ಏಳು ಗಂಟೆ ಶಸ್ತ್ರಚಿಕಿತ್ಸೆ ಮಾಡಿ ಹಲ್ಲೆಗೊಳಗಾಗಿದ್ದ ಎಎಸ್ಐ ಕೈ ಜೋಡಿಸಿದ ಪಂಜಾಬ್ ವೈದ್ಯರು!
ಪಾಸ್ ಕೇಳಿದ್ದಕ್ಕೆ ಎಎಸ್ಐ ಕೈ ಕತ್ತರಿಸಿದ್ದ ದುಷ್ಕರ್ಮಿಗಳು ಪೊಲೀಸರ ಅತಿಥಿಯಾಗಿದ್ದು, ಇತ್ತ ಪೊಲೀಸ್ ಕೈಯನ್ನು ಸತತ ಏಳು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ಮಾಡಿ ಕೈ ಜೋಡಿಸುವಲ್ಲಿ ಪಂಜಾಬ್ ವೈದ್ಯರು ಯಶಸ್ವಿಯಾಗಿದ್ದಾರೆ.
ಹೌದು.. ನಿಹಾಂಗ್ನ ಎಎಸ್ಐ ಹರ್ಜಿತ್ ಸಿಂಗ್ ಅವರ ಕೈಯನ್ನು ವ್ಯಕ್ತಿಯೊಬ್ಬ ಕತ್ತರಿಸಿದ್ದನು. ತಕ್ಷಣ ಅವರನ್ನು ಪಟಿಯಾಲದಿಂದ ಚಂಡೀಗಢ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರು ಸತತ ಏಳೂವರೆ ಗಂಟೆ ಶಸ್ತ್ರ ಚಿಕಿತ್ಸೆ ಮಾಡಿ ಕತ್ತರಿಸಿದ್ದ ಪೊಲೀಸ್ ಅಧಿಕಾರಿಯ ಕೈಯನ್ನು ಯಶಸ್ವಿಯಾಗಿ ಮರಳಿ ಜೋಡಿಸಿದ್ದಾರೆ ಎಂದು ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಹೇಳಿದ್ದಾರೆ.
Just spoke with the lead Plastic surgeon who did the successful surgery to stitch back the hand of our brave corona warrior ASI Harjeet Singh. Also spoke with Harjeet who is in high spirits. We still have to wait & watch for the next 5 days.
— DGP Punjab Police (@DGPPunjabPolice) April 12, 2020
ಮತ್ತೊಂದು ಟ್ವೀಟ್ ಮಾಡಿ, “ನಮ್ಮ ಕೆಚ್ಚೆದೆಯ ಕೊರೊನಾ ಯೋಧ ಎಎಸ್ಐ ಹರ್ಜೀತ್ ಸಿಂಗ್ ಅವರಿಗೆ ಯುಶಸ್ವಿ ಶಸ್ತ್ರಚಿಕಿತ್ಸೆ ಮಾಡಿದ ಪ್ರಮುಖ ಪ್ಲಾಸ್ಟಿಕ್ ಸರ್ಜನ್ ಅವರೊಂದಿಗೆ ಮಾತನಾಡಿದ್ದೇನೆ. ಅಲ್ಲದೇ ಹರ್ಜೀತ್ ಅವರೊಂದಿಗೆ ಮಾತನಾಡಿದೆ. ಸದ್ಯಕ್ಕೆ 5 ದಿನಗಳವರೆಗೂ ಅವರು ಆಸ್ಪತ್ರೆಯಲ್ಲಿಯೇ ಇರುಬೇಕು” ಎಂದು ಗುಪ್ತಾ ತಿಳಿಸಿದ್ದಾರೆ.
ನಿಹಾಂಗ್ಸ್ (ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳು ಮತ್ತು ಸಡಿಲ ನೀಲಿ ಮೇಲಂಗಿ ಧರಿಸಿದ ಸಿಖ್ಖರು) ಗುಂಪಿನ ಐವರು ನಿನ್ನೆ ಬೆಳಗ್ಗೆ 6.15ರಲ್ಲಿ ವಾಹನದಲ್ಲಿ ಚಲಿಸುತ್ತಿದ್ದರು. ಲಾಕ್ಡೌನ್ ಜಾರಿಯಲ್ಲಿದ್ದ ಕಾರಣ ತರಕಾರಿ ಮಾರುಕಟ್ಟೆ ಬಳಿ ಮಂಡಿ ಮಂಡಳಿಯ ಅಧಿಕಾರಿಗಳು ಅವರನ್ನು ತಡೆದರು. ಆದರೆ, ಇದನ್ನು ಲೆಕ್ಕಿಸದೆ ಬ್ಯಾರಿಕೇಡ್ ಮೇಲೆ ವಾಹನ ನುಗ್ಗಿಸಿದ ಶಸ್ತ್ರಸಜ್ಜಿತರು ಪೊಲೀಸರು ಮೇಲೂ ದಾಳಿ ನಡೆಸಿದರು.
ಹರ್ಜೀತ್ ಸಿಂಗ್ ಎಂಬ ಎಎಸ್ಐ ಎಡಗೈ ಕತ್ತರಿಸಿದ ದುಷ್ಕರ್ಮಿಗಳು ಇನ್ನಿಬ್ಬರ ಸಿಬ್ಬಂದಿ ಮೇಳೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರು. ಎಡಗೈ ಕತ್ತರಿಸಲ್ಪಟ್ಟ ಎಎಸ್ಐ ಹರ್ಜೀತ್ ಸಿಂಗ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಅವರನ್ನು ಚಂಡೀಗಢದ ಪಿಜಿಐಎಂಇಆರ್ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕೊಂಡೊಯ್ಯಲಾಯಿತು.
ವೈದ್ಯಕೀಯ ತಂಡವೊಂದು ಪ್ಲಾಸ್ಟಿಕ್ ಸರ್ಜನ್ ನೇತೃತ್ವದಲ್ಲಿ ಸಿಂಗ್ ಅವರ ಕೈಗೆ ಹೊಲಿಗೆ ಹಾಕಿ ಮರುಜೋಡಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸುದೀರ್ಘ ಶಸ್ತ್ರಚಿಕಿತ್ಸೆಗೆ ಏಳೂವರೆ ತಾಸು ಬೇಕಾಯಿತು. ದಕ್ಷ ಮತ್ತು ಸಮರ್ಥ ಎಎಸ್ಐ ಹರ್ಜಿತ್ ಸಿಂಗ್ ಅವರ ಕೈ ಮರುಜೋಡಣೆಯಾಗಿದ್ದು ಸದ್ಯ ಅವರು ಚೇತರಿಸಿಕೊಂಡು ಗುಣಮುಖರಾಗುತ್ತಿದ್ದಾರೆ.

