Virus : ಅಯ್ಯಪ್ಪ, ತಿಮ್ಮಪ್ಪನಿಗೂ ಬಿಡದ ಕೊರೋನಾ ಶಬರಿಮಲೆ ಅಯ್ಯಪ್ಪ ಸನ್ನಿಧಿ ಬಂದ್…

ಕೊರೋನಾ ವೈರಸ್ ಸೇಷ್ಟಿಸಿರುವ ಅವಾಂತರ ಅಷ್ಟಿಷ್ಟಲ್ಲ. ಈ ವೈರಾಣು ಈಗ ವಿಶ್ವ ವಿಖ್ಯಾತ ದೈವ ಸನ್ನಿಧಾನಗಳಿಗೂ ಬಿಸಿ ಮುಟ್ಟಿಸಿದೆ. ಕೊರೋನಾ ವೈರಾಣು ಭೀತಿ ಹಿನ್ನೆಲೆಯಲ್ಲಿ ಶಬರಿಮಲೆಯಲ್ಲಿ ಮಂಡಲ ಪೂಜೆಗೆಂದು ಬರುವ ಭಕ್ತರಿಗೆ ಅಯ್ಯಪ್ಪನ ದರ್ಶನ ಭಾಗ್ಯ ಅಲಭ್ಯ. ಒಂದು ತಿಂಗಳ ಮಟ್ಟಿಗೆ ಅಯ್ಯಪ್ಪ ದೇಗುಲ ಭಕ್ತರಿಗೆ ಬಂದಾಗಲಿದೆ.

ಕೇರಳದಲ್ಲಿ ತುಸು ಹೆಚ್ಚೇ ವ್ಯಾಪಕವಾಗಿ ಕೊರೋನಾ ವೈರಾಣು ಹರಡಿರುವ ಹಿನ್ನೆಲೆಯಲ್ಲಿ ತಿರುವಾಂಕೂರು ದೇವಸ್ವಂ ಮಂಡಳಿ ಈ ನಿರ್ಧಾರ ಕೈಗೊಂಡಿದೆ. ಈ ಅವಧಿಯಲ್ಲಿ ಪೂಜೆಗೆಂದು ಬಾರದಂತೆ ಆಡಳಿತ ಮಂಡಳಿ ಭಕ್ತರಲ್ಲಿ ಮನವಿ ಮಾಡಿಕೊಂಡಿದೆ.

ಸದಾ ಭಕ್ತರಿಂದ ಗಿಜುಗುಡುವ ಧಾರ್ಮಿಕ ಕ್ಷೇತ್ರವಾದ ತಿರುಪತಿಗೂ ವೈರಾಣು ಭಯ ಕಾಡಿದೆ. ಹಾಗಾಗಿ ಅಲ್ಲಿ ಸಹ ಭಕ್ತಗಣಕ್ಕೆ ಕೆಲವೊಂದು ನಿರ್ಬಂಧಗಳನ್ನು ವಿಧಿಸಲಾಗಿದೆ.

ವಿದೇಶಗಳಿಂದ ಬರುವವರಿಗೆ ಕನಿಷ್ಟ ಒಂದು ತಿಂಗಳ ಕಾಲ ಬಾಲಾಜಿಯ ಸನ್ನಿಧಿಗೆ ಬರದಂತೆ ತಿರುಪತಿ ದೇವಸ್ಥಾನ ಆಡಳಿತ ಮಂಡಳಿಯು ತಡೆಯೊಡ್ಡಿದೆ.

ಇದು ಕೇವಲ ಈ ಎರಡು ದೇವಸ್ಥಾನಗಳಿಗೆ ಸೀಮಿತವಾಗಿಲ್ಲ. ದಕ್ಷಿಣ ಭಾರತದ ಹಲವಾರು ದೇವಾಲಯಗಳಲ್ಲಿ ಈಗ ಭಕ್ರ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿರುವ ಅಂಶ ವರದಿಯಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights