NSS ಕ್ಯಾಂಪ್ ನಲ್ಲಿ ಶಿಕ್ಷಕನ ಟಂಪಾಗುಚ್ಚಿ ಡಾನ್ಸ್ ವಿಡಿಯೋ ವೈರಲ್….
ವಿಧ್ಯಾರ್ಥಿಗಳನ್ನು ಶಿಸ್ತಿನ ಸಿಪಾಯಿಗಳನ್ನಾಗಿ ರೂಪಿಸಬೇಕಾದ ಶಿಕ್ಷಕ NSS ಕ್ಯಾಂಪ್ ನಲ್ಲಿ ಟಂಪಾಗುಚ್ಚಿ ಡಾನ್ಸ್ ಮಾಡಿದ ವಿಡಿಯೋ ಸಖತ್ ವೈರಲ್ ಆಗಿದೆ.
ಹೌದು.. ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ವೆಂಗಸಂದ್ರ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನ ಟಂಪಾಗುಚ್ಚಿ ಡಾನ್ಸ್ ಇದೀಗ ಸಮಾಜಿಕ ಜಾಲತಾಣಗಳಲ್ಲಿ ಪುಲ್ ವೈರಲ್ ಆಗಿದೆ.
ಗ್ರಾಮದಲ್ಲಿ ಆಯೋಜಿಸಿದ್ದ ಎನ್.ಎಸ್.ಎಸ್ ಶಿಬಿರದಲ್ಲಿ ‘ಸಾರಾಯಿ ಶೀಶೆ’ಯಲ್ಲಿ ಎಂಬ ಹಾಡಿಗೆ ಉಪನ್ಯಾಸಕನಿಂದ ಸಖತ್ ಡಾನ್ಸ್ ಮಾಡಲಾಗಿದೆ. ಮಳೆಯಲ್ಲಿ ಉಪನ್ಯಾಸಕ ಹಾಗೂ ವಿಧ್ಯಾರ್ಥಿಗಳು ಮಳೆ ನೀರಿನ್ನು ಪರಸ್ಪರ ಎರಚಿಕೊಂಡು ಕುಣಿದು ಕುಪ್ಪಳಿಸಿದ್ದಾರೆ.
ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಮಂಜುನಾಥ್ ಎಂಬುವರಿಂದ ಡಿಜೆ ಹಾಗೂ ಸಾರಾಯಿ ಶೀಶೆಯಲ್ಲಿ ನನ್ನ ದೇವಿ ಕಾಣುವಳು ಎಂಬ ಹಾಡಿಗೆ ಕುಡಿದವರಂತೆ ಡಾನ್ಸ್ ಮಾಡಲಾಗಿದೆ. ಶಿಕ್ಷಕನ ನಶೆಯ ಡಾನ್ಸ್ ಗೆ ಸಾರ್ವಜನಿಕರು, ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.