RSS ಕಾರ್ಯಕರ್ತ ವರುಣ್ ಮೇಲೆ ಹಲ್ಲೆ ಪ್ರಕರಣದ ಆರೋಪಿಗಳು ಬಾಯಿಬಿಟ್ಟ ಕೋಡ್ ವರ್ಡ್ಸ್

ಬೆಂಗಳೂರು ನಗರದ ಪುರಭವನದ ಬಳಿ ಕಳೆದ ಡಿ‌. 22ರಂದು ನಡೆದ‌ ಸಿಎಎ ಪರ ಸಮಾವೇಶ ಸಂದರ್ಭದಲ್ಲಿ ಆರ್.ಎಸ್.ಎಸ್ ಕಾರ್ಯಕರ್ತ ವರುಣ್ ಮೇಲೆ ಮಾರಣಾಂತಿ‌ಕ ಹಲ್ಲೆ ಪ್ರಕರಣದ ಆರೋಪಿಗಳನ್ನು ಕಲಾಸಿಪಾಳ್ಯಂ ಪೊಲೀಸರ ತಂಡ ಯಶಸ್ವಿಯಾಗಿ ಬಂಧಿಸಿ ವಿಚಾರಣೆ ನಡೆಸಿದ ವೇಳೆ ಸಾಕಷ್ಟು ಕೋಡ್ ವರ್ಡ್ ಗಳ ಬಳಕೆಯ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಹಲ್ಲೆಗೂ ಮುನ್ನ ಆರೋಪಿಗಳು ಮೂರು ಬಾರಿ ಭೇಟಿಯಾಗಿದ್ದರು. ಈ ಭೇಟಿಗೂ ಆರೋಪಿಗಳು ಕೋಡ್ ವರ್ಡ್ ನ್ನ ಬಳಕೆ ಮಾಡುತ್ತಿದ್ದರು. ಸಾಮಾನ್ಯವಾಘಿ ಎಲ್ಲರಿಗೂ ಅರ್ಥ ಆಗುವಂತೆ ಮಾತನಾಡಿದರೆ ತೊಂದರೆಯಾಗುವ ಸಾಧ್ಯತೆ ಅರಿತುಕೊಂಡ ಆರೋಪಿಗಳು ಫೋನ್ ಸಂಪರ್ಕದಲ್ಲಿ ಮತ್ತು ಜನರ ನಡುವೆ ಇದ್ದ ವೇಳೆ ಕೋಡ್ ವರ್ಡ್ ಗಳನ್ನು ಬಳಕೆ ಮಾಡಿಕೊಂಡು ಮಾತನಾಡುತ್ತಿದ್ದರು ಎನ್ನಲಾಗಿದೆ.

ಹಲ್ಲೆ ಮಾಡುವ ವ್ಯಕ್ತಿ ‘ಇರ್ಫಾನ್ ‘ ಗೆ ಮುಖ್ಯ ಅಮೀರ್ ಎಂದು ಕರೆಯುತ್ತಿದ್ದರು.  ‘ಹಲಾಲ್ ಕಟ್ ‘ ಮುಂಭಾಗದಿಂದ ಕುತ್ತಿಗೆಗೆ ಇರಿಯುವುದು . ‘ಬಿಲಾಲ್ ಕಟ್’ ಅಂದ್ರೆ ಹಿಂಬದಿಯಿಂದ ಕುತ್ತಿಗೆಗೆ ಹಿರಿಯುವುದು. ಮುರಗಿ ಕಟ್ / ರನ್ನಿಂಗ್ ಕಟ್ – ಚಲಿಸುವ ವೇಳೆ ಮಾರಕಾಸ್ತ್ರಗಳಿಂದ ಹಿರಿಯುವುದು. ಪಂಜರ್ ಶಾಟ್ – ಎದೆಗೆ ಹೊಡೆಯುವುದು ಹೀಗೆ ಕೋಡ್ ವರ್ಡ್ ಗಳನ್ನ ಆರೋಪಿಗಳು ಇಟ್ಟುಕೊಂಡು ಹಲ್ಲೆಗೆ ಸಂಚು ಮಾಡಿದ್ದರು ಎಂದು ಪೊಲೀಸ್ ವಿಚಾರಣೆ ವೇಳೆ ಗೊತ್ತಾಗಿದೆ.

 

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights