇಗಿರಬೇಕು, ಯಾವೆಲ್ಲ ರಿಯಾಯ್ತಿಗಳನ್ನು ನೀಡಬೇಕು ಎಂದಕ್ಕೆ ಕೇಂದ್ರ ಸರಕಾರ ಕೆಲ ಮಾರ್ಗಸೂಚಿಗಳನ್ನು ನೀಡಲಿದೆ.

ಪ್ರಧಾನಿ ಭಾಷಣದ ವೇಳೆ ಈ ಪ್ರಶ್ನೆಗಳಿಗೆ ಉತ್ತರ ಸಿಗುವ ನಿರೀಕ್ಷೆ ಇದೆ. ಈಗಾಗಲೇ ಹಲವು ಮಂತ್ರಾಲಯಗಳು ನಿರ್ಬಂಧ ಸಡಿಲಿಕೆಗೆ ಮನವಿ ಮಾಡಿಕೊಂಡಿವೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ನೆತೃತ್ವದ ತಂದ ಅಂತಿಮ ನಿರ್ಣಯ ತೆಗೆದುಕೊಳ್ಳಲಿದೆ,,

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights