Lock down : ಮೇ4ರ ನಂತರ ’ಲಾಕ್’ ಓಪನ್, ಬಳಿಕ ಬಹುತೇಕ ಸೇವೆಗಳು ಲಭ್ಯ-ಕೇಂದ್ರ..

ಲಾಕ್ ಡೌನ್ ನಿಂದ ಹೊರಬರುವ ದಿನಗಳು ಹತ್ತಿರ ಬರುತ್ತಿವೆ.. ಹೌದು ಮೇ 4 ನಂತರ Lock down ಮುಂದುವರೆಸುವ ಸಾದ್ಯತೆಗಳು ಇಲ್ಲ… ಕೊರೋನಾ ವಿರುದ್ಧ ಸಮರದ ಅಂಗವಾಗಿ ಜಾರಿಯಲ್ಲಿರುವ ನಿರ್ಬಂಧಗಳು ಮೇ 4ಕ್ಕೆ ಕೊನೆಗೊಳ್ಳುವ ಸುಳಿವನ್ನು ಕೇಂದ್ರದ ಆರ್ಥಿಕ ಸಲಹೆಗಾರರು ನೀಡಿದ್ದಾರೆ.  40 ದಿನಗಳ ಲಾಕ್‌ಡೌನ್ ಮೇ ನಾಲ್ಕಕ್ಕೆ ಮುಗಿಯಲಿದೆ. ಆ ಬಳಿಕ ಆರ್ಥಿಕ ಚಟುವಟಿಕೆಗಳು ಗರಿಗೆದರಲಿವೆ ಎಂದು ಕೇಂದ್ರದ ಪ್ರಧಾನ ಆರ್ಥಿಕ ಸಲಹೆಗಾರ ಸಂಜೀವ್ ಸನ್ಲಾಲ್ ಹೇಳಿದ್ದಾರೆ.

ಕೈಗಾರಿಕಾ ಒಕ್ಕೂಟದ ಮುಖ್ಯಸ್ಥರೊಂದಿಗೆ ವಿಡಿಯೋ ಸಭೆಯ ಸಂದರ್ಭದಲ್ಲಿ ಸನ್ಯಾಲ್ ಲಾಕ್‌ ತೆರವಿನ ಸ್ಪಷ್ಟ ಸಂಕೇತ ನೀಡಿದ್ದಾರೆ. ನಿಗದಿತ ಅವಧಿಯ ನಂತರ ಲಾಕ್‌ಡೌನ್ ಕೊನೆಗೊಳ್ಳಲಿದ್‌ಉದ ಜಗತ್ತಿನ ಉಳಿದೆಲ್ಲ ದೇಶಗಳಿಗಿಂತ ಭಾರತದ ಆರ್ಥಿಕ ಚೇತರಿಕೆ ಏರುಗತಿ ಪಡೆಲಿದೆ ಎಂದು ಸನ್ಯಾಲ್ ಹೇಳಿದ್ದಾರೆ.

ಆದರೆ ವಿದೇಶಕ್ಕೆ ಹಾರಬಯಸುವವರು ಇನ್ನೂ ತಿಂಗಳುಗಟ್ಟಲೇ ಕಾಯಬೇಕಾಗಿ ಬರಬಹುದು ಎಂದು ಹೇಳುವ ಮೂಲಕ ಅಂತಾರಾಷ್ಟ್ರೀಯ ವಿಮಾನ ಯಾನ ಸದ್ಯಕ್ಕೆ ಪುನಾರಂಭ ಇಲ್ಲ ಎಂಬುದರ ಸುಳಿವು ನೀಡಿದ್ದಾರೆ.

ಈ ಮಧ್ಯೆ ಕೊರೋನಾ ಲಾಕ್‌ಡೌನಿನಿಂದ ಉಂಟಾಗಿರುವ ಆರ್ಥಿಕ ಸಂಕಷ್ಟದ ಹಿನ್ನೆಲಯಲ್ಲಿ ತನ್ನ ನೌಕರರಿಗೆ ಹಾಗೂ ಪಿಂಚಣಿದಾರರಿಗೆ ಹೆಚ್ಚುವರಿ ತುಟ್ಟಿಭತ್ಯೆ ನೀಡದಿರಲು ಖೇಂದ್ರ ಸರಕಾರ ನಿರ್ಧರಿಸಿದೆ. ಮುಂದಿನ ವರ್ಷ ಜೂನ್‌ವರೆಗೆ ನೌಕರರು ಮತ್ತು ಪಿಂಚಣಿದಾರರಿಗೆ ಯಾವುದೇ ಹೆಚ್ಚುವರಿ ತುಟ್ಟಿಭತ್ಯೆ ನೀಡದಿರಲು ಕೇಂದ್ರ ಸರಕಾರ ತೀರ್ಮಾಣ ತೆಗೆದುಕೊಂಡಿದೆ.

ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಈಗಾಗಲೇ ಎಲ್ಲ ಸಂಸದರು ಮತ್ತು ಉನ್ನತಾಧಿಕಾರಿಗಳ ವೇತನ ಕಡಿತ ಮಾಡಲಾಗಿದ್ದು, ಸಂಸದರ ಕ್ಷೇತ್ರಾಭಿವೃದ್ಧ ನಿಧಿಯನ್ನು ಕೂಡ ಕೇಂದ್ರ ಸ್ಥಗಿತಗೊಳಿಸಿದೆ.

ಕೇಂದ್ರ ಸರಕಾರಿ ನೌಕರರಿಗೆ ಕಳೆದ ಜನವರಿಯಿಂದ ಈ ಕಂತಿನ ತುಟ್ಟಿಭತ್ಯೆ ಮತ್ತು ತುಟ್ಟಿ ಪರಿಹಾರ ಮೊತ್ತವನ್ನು ಬಾಕಿ ಉಳಿಸಿಕೊಳ್ಳಲಾಗಿತ್ತು. ಲಾಕ್‌ಡೌನ್‌ ಜಾರಿಗೊಳಿಸಿದ ಬಳಿಕ ಆರೋಗ್ಯ ಕಾರ್‍ಯಕರ್ತರು, ಕೃಷಿಕರು ಹಾಗೂ ಬಡ ಕಾರ್ಮಿಕರಿಗಾಗಿ ಕೇಂದ್ರ ಸರಕಾರ ವಿಶೇಷ ಆರ್ಥಿಕ ನೆರವಿನ ಬುಟ್ಟಿ ನೀಡಿತ್ತು.

ಇದೆಲ್ಲದೆ ನಡುವೆ ಗುರುವಾರದಿಂದ ಜಾರಿಗೆ ಬರುವಂತೆ ರಾಜ್ಯ ಸರಕಾರವು ಲಾಕ್‌ಡೌನ್‌ ನಿಯಮಗಳಲ್ಲಿ ತುಸು ಸಡಿಲಿಕೆ ಘೋಷಿಸಿದೆ. ಅದರಂತೆ ಕೃಷಿ, ಮೀನುಗಾರಿಕೆ ಜೊತೆಗೆ ನಿರ್ಮಾಣ ವಲಯಕ್ಕೆ ರಿಲೀಫ್ ನೀಡಲಾಗಿದೆ. ಮರಳು ಜಲ್ಲಿ ಸಿಮೆಂಟ್ ಸಾಗಾಣಿಕೆಗೆ ಅವಕಾಶ ಕಲ್ಪಿಸಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights