OMG : ಶಾಲಾ ಕೊಠಡಿ ಒಳಗೆ 2 ದಿನ ಹಸುವನ್ನು ಕೂಡಿ ಹಾಕಿದ ಶಿಕ್ಷಕರು…!

ಶಾಲೆಯಿಂದ ಮನೆಗೆ ತೆರಳುವ ಗಡಿಬಿಡಿಯಲ್ಲಿ ಶಾಲಾ ಕೊಠಡಿಯ ಒಳಗೆ ಹೊಕ್ಕಿದ್ದ ಹಸುವನ್ನು ಎರಡು ದಿನ ಶಿಕ್ಷಕರು ಕೂಠಡಿಯಲ್ಲಿ ಕೂಡಿ ಹಾಕಿದ ವಿಚಿತ್ರ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣದ ತಾರಮಕ್ಕಿ ಸರ್ಕಾರಿ ಶಾಲೆಯಲ್ಲಿ ನಡೆದಿದೆ.

ಶನಿವಾರದ ದಿನ ಶಾಲೆಯ ಒಳಗೆ ಹಸುಒಂದು ಹೊಕ್ಕಿದೆ.ಆದರೇ ಇದನ್ನು ಗಮನಿಸದ ಶಿಕ್ಷಕರು ಹಾಗೆಯೇ ಬಾಗಿಲಿಗೆ ಬೀಗ ಹಾಕಿ ಹೋಗಿದ್ದು ಹಸು ಎರಡುದಿನ ಬಂದಿಯಾಗಿದೆ. ಹಸುವಿಗೆ ಆಹಾರವಿಲ್ಲದೇ ಹಸುವಿನ ಕೂಗಿಗೆ ಅಕ್ಕಪಕ್ಕದ ಮನೆಯವರು ಗಮನಿಸಿದಾಗ ಹಸು‌ಶಾಲೆಯ ಕೋಣೆಒಳಗೆ ಇದ್ದಿದ್ದು ಗೊತ್ತಾಗಿದೆ ನಂತರ ಕೊಠಡಿ ನೋಡಿದಾಗ ಹಸು ಇರುವುದು ಪತ್ತೆಯಾಯಿತು.ನಂತರ ಇಂದು ಹಸುವನ್ನು ಕೊಠಡಿಯಿಂದ ಮುಕ್ತಿ ನೀಡಲಾಗಿದ್ದು ಶಿಕ್ಷಕರ ನಿರ್ಲಕ್ಷದ ವಿರುದ್ಧ ಸಾರ್ವಜನಿಕರು ಕಿಡಿ ಕಾರಿದ್ದಾರೆ.

ಇನ್ನೂ ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಅಕ್ಕಪಕ್ಕದ‌ ಜನರು ಶಾಲೆಯತ್ತ ದೌಡಾಯಿಸಿ‌ ಬಂದು ಹಸು ಹೇಗಿದೆ ಎಂದು ನೋಡಿದ್ರೆ ಇನ್ನು ಕೆಲವರು ಶಾಲಾ ಸಿಬ್ಬಂದಿ‌ ನಿರ್ಲಕ್ಷ್ಯಕ್ಕೆ ಹಿಡಿಶಾಪ ಹಾಕಿದ್ರು…ಒಂದಾನು ವೇಳೆ ಈ ಹಸು ಬಾಗಿಲು ತೆರೆದ ಗಡಿಬಿಡಿಯಲ್ಲಿ ಮಕ್ಕಳಿಗೆ ತಿವಿದ್ರೆ ಏನು ಗತಿ ಎಂದು ಆಕ್ರೋಷ ವ್ಯಕ್ತ ಪಡಿಸಿದ್ರು..

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights