ಫ್ಯಾಕ್ಟ್‌ಚೆಕ್ : BJP ಪಕ್ಷದ ಸಭೆಯ ವೇದಿಕೆಯಲ್ಲಿ ಪ್ರೊ. ಕೆ.ಎಸ್‌. ಭಗವಾನ್ ! ವಾಸ್ತವವೇನು?

BJP ಅಜೆಂಡಾಗಳ ವಿರುದ್ದ ತಮ್ಮ ಮಾತಿನ ಮೂಲಕವೇ ಚಾಟಿ ಬೀಸುವ ಕನ್ನಡದ ಜನಪ್ರಿಯ ಅನುವಾದಕ, ಚಿಂತಕ, ವಿಚಾರವಾದಿ, ವಿಮರ್ಶಕ ನಿವೃತ್ತ ಇಂಗ್ಲಿಷ್ ಪ್ರೊಫೆಸರ್. ಕೆ.ಎಸ್‌.ಭಗವಾನ್ ಬಿಜೆಪಿ ಪಕ್ಷದ ಸಭೆಯಲ್ಲಿ ಕಾಣಿಸಿಕೊಂಡಿದ್ದಾರೆ ಎಂದು “ಭಗವಾನ್.. ಹೈ ಕಹಾರೇ ತೂ.” ಭಗವಾನ್ ಎಲ್ಲಿದ್ದೀರಾ..? ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗಿದೆ.

‎6 ಜನರು, ದೇವಾಲಯ ಮತ್ತು ‎ಪಠ್ಯ '‎ಭಾರತಯು αت Wயய ಮೈೆಸೂರು ನಗರ ಮತ್ತು ಗ್ರಾಮಾಂತರ ಸಚ್ಚಿನ್ ರಾಜೇಂದ್ರ ಭವನ #1048/1. ದೇವಪಾರ್ಥಿವ ರಸ್ತೆ, ಭಾಮರಾಜಪುರಂ, ಮೈಸೂರು‎' ಹೇಳುತ್ತಿದೆ‎‎ ನ ಚಿತ್ರವಾಗಿರಬಹುದು

ಸಾಕಷ್ಟು ಬಾರಿ ಬಿಜೆಪಿ ನಾಯಕರು, ಬಲಪಂಥೀಯ ವಿಚಾರಗಳ ವಿರುದ್ಧ ವಾಗ್ದಾಳಿ ನಡೆಸುವ ಸಾಹಿತಿ ಪ್ರೊ.ಕೆ.ಎಸ್. ಭಗವಾನ್ ಅವರು  ಸಭೆಯೊಂದರಲ್ಲಿ ಬಿಜೆಪಿ ನಾಯಕರೊಂದಿಗೆ ವೇದಿಕೆ ಹಂಚಿಕೊಂಡಂತೆ ಕಾಣುವ ಪೋಟೊವನ್ನು ಹಂಚಿಕೊಳ್ಳುವ ಮೂಲಕ ಪ್ರೊ.ಕೆ.ಎಸ್. ಭಗವಾನ್ ಬಿಜೆಪಿ ಪಾಳಯದಲ್ಲಿ ಗುರುತಿಸಿಕೊಂಡಿದ್ದಾರಾ? ಎಂಬ ಪ್ರಶ್ನೆಯನ್ನು ಕೆಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಫೋಟೊದಲ್ಲಿ ಕಾಣುವ ವ್ಯಕ್ತಿ ಕೆ.ಎಸ್. ಭಗವಾನ್ ಅವರೇ? ಅವರು ಬಿಜೆಪಿ ವೇದಿಕಯಲ್ಲಿ ಕಾಣಿಸಿಕೊಂಡಿದ್ದಾದೂ ಏಕೆ? ಭಗವಾನ್ ಅವರೊಂದಿಗೆ ಬೇರೆ ಯಾರು ಯಾರು ಇದ್ದಾರೆ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪ್ರೊ.ಕೆ.ಎಸ್. ಭಗವಾನ್ ಬಿಜೆಪಿ ಸಭೆಯ ವೇದಿಕೆಯಲ್ಲಿ ಕಾಣಿಸಿಕೊಂಡ ಚಿತ್ರವನ್ನು ಪರಿಶೀಲಿಸಿದಾಗ, ವೈರಲ್ ಪೋಟೊ ಜನವರಿ 2021ರಲ್ಲಿ ಸೆರೆಹಿಡಿದ ಚಿತ್ರ ಎಂಬ ಮಾಹಿತಿ ಲಭ್ಯವಾಗಿದೆ.

ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿದ್ದ ಹೊಸ ಶೈಕ್ಷಣಿಕ ನೀತಿಗಳು(NEP) ಮತ್ತು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೆಲವು ನೀತಿಗಳು ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸಂಚು ತರುತ್ತಿವೆ. ಈ ಕೇಂದ್ರವನ್ನು ಶಾಶ್ವತವಾಗಿ ಮುಚ್ಚುವ ಪ್ರಕ್ರಿಯೆಗಳು ಕೇಂದ್ರ ಸರ್ಕಾರದ ಮಟ್ಟದಲ್ಲಿ ನಡೆಯುತ್ತಿರುವುದನ್ನು ತಡೆಯಲು ಮತ್ತು ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ನೀಡುವಂತೆ ಹಕ್ಕೊತ್ತಾಯ ಮಾಡಲಾಗಿತ್ತು.

ಇದೇ ಹಿನ್ನಲೆಯಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ನೀಡುವಂತೆ ಆಗ್ರಹಿಸುವ ಸಲುವಾಗಿ ಸಹಕಾರ ಸಚಿವರು ಮತ್ತು ಮೈಸೂರು ಉಸ್ತುವಾರಿ ಸಚಿವರು ಆಗಿದ್ದ ಸೋಮಶೇಖರ್ ಅವರನ್ನು 2021 ಜನವರಿ 9 ರಂದು ಭೇಟಿ ಮಾಡಲು  ಪ್ರೊ.ಭಗವಾನ್ ಬಿಜೆಪಿ ಕಚೇರಿಗೆ ತೆರಳಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಪ್ರೊ.ಕೆ.ಎಸ್. ಭಗವಾನ್ ಮೈಸೂರು ಬಿಜೆಪಿ ಕಚೇರಿಯಲ್ಲಿ ಸಚಿವರನ್ನು ಭೇಟಿಯಾದ ಸಂದರ್ಭದಲ್ಲಿ, ಈ ಭೇಟಿಯ ಬಗ್ಗೆ ಪ್ರಗತಿಪರ ವಲಯದಲ್ಲೂ ಸಾಕಷ್ಟು ಚರ್ಚೆಯಾಗಿತ್ತು.

ಸಚಿವ ಎಸ್.ಟಿ ಸೋಮಶೇರ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ನಿಯೋಗದಲ್ಲಿ ಶಾಸ್ತ್ರೀಯ ಕನ್ನಡ ಸ್ವಾಯತ್ತ ಕ್ರಿಯಾ ಸಮಿತಿ ಸದಸ್ಯರೊಂದಿಗೆ, ಹಿರಿಯ ಹೋರಾಟಗರ ಪ.ಮಲ್ಲೇಶ್, ನಾ. ದಿವಾಕರ್, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಮು, ಮೂಗೂರು ನಂಜುಂಡಸ್ವಾಮಿ ಸೇರಿದಂತೆ ಇನ್ನಿತರ ಸಮಿತಿ ಸದಸ್ಯರ ಇದ್ದಾರೆ.

ಇದು 2021 ರ ಚಿತ್ರ:

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಚಿತ್ರದಲ್ಲಿ ಎಸ್‌.ಟಿ ಸೋಮಶೇಖರ್ ಅವರಿಗೆ ಮನವಿ ನೀಡಲಾಗುತ್ತಿದೆ. ಅಂದರೆ ಅವರ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಮೈಸೂರು ಉಸ್ತುವಾರಿ ಸಚಿವರಾಗಿದ್ದರು, ಈಗಿನ ಉಸ್ತುಆರಿ ಸಚಿವರು ಹೆಚ್.ಚಿ ಮಹದೆವಪ್ಪನವರು. ಅಲ್ಲದೆ ವೈರಲ್ ಚಿತ್ರದಲ್ಲಿ ಎಸ್.ಟಿ.ಸೋಮಶೇಖರ್ ಅವರೊಂದಿಗೆ ಮಾತನಾಡುತ್ತಿರುವವರು, ಸಮಾಜವಾದಿ ಹೋರಾಟಗಾರ ಹಾಗೂ ಪ್ರಗತಿಪರ ಚಿಂತಕರಾಗಿದ್ದ ಮೈಸೂರಿನ ಪ.ಮಲ್ಲೇಶ್. ಆದರೆ ಪಾ ಮಲ್ಲೇಶ್ ಅವರು 20 ಜನವರಿ 2023ರಂದು ನಿಧನಹೊಂದಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, 2021ರಲ್ಲಿ ಮೈಸೂರಿನಲ್ಲಿ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರಕ್ಕೆ ಸ್ವಾಯತ್ತತೆ ನೀಡುವಂತೆ ಆಗ್ರಹಿಸುವ ಸಲುವಾಗಿ ಸಹಕಾರ ಸಚಿವರು ಮತ್ತು ಮೈಸೂರು ಉಸ್ತುವಾರಿ ಸಚಿವರು ಆಗಿದ್ದ ಸೋಮಶೇಖರ್ ಅವರನ್ನು 2021 ಜನವರಿ 9 ರಂದು ಭೇಟಿ ಮಾಡಲು  ಪ್ರೊ.ಭಗವಾನ್ , ಹೋರಾಟಗರ ಪ.ಮಲ್ಲೇಶ್, ನಾ. ದಿವಾಕರ್ ಮುಂತಾದವರು ಭೇಟಿ ನೀಡಿ ಸಂದರ್ಭದ ಚಿತ್ರವನ್ನು ಇತ್ತೀಚಿನ ಚಿತ್ರ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್ : ವಿರೋಧ ಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ದ ಸಭೆಯಲ್ಲಿ ಆಜಾನ್ ಹಾಕಲಾಗಿತ್ತೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights