ಅಜಿಮ್‌ ಪ್ರೇಮ್‌ಜಿಗೆ ಪ್ರೆಸ್‌ಕ್ಲಬ್‌ ವರ್ಷದ ವ್ಯಕ್ತಿ ಪ್ರಶಸ್ತಿ: ನಟ ಸುದೀಪ್‌ಗೆ ವಿಶೇಷ ಪ್ರಶಸ್ತಿ!

ಬೆಂಗಳೂರು ಪ್ರೆಸ್ ಕ್ಲಬ್ ವತಿಯಿಂದ ನೀಡಲಾಗುವ ಪ್ರೆಸ್ ಕ್ಲಬ್ ವರ್ಷದ ವ್ಯಕ್ತಿ ಮತ್ತು ಪ್ರೆಸ್ ಕ್ಲಬ್ ವಿಶೇಷ ಪ್ರಶಸ್ತಿ ಹಾಗೂ ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿಯನ್ನು ಪ್ರಕಟಗೊಳಿಸಲಾಗಿದೆ.

2020ನೇ ಸಾಲಿನ ಪ್ರೆಸ್ ಕ್ಲಬ್ ನ ವರ್ಷದ ವ್ಯಕ್ತಿ ಪ್ರಶಸ್ತಿಯನ್ನು ವಿಪ್ರೊ ಸಂಸ್ಥೆಯ ಅಧ್ಯಕ್ಷ ಅಜೀಂ ಪ್ರೇಮ್ ಜಿ ಅವರಿಗೆ ನೀಡಲು ಪ್ರೆಸ್ ಕ್ಲಬ್ ಸದಸ್ಯರು ಮತದಾನದ ಮೂಲಕ ಆಯ್ಕೆ ಮಾಡಿದ್ದಾರೆ.

ಕೊರೊನಾ ತಜ್ಞರ ಸಮಿತಿ ಸದಸ್ಯರು ಹಾಗೂ ನಾರಾಯಣ ಹೃದಯಾಲಯದ ಡಾ.ದೇವಿಪ್ರಸಾದ್ ಶೆಟ್ಟಿ ಮತ್ತು ಚಿತ್ರನಟ ಸುದೀಪ್ ಅವರನ್ನು ಪ್ರೆಸ್ ಕ್ಲಬ್ ವಿಶೇಷ ಪ್ರಶಸ್ತಿಗೆ ಕಾರ್ಯಕಾರಿ ಸಮಿತಿಯಲ್ಲಿ ಆಯ್ಕೆ ಮಾಡಲಾಗಿದೆ.

ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿಗೆ

ಎಸ್.ದೇವನಾಥ್, ಎಸ್.ಕೆ.ಶೇಷಚಂದ್ರಿಕ, ಪಿ.ರಾಮಕೃಷ್ಣ ಉಪಾಧ್ಯ, ಜಿ.ಎಸ್.ನಾರಾಯಣರಾವ್(ಜೆಸುನಾ), ಎಚ್.ಬಿ.ದಿನೇಶ್, ಡಾ.ಸಿ.ಎಸ್.ದ್ವಾರಕಾನಾಥ್, ಮುಂಜಾನೆ ಸತ್ಯ, ಗೇಬ್ರಿಯಲ್ ವಾಝ್, ಸಾಗ್ಲೆರೆ ರಾಮಸ್ವಾಮಿ, ಶ್ರೀಮತತಿ ಶಾಂತಲಾ ಧರ್ಮರಾಜ್, ಉದಯ ಮರಕಿಣಿ, ಎಸ್.ಕೆ.ಶ್ಯಾಂಸುಂದರ್, ಎಂ.ಸಿ.ಪಾಟೀಲ್, ಆರ್.ಶ್ರೀಧರ್ (ಉದಯ ಟಿವಿ), ಇಂದ್ರಜಿತ್ ಲಂಕೇಶ್, ವೈ.ಜಿ.ಜಗದೀಶ್,ಕೆ.ಎಂ.ಮನು ಅಯ್ಯಪ್ಪ, ಎಸ್.ಲಕ್ಷ್ಮಿನಾರಾಯಣ, ಪರಮೇಶ್ವರ್ ಗುಂಡ್ಕಲ್, ರಾಘವೇಂದ್ರ ಹುಣಸೂರು, ಕೆ.ಆದಿನಾಯಣಮೂರ್ತಿ, ವಿಶ್ವನಾಥ್ ಸುವರ್ಣ, ಸುಧಾಕರ ಕೆ.ದರ್ಬೆ, ಡಾ.ಎಂ.ಎಸ್.ಮಣಿ, ಆರ್.ಎಚ್.ನಟರಾಜ್ ಸೇರಿದಂತೆ 25 ಜನ ಹಿರಿಯ ಪತ್ರಕರ್ತರು ಆಯ್ಕೆಯಾಗಿದ್ದಾರೆ.

ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಪ್ರಶಸ್ತಿ ಪುರಸ್ಕೃತರನ್ನು ಸನ್ಮಾನಿಸಲಿದ್ದಾರೆ. ಈ ಸಮಾರಂಭ ಮೂರನೇ ವಾರದಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಕೆ.ಸದಾಶಿವ ಶೆಣೈ ಹೇಳಿದ್ದಾರೆ.

Read Also: ಸಿಎಂ ಬಿಎಸ್‌ವೈರನ್ನೇ ಹೊರಗಿಟ್ಟು ಸಭೆ ನಡೆಸಿದ ಅಮಿತ್‌ ಶಾ; ನಾಯಕತ್ವ ಬದಲಾವಣೆಯ ಮುನ್ಸೂಚನೆ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights