ಒಳ ಉಡುಪು ಕಾಣುವಂತೆ ಪಿಪಿಇ ಜಾಕೇಟ್ ಧರಿಸಿ ಪುರುಷರ ವಾರ್ಡ್ ಗೆ ಬಂದ ನರ್ಸ್…!
ಕೊರೊನಾ ಚಿಕಿತ್ಸೆ ನೀಡಲು ವೈದ್ಯರು ಪಡುತ್ತಿರುವ ಕಷ್ಟ ಸಣ್ಣದೇನಲ್ಲ. ಉರಿ ಬಿಸಿಲಿನ ಸೆಕೆಗೆ ಪಿಪಿಇ ಕಿಟ್ ನ ಎಲ್ಲಾ ವಸ್ತುಗಳನ್ನು ಧರಿಸುವುದು ಅಂದ್ರೆ ಸವಾಲಿನ ಕೆಲಸ. ತೀವ್ರ ಸೆಕೆಗೆ ಇಲ್ಲೊಬ್ಬಳು ನರ್ಸ್ ಸ್ವಿಂ ಡ್ರೆಸ್ ಮೇಲೆ ಥಿನ್ ಕೊರೊನಾ ಜಾಕೇಟ್ ಹಾಕಿಕೊಂಡು ಪುರುಷರ ವಾರ್ಡ್ ನಲ್ಲಿ ಕೆಲಸ ಮಾಡಿ ಎಡವಟ್ಟು ಮಾಡಿಕೊಂಡ ಘಟನೆ ಮಾಸ್ಕೋದಲ್ಲಿ ನಡೆದಿದೆ.
ರಷ್ಯಾದ ದಕ್ಷಿಣ ಮಾಸ್ಕೋ 100 ಮೈಲಿ ದೂರದಲ್ಲಿರುವ ತುಲಾದ ಆಸ್ಪತ್ರೆಯಲ್ಲಿ ರೋಗಿಯೊಬ್ಬರು ನರ್ಸ್ ಫೋಟೋ ತೆಗೆದುಕೊಂಡ ನಂತರ ಆಕೆಯ ಚಿತ್ರ ವೈರಲ್ ಆಗಿದೆ.

ಸದ್ಯ ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಫುಲ್ ಹವಾ ಕ್ರಿಯೇಟ್ ಮಾಡಿದೆ. ಪಿಪಿಇ ಜಾಕೇಟ್ ಧರಿಸಿದ್ದರೂ ನರ್ಸ್ ನ ಒಳ ಉಡುಪುಗಳೆಲ್ಲವೂ ದರ್ಶನವಾಗಿದೆ. ಹಾಗೆ ನೋಡಿದರೆ ಯುನಿಫಾರ್ಂ ಧರಿಸಿ ಅದರ ಮೇಲಿ ಪಿಪಿಇ ಜಾಕೇಟ್ ಧರಿಸಬೇಕು. ಆದರೆ ಈ ನರ್ಸ್ ಸೆಕೆಯ ಕಾರಣ ನೀಡಿ ಸ್ವಿಂ ಡ್ರೆಸ್ ಮೇಲೆ ಥಿನ್ ಪಿಪಿಇ ಜಾಕೇಟ್ ಧರಿಸಿದ್ದಾರೆ. 20 ವರ್ಷದ ನರ್ಸ್ ಮಾಡಿದ ಈ ಕೆಲಸ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.
ಕೊರೊನಾವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ತಾನು ಧರಿಸಿದ್ದ ಪಿಪಿಇ ಅಷ್ಟು ಪಾರದರ್ಶಕವಾಗಿದೆ ಎಂದು ಅವಳು ತಿಳಿದಿರಲಿಲ್ಲ ಎಂದು ತುಲಾ ಪ್ರಾದೇಶಿಕ ಕ್ಲಿನಿಕಲ್ ಆಸ್ಪತ್ರೆಯ ವ್ಯವಸ್ಥಾಪಕರಿಗೆ ನರ್ಸ್ ತಿಳಿಸಿದ್ದಾಳೆ.
ಇನ್ನೂ ಈ ವಿಚಾರ ತಮ್ಮ ಗಮನಕ್ಕೆ ಬಂದೇ ಇಲ್ಲ ಎಂದು ಆಸ್ಪತ್ರೆ ನಿರ್ವಹಣೆ ವಿಭಾಗದವರು ಹೇಳಿದ್ದಾರೆ. ಆದರೆ ಆಸ್ಪತ್ರೆಯ ಮುಖ್ಯಸ್ಥರು ‘ವೈದ್ಯಕೀಯ ಉಡುಪುಗಳ ಅವಶ್ಯಕತೆಗಳನ್ನು ಅನುಸರಿಸದ ಕಾರಣ’ ನರ್ಸ್ಗೆ ಶಿಕ್ಷೆ ವಿಧಿಸಿದ್ದಾರೆ.

