FACT CHECK | ಕುಂಭಮೇಳಕ್ಕೆ ತೆರಳುತ್ತಿದ್ದ ರೈಲು ಪ್ರಯಾಣಿಕನಿಂದ ಹಣ ಪೀಕುತ್ತಿದ್ದ TTE ಎಂಬ ವಿಡಿಯೋದ ಅಸಲೀಯತ್ತೇನು?
ಮಹಾ ಕುಂಭಮೇಳವು ಫೆಬ್ರವರಿ 2025 ರಲ್ಲಿ ಮುಕ್ತಾಯಗೊಳ್ಳಲಿದ್ದು, ಭಕ್ತರು ಪ್ರಯಾಗರಾಜ್‌ಗೆ ಆಗಮಿಸುತ್ತಲೇ ಇದ್ದಾರೆ ಈ ಮಧ್ಯೆ, ರೈಲು ಟಿಕೆಟ್ ಪರೀಕ್ಷಕರು ( TTE) ವೃದ್ಧ ರೈಲು ಪ್ರಯಾಣಿಕರೊಬ್ಬರಿಂದ ಹಣವನ್ನು ಕಸಿದುಕೊಳ್ಳುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದರಲ್ಲಿ ಪ್ರಯಾಣಿಕನು ಮಹಾ ಕುಂಭಮೇಳಕ್ಕೆ ಪ್ರಯಾಣಿಸುತ್ತಿದ್ದ ಭಕ್ತರಾಗಿದ್ದು, ಅನ್ಯಾಯವಾಗಿ ಹಣ ಪಾವತಿಸಲು ಒತ್ತಾಯಿಸಲಾಯಿತು ಎಂದು ಬರೆದುಕೊಳ್ಳಲಾಗುತ್ತಿದೆ. ಹೀಗಾಗಿ ವಿಡಿಯೋ ವೈರಲ್ ಆಗಿದೆ.
ಈ ವೈರಲ್ ವಿಡಿಯೋದಲ್ಲಿ ಕೂಡ TTE ಪ್ರಯಾಣಿಕನಿಂದ ಹಣವನ್ನು ಕಸಿದುಕೊಳ್ಳುವುದನ್ನು ನೋಡಬಹುದಾಗಿದೆ. ಹೀಗಾಗಿ ಹಲವು ವೈರಲ್ ವಿಡಿಯೋ ಇತ್ತೀಚೆಗಿನ ಮಹಾ ಕುಂಭಮೇಳಕ್ಕೆ ತೆರಳುತ್ತಿದ್ದ ರೈಲಿನಲ್ಲಿ ನಡೆದ ಘಟನೆ ಎಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವಿವಿಧ ಆಯಾಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ನಿಜಾಂಶ ಏನು ಎಂಬುದನ್ನು ನಾವು ಈ ಫ್ಯಾಕ್ಟ್‌ಚೆಕ್‌ನಲ್ಲಿ ಸಂಪೂರ್ಣವಾಗಿ ಪರಿಶೀಲನೆ ನಡೆಸೋಣ
इसको वायरल कीजिए ताकि ये डिटेक्ट हो सके और इस पर कार्रवाई हो क्योंकि इसने तो प्रयागराज ,महाकुंभ में में जाते हुए गरीब यात्री से इस TTE ने पूरे पैसे ही हड़प लिए।#railwayministry pic.twitter.com/BgtKShm5qu
— R. NARAYAN (मोदी का परिवार) (@RamNara99688870) February 1, 2025
ಫ್ಯಾಕ್ಟ್‌ಚೆಕ್
ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲಿಸಲು ವೈರಲ್ ವಿಡಿಯೋದ ವಿವಿಧ ಕೀ ಫ್ರೇಮ್‌ಗಳನ್ನು ಗೂಗಲ್ ರಿವರ್ಸ್ ಇಮೆಜ್‌ನಲ್ಲಿ ಸರ್ಚ್ ಮಾಡಿದಾಗ, ಜುಲೈ 23, 2019 ಇದೇ ವಿಡಿಯೋವನ್ನು ವಿವಿಧ ಸಾಮಾಜಿಕ ಮಾಧ್ಯಮಗಳ ಖಾತೆಗಳಲ್ಲಿ ಹಂಚಿಕೊಂಡಿರುವ ಪೋಸ್ಟ್‌ಗಳು ಲಭ್ಯವಾಗಿವೆ. ಆ ಸಮಯದಲ್ಲಿ X ನಲ್ಲಿ ಬ್ರಿಜೇಶ್ ಮಿಶ್ರಾ ಎಂಬುವವರು ವಿಡಿಯೋವನ್ನು ಅಪ್‌ಲೋಡ್ ಮಾಡಿದ್ದು, ಭಾರತೀಯ ರೈಲ್ವೆಯನ್ನು ಟ್ಯಾಗ್ ಮಾಡಿರುವುದು ಕೂಡ ಕಂಡು ಬಂದಿದೆ.
आदरणीय केंद्रीय रेलमंत्री @PiyushGoyal जी, आपके रेलवे डिपार्टमेंट में जमकर भ्रस्टाचारियो का बोलबाला है, यैसा ही एक वीडियो मैं भी इलाहबाद स्टेशन से जिगना स्टेशन के बीच बना रहा था तो मेरी मोबाइल छोड़ ली गई थी, कृपया इन भ्रस्ट कर्मचारियों पर करवाई करें..@PMOIndia @narendramodi pic.twitter.com/V5zX78Sd5t
— बृजेश मिश्र/ Brijesh Mishra (@MishraBRIJESH13) July 23, 2019
ಇದಕ್ಕೆ ರೈಲ್ವೆ ಸೇವಾ ಸಂಸ್ಥೆ ಕೂಡ ಪ್ರತಿಕ್ರಿಯೆ ನೀಡಿ ನಿಮಗೆ ಈ ಘಟನೆ ಯಾವಾಗ ನಡೆದಿದೆ ಎಂಬುದು ತಿಳಿದಿದ್ದರೆ ಮಾಹಿತಿ ನೀಡಿ, ವಿಡಿಯೋ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪ್ರತಿಕ್ರಿಯೆ ನೀಡಿರುವುದು ಕಂಡು ಬಂದಿದೆ. ಈ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ ದೀನ್ ದಯಾಳ್ ಉಪಾಧ್ಯಾಯ ವಿಭಾಗದ DRM ಬಂಧಪಟ್ಟ ಉದ್ಯೋಗಿಯಿಂದ ವಿವರಣೆಯನ್ನು ಕೇಳಲಾಗಿದೆ ಎಂದು ಹೇಳಿದರು. ಘಟನೆ 3-4 ತಿಂಗಳ ಹಿಂದೆ ಸಂಭವಿಸಿತ್ತು, ಮತ್ತು ಟಿಕೆಟ್ ನೀಡಲು ಹಣ ಸಂಗ್ರಹಿಸುತ್ತಿರುವುದಾಗಿ ಉದ್ಯೋಗಿ ಹೇಳಿಕೊಂಡಿದ್ದರು ಆದಾಗ್ಯೂ, ಹೆಚ್ಚಿನ ತನಿಖೆಗಾಗಿ, ಉದ್ಯೋಗಿಯನ್ನು ಅಮಾನತುಗೊಳಿಸಲಾಗಿದೆ ಎಂಬ ಮಾಹಿತಿ ನೀಡಿರುವುದು ಕೂಡ ಸ್ಪಷ್ಟವಾಗಿದೆ .
ಈ ಕುರಿತು ಇನ್ನಷ್ಟು ಮಾಹಿತಿಗಾಗಿ ಸರ್ಚ್ ಮಾಡಿದಾಗ, ಹಲವು ವರದಿಗಳು ಲಭ್ಯವಾಗಿವೆ. ಅದರಲ್ಲಿ ಜುಲೈ 25, 2019 ರಂದು ಅಮರ್ ಉಜಾಲಾ ಅವರಿಂದ ಬಂದ ವರದಿಯೂ ಸೇರಿದೆ , ಉತ್ತರ ಪ್ರದೇಶದ ಚಂದೌಲಿ ಜಿಲ್ಲೆಯ ಪೂರ್ವ ಮಧ್ಯ ರೈಲ್ವೆ ಮುಘಲ್ಸರಾಯ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ TTE ವಿನಯ್ ಸಿಂಗ್ ಅವರನ್ನು ವೃದ್ಧ ಪ್ರಯಾಣಿಕರೊಬ್ಬರಿಂದ ಬಲವಂತವಾಗಿ ಹಣ ಪಡೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಈ ವರದಿಯಲ್ಲಿ ಉಲ್ಲೇಖಿಸಿರುವುದು ನಮಗೆ ಕಂಡು ಬಂದಿದೆ. ಈ ವರದಿಯನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿದಾಗ ಈ ವೈರಲ್ ವಿಡಿಯೋಗೂ ಇತ್ತೀಚೆಗಿನ ಮಹಾ ಕುಂಭಮೇಳಕ್ಕೂ ಯಾವುದೇ ರೀತಿಯಾದ ಸಂಬಂಧವಿಲ್ಲ ಎಂಬುದು ಸ್ಪಷ್ಟವಾಗಿದೆ.
कृपया अपने यात्रा विवरण को बताएं कि आपके साथ यह घटना कब हुई थी ताकि हम जाँच कर सकें। इस वीडियो के संबंध में भी जांच की जा रही है। @drmmgs @drmncrald
— RailwaySeva (@RailwaySeva) July 23, 2019
ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿಯಲ್ಲಿ ಇತ್ತೀಚೆಗೆ ಮಹಾ ಕುಂಭಮೇಳಕ್ಕೆ ತೆರಳುತ್ತಿದ್ದ ವಯೋ ವೃದ್ಧರ ಬಳಿ TTE ಹಣ ವಸೂಲಿ ಮಾಡಿದ್ದಾನೆ ಎಂಬುದು ಸುಳ್ಳು. ವೈರಲ್ ವಿಡಿಯೋ 2019ರದ್ದಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಮುಸ್ಲಿಂ ಮಹಿಳೆಯ ಮೇಲೆ ಹಿಂದೂ ಪುರಷರಿಂದ ಅತ್ಯಾಚಾರ ಎಂದು ಸ್ಕ್ರಿಪ್ಟೆಡ್ ವಿಡಿಯೋ ಹಂಚಿಕೆ

