Modi vs Mamata : ಕೇಂದ್ರ ತಂಡದ ಸ್ಥಳ ಪರಿಶೀಲನೆ, ಅನುಮತಿ ನೀಡದ ಮಮತಾ ಬ್ಯಾನರ್ಜಿ

ಕೇಂದ್ರ ಮತ್ತು ಪಶ್ಚಿಮ ಬಂಗಾಳ ಸರಕಾರಗಳ ನಡುವೆ ಕದನ ಕೊರೋನಾ ಲಾಕ್‌ಡೌನ್ ವಿಚಾರಕ್ಕು ಕೂಡಾ ತಾರಕಕ್ಕೇರಿದೆ. ಲಾಕ್‌ಡೌನ್ ನಿಯಮ ಪಾಳನೆ ಸಂಬಂಧ ಸ್ಥಳ ಪರಿಶೀಲನೆಗೆ ಬಂದ ಕೇಂದ್ರ ಅಧಿಖಾರಿಗಳ ನಿಯೋಗಕ್ಕೆ ಬಂಗಾಳ ಸರಕಾರ ಬಾಗಿಲು ಬಂದ್ ಮಾಡಿದೆ.

ತಮ್ಮ ರಾಜ್ಯದಲ್ಲಿ ಕೊರೋನಾ ಸಂಬಂಧ ಮಾಹಿತಿ ಹಂಚಿಕೊಳ್ಳಲು ಒಪ್ಪಿರುವ ಪಶ್ಚಿಮ ಬಂಗಾಳ ಸರಕಾರವು ಕೇಂದ್ರ ನಿಯೋಗದ ಸ್ಥಳ ಪರಿಶೀಲನೆಗೆ ಆಗದು ಎಂದಿದೆ. ದೇಶದ ಆರು ರಾಜ್ಯಗಳಲ್ಲಿ ಲಾಕ್‌ಡೌನ್ ಖುದ್ದು ಪರಿಶೀಲನೆಗೆ ಕೇಂದ್ರ ಸರಕಾರ ತನ್ನ ಅಧಿಕಾರಿಗಳ ತಂಡವನ್ನು ರವಾನೆ ಮಾಡಿತ್ತು. ಆದರೆ ಇದಕ್ಕೆ ಬಂಗಾಳ ಸರಕಾರ ತೀವ್ರ ವಿರೋಧ ವ್ಯಕ್ತಪಡಿಸಿತ್ತು.

ಕೇಂದ್ರದ ನಿಯೀಗ ಸೋಮವಾರವೇ ಕೋಲ್ಕತಾ ತಲುಪಿತಾದರೂ ಬಾಧಿತ ಪ್ರದೇಶಗಳ ವೀಕ್ಷಣೆಗೆ ರಾಜ್ಯ ಸರಕಾರ ಅನುಮತಿ ನೀಡಲಿಲ್ಲ. ನಿಯೋಗದ ಮುಖ್ಯಸ್ಥರನ್ನು ಮಂಗಳವಾರ ಭೇಟಿ ಮಾಡಿದ ಬಂಗಾಳದ ಮುಖ್ಯ ಕಾರ್‍ಯದರ್ಶಿ ಸ್ಥಳ ಪರಿಶೀಲನೆಗೆ ಅನುಮತಿ ಅಸಾಧ್ಯ ಎಂದು ತಿಳಿಸಿದ್ದಾರೆ.

ಈ ಮಧ್ಯೆ ಕೇಂದ್ರವು ಖುದ್ದು ಪರಿಶೀಲನೆಗೆ ಆಯ್ಕೆ ಮಾಡಿರುವ ಆರು ರಾಜ್ಯಗಳ ಪೈಕಿ ಐದು ರಾಜ್ಯಗಳಲ್ಲಿ ಬಿಜೆಪಿಯೇತರ ಪಕ್ಷಗಳು ಅಧಿಕಾರ ನಡೆಸುತ್ತಿದ್ದು, ಇದಕ್ಕೆ ರಾಜಕೀಯ ಬಣ್ಣ ಬಂದಿದೆ. ಮೊದಲಿನಿಂದಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಮತ್ತು ಮಮತಾ ಬ್ಯಾನರ್ಜಿ ನೇತೃತ್ವದ  ಪಶ್ಚಿಮ ಬಂಗಾಳ ಸರಕಾರಗಳ ನಡುವೆ ಕದನ ನಡೆಯುತ್ತಿದ್ದು ಅದು ಕರೋನಾ ಸಂಕಟದಲ್ಲೂ ಮುಂದುವರೆದಿದೆ..

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights