ಕರುನಾಡಿಗೆ ಬಿಗ್ ಶಾಕ್ : ಒಂದೇ ದಿನದಲ್ಲಿ 388 ಹೊಸ ಕೊರೊನಾ ಕೇಸ್!

ಕರುನಾಡಿಗೆ ಮಹಾರಾಷ್ಟ್ರದ ಕಂಟಕ ಶುರುವಾಗಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಉಲ್ಬಣಗೊಳ್ಳುತ್ತಿದೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ  388 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿವೆ. ಆ ಮೂಲಕ ರಾಜ್ಯದಲ್ಲಿ ಈವರೆಗೆ ಕೊರೊನಾ ಸೋಂಕಿತರ ಸಂಖ್ಯೆ 3,796ಕ್ಕೆ ಏರಿಕೆಯಾಗಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ವರದಿ ನೀಡಿದೆ.

ಹೌದು… ಉಡುಪಿ 150, ಕಲಬುರಗಿ 100, ಬೆಂಗಳೂರು ನಗರ 12, ಯಾದಗಿರಿ 5, ಮಂಡ್ಯ 4, ರಾಯಚೂರು 16, ಬೆಳಗಾವಿ 51, ಹಾಸನ 9, ಬೀದರ್ 10, ದಾವಣಗೆರೆ 7, ಚಿಕ್ಕಬಳ್ಳಾಪುರ 2, ವಿಜಯಪುರ 4, ಬಾಗಲಕೋಟೆ 9, ಧಾರವಾಡ 2, ಕೋಲಾರ 1, ಬೆಂಗಳೂರು ಗ್ರಾಮಾಂತರ 3, ಹಾವೇರಿ 1 ಪ್ರಕರಗಳು ಬಂದಿದೆ. ಇಂದು ಉಡುಪಿಯಲ್ಲಿ ಅತೀ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರಿನ ಸೋಂಕಿತರ ಸಮಖ್ಯೆಯನ್ನು ಮೀರಿಸಿದೆ. ಬೆಂಗಳೂರಿನಲ್ಲಿ 385 ಪ್ರಕರಣಗಳು ದಾಖಲಾಗಿದ್ದು ಉಡುಪಿಯಲ್ಲಿ 410 ಪ್ರಕರಣಗಳು ದಾಖಲಾಗಿವೆ.

ಸೋಂಕಿತರಲ್ಲಿ ಅಧಿಕ ಜನರಿಗೆ ಮಹಾರಾಷ್ಟ್ರ ಲಿಂಕ್ ಇದ್ದು, ಹೊರ ರಾಜ್ಯಗಳಿಮದ ಬಂದವರಲ್ಲಿ ಸೋಂಕು ಹೆಚ್ಚಾಗಿ ಕಾಣಿಸಿಕೊಂಡಿದೆ.  ಇಂದು ರಾಜ್ಯದಲ್ಲಿ ಒಟ್ಟು 75 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

ರಾಜ್ಯದ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 3,796ಕ್ಕೆ ಏರಿಕೆಯಾಗಿದ್ದು, ಇವರಲ್ಲಿ 1403 ಮಂದಿ ಗುಣಮುಖರಾಗಿದ್ದಾರೆ. ಇನ್ನು 2339 ಮಂದಿ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ರಾಜ್ಯದಲ್ಲಿ ಒಟ್ಟಾರೆ 52 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights