ಡಬಲ್ ಇಂಜಿನ್ ರಾಜ್ಯವನ್ನು ಹಾಳು ಮಾಡಿವೆ: ಅಮಿತ್‌ ಶಾಗೆ ಹೆಚ್‌ಡಿಕೆ ಟಾಂಗ್‌

ಅಮಿತ್‌ ಶಾ ರಾಜ್ಯದಲ್ಲಿ ಡಬಲ್‌ ಇಂಜಿನ್‌ ತರುತ್ತೇವೆ ಎಂದು ಹೇಳುತ್ತಿದ್ದಾರೆ. ಡಬಲ್ ಇಂಜಿನ್ ರಾಜ್ಯವನ್ನು ಹಾಳು ಮಾಡಿವೆ. ಬಿಜೆಪಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕೆಲಸವನ್ನೂ ಮಾಡುತ್ತಿಲ್ಲ. ಹೀಗಾಗಿ ನಾವು ಭಯ ಪಡುವ ಅವಶ್ಯಕತೆ. ಪಕ್ಷವನ್ನು ಗಟ್ಟಿಗೊಳಿಸುವತ್ತ ಬದ್ದತೆಯಿಂದ ಕೆಲಸ ಮಾಡಬೇಕು ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನಲ್ಲಿರುವ ಜೆಡಿಎಸ್‌ ಕೇಂದ್ರ ಕಚೇರಿಯಲ್ಲಿ ನಡೆದ ಕೋರ್‌ ಕಮಿಟಿ ಸಭೆಯಲ್ಲಿ ಮಾತನಾಡಿರುವ ಅವರು, ಕಾಂಗ್ರೆಸ್ ಹಾಗೂ ಬಿಜೆಪಿಯವರು ಗ್ರಾಮ‌ ಪಂಚಾಯತಿ ಚುನಾವಣೆಯಲ್ಲಿ ನಾವು ಅತಿಹೆಚ್ಚು ಕಡೆ ಗೆದ್ದಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ವಾಸ್ತವಾಂಶ‌ ಏನು ಎಂಬುದನ್ನು ನಾನು ಅರಿತಿದ್ದೇನೆ ಎಂದು ಅವರು ಹೇಳಿದ್ದಾರೆ.

ಅಮಿತ್ ಶಾ ಡಬಲ್‌ ಇಂಜಿನ್ ತರುತ್ತೇವೆ ಎಂದಿದ್ದಾರೆ. ಡಬಲ್ ಇಂಜಿನ್ ರಾಜ್ಯವನ್ನು ಹಾಳು ಮಾಡಿವೆ. ಬಿಜೆಪಿ ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಮಾಡುತ್ತಿಲ್ಲ. ಹೀಗಾಗಿ ನಾವು ಭಯಪಡುವ ಅಗತ್ಯವಿಲ್ಲ. ಸಂಕ್ರಾಂತಿ ನಂತರ ಪಕ್ಷದ ಪುನಶ್ಚೇತನಕ್ಕೆ ಅಣಿಯಾಗಲಿದ್ದೇವೆ ಎಂದು ಹೆಚ್‌ಡಿಕೆ ಹೇಳಿದ್ದಾರೆ.

ದೇವೇಗೌಡರ ನೇತೃತ್ವದಲ್ಲಿ 32 ಪ್ರಮುಖ ನಾಯಕರ ಸಭೆ ಕರೆಯಲಾಗಿತ್ತು. ಏಳು ವಿಭಾಗಗಳಲ್ಲಿ ವೀಕ್ಷಕರ ಸಮಿತಿ ರಚನೆಯಾಗಿದೆ. ಹೈ.ಕ ಭಾಗಕ್ಕೆ ಬಂಡೆಪ್ಪ ಕಾಶೆಂಪೂರ, ಮುಂಬೈ ಕರ್ನಾಟಕ ಬಸವರಾಜ ಹೊರಟ್ಟಿ, ಮಧ್ಯ ಕರ್ನಾಟಕಕ್ಕೆ ಶಿವಶಂಕರ್ ಸೇರಿ ಎಲ್ಲ ಭಾಗಗಳಲ್ಲೂ ಜವಾಬ್ದಾರಿವಹಿಸಲಾಗಿದೆ. ಪಕ್ಷ ಸಂಘಟನೆಗೆ ಜಿಲ್ಲಾ ಮತ್ತು ತಾಲೂಕು ಘಟಕಗಳು ರಚನೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಹೆಚ್‌ಡಿಕೆ ಸರ್ಕಾರದ ದೂರವಾಣಿ ಕದ್ದಾಲಿಕೆ ಪ್ರಕರಣ; ವಿಚಾರಣೆಗೆ ಬಿಎಸ್‌ವೈ ನಕಾರ: ಕಾರಣವೇನು?

Spread the love

Leave a Reply

Your email address will not be published. Required fields are marked *