Monsoon : Lockdown ಮಧ್ಯ ಸಂತಸದ ಸುದ್ದಿ, ನಿಗದಿಯಂತೆ ಕೇರಳ ಪ್ರವೇಶಿಸಿದ ಮುಂಗಾರು..

ನಿಗದಿಯಂತೆ ಕೇರಳ ಪ್ರವೇಶಿಸಿದ ಮುಂಗಾರು,  ಜೂನ್ ಒಂದರ ದಿನಾಂಕವನ್ನು ಮರೆಯದೇ ಕೇರಳಕ್ಕೆ ಕಾಲಿಟ್ಟ ಈ ವರ್ಷದ ಮುಂಗಾರು, ಕರೋನಾ ವೈರಸ್, ಲಾಕ್ ಡೌನ್ ಮಧ್ಯಯೂ ರೈತರ ಮೊಗದಲ್ಲಿ ಮಂದಹಾಸ..

ಪ್ರಸಕ್ತ ಸಾಲಿನ ಮುಂಗಾರಿನ ಆರಂಭವಾಗಿದೆ. ರೈತ ಸಂಕುಲದಲ್ಲಿ ಹೊಸ ಚಿಗುರು ಮೂಡಿಸುವ ಮುಂಗಾರು ನಿಗದಿಯಂತೆ ಕೇರಳಕ್ಕೆ ಕಾಲಿಟ್ಟಿದೆ.

ದೇಶದ ಮಳೆ ಪ್ರಮಾಣದಲ್ಲಿ ಮುಕ್ಕಾಲು ಭಾಗವನ್ನು ಆಕ್ರಮಿಸಿಕೊಳ್ಳುವ ಮುಂಗಾರು ಕೇರಳದಲ್ಲಿ ಕಾಣಿಸಿಕೊಂಡಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ದೇಶದ ಕೃಷಿ ಚಟುವಟಿಕೆ ಮುಂಗಾರಿನ ಮೇಲೆ ಅವಲಂಬಿತವಾಗಿದ್ದು, ಸಮಯಕ್ಕೆ ಸರಿಯಾಗಿ ಮಳೆಯ ಮಾರುತ ಬೀಸಲಾರಂಭಿಸಿದೆ.

ಈ ಬಾರಿ ಮುಂಗಾರು ಎಂದಿನಂತಿರಲಿದೆ. ಹೆಚ್ಚು ರಭಸವೂ ಇಲ್ಲದೇ ಹೆಚ್ಚು ಮಂದವೂ ಇಲ್ಲದೆ ಸಾಮಾನ್ಯವಾಗಿ ಇರಲಿದೆ ಎಂದು ಹವಾಮಾನ ಇಲಾಖೆ ಈ ಹಿಂದೆಯೇ ಮುನ್ಸೂಚನೆ ನೀಡಿತ್ತು

ಈ ಮಧ್ಯೆ ಮುಂಗಾರು ವಿಲಂಬವಾಗುವ ಲಕ್ಷಣಗಳು ಸಹ ಗೋಚರಿಸಿದ್ದವು. ಆಂಫನ್ ಚಂದ ಮಾರುತದಿಮದಾಗಿ ಮುಂಗಾರು ಆಗಮನ ವಿಳಂಬ ಆಗಬಹುದು ಎಂದು ಹೇಳಲಾಗಿತ್ತು.

ಮುಂಗಾರು ಪ್ರವೇಶದ ಹಿನ್ನೆಲೆಯಲ್ಲಿ ರಾಜ್ಯವೂ ಸೇರಿದಂತೆ ದೇಶಾದ್ಯಂತ ಮುಂದಿನ ಕೆಲ ದಿನಗಳಲ್ಲಿ ಮಳೆಯಾಗುವ ಮುನ್ಸೂಚನೆ ಇದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights