Work From Home ಮಾಡುವ ಮಹಿಳೆಯರಿಗೆ ಕಚೇರಿಯಿಂದ ಕಿರುಕುಳ ಕೊಟ್ರೆ ಎಚ್ಚರ…!

ದೇಶದೆಲ್ಲೆಡೆ ಲಾಕ್ ಡೌನ್ ಇರುವ ಕಾರಣ ಪುರುಷರು ಮಾತ್ರವಲ್ಲದೇ ಮಹಿಳೆಯರೂ ಕೂಡ ವರ್ಕ್ ಫ್ರಾಮ್ ಹೋಮ್ ಮಾಡುತ್ತಿದ್ದಾರೆ. ಇಂತಹ ಮಹಿಳೆಯರಿಗೆ ತೊಂದರೆ ಉಂಟಾದಲ್ಲಿ ಸಹಾಯಕ್ಕಾಗಿ ಮಹಿಳಾ ಆಯೋಗ ಕೈ ಜೋಡಿಸಿದೆ.

ಹೌದು…  ಮನೆಯಲ್ಲಿ ಮಹಿಳೆಯರು ಕಚೇರಿ ಕೆಲಸ ಮಾಡುವುದು ಅಷ್ಟು ಸುಲಭವಲ್ಲ. ಯಾಕೆಂದ್ರೆ ಕಚೇರಿ ಕೆಲಸ ಮಾಡಲು ಅದರದ್ದೇ ಆದ ವಾತಾವರಣವಿರಬೇಕು. ಲಾಕ್ ಡೌನ್ ನಿಂದಾಗಿ ಮನೆಯಲ್ಲಿ ಮಕ್ಕಳು, ಗಂಡ, ಸಂಬಂಧಿಕರು ಎಲ್ಲರನ್ನು ನಿಭಾಯಿಸುತ್ತಲೇ ಕಚೇರಿ ಕೆಲಸ ನೋಡಿಕೊಳ್ಳಬೇಕಾಗುತ್ತದೆ. ಹೀಗಾಗಿ ಮಹಿಳೆಯರು ಕಚೇರಿಯಿಂದ ಕಿರುಕುಳಕ್ಕೊಳಗಾದರೆ ಅಂಥವರ ಸಹಾಯಕ್ಕಾಗಿ ಮಹಿಳಾ ಆಯೋಗ ನಿಂತಿದೆ.

ಮಹಿಳೆಯರಿಗೆ ಧೈರ್ಯ ತುಂಬುವ ಕಾರ್ಯದಲ್ಲಿ ತೊಡಗಿರುವ ಆಯೋಗ, ಲಾಕ್‌ಡೌನ್ ವೇಳೆಯಲ್ಲಿ ಮಹಿಳೆಯರೊಂದಿಗೆ ಹಿರಿಯರು ಹಾಗೂ ಪುರುಷರು ಸಂವೇದನೆಯೊಂದಿಗೆ ವರ್ತಿಸಬೇಕು. ಅವರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಮನವಿ ಮಾಡಿದ್ದಾರೆ.

ಒಂದು ವೇಳೆ ಸಮಸ್ಯೆಗಳು ಎದುರಾದಲ್ಲಿ ಇ ಮೇಲ್ ಮೂಲಕ ಆಪ್ತ ಸಮಾಲೋಚನೆ ಅಥವಾ ಕಾನೂನು ಸಲಹೆ ಪಡೆದುಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇದರ ಹೊರತಾಗಿಯೂ ತುರ್ತು ಅಗತ್ಯವಿದ್ದಲ್ಲಿ ಮೊಬೈಲ್ 9481004361 ಮೂಲಕ ತಮ್ಮನ್ನು ಸಂಪರ್ಕಿಸಬಹುದು ಎಂದು ಪ್ರಮೀಳಾ ನಾಯ್ಡು ತಿಳಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights