ಕೋತಿಗಳಲ್ಲಿ ಕೊರೊನಾ ಪ್ರಗತಿ ನಿಧಾನಗೊಳಿಸಿದ ರೆಮ್ಡೆಸಿವಿರ್ ಚಿಕಿತ್ಸೆ – ನೇಚರ್ ಜರ್ನಲ್
ಇಡೀ ಜಗತ್ತೇ ಕೊರೊನಾ ಚಿಕಿತ್ಸೆಗೆಂದು ಔಷಧಿ ತಯಾರಿಕೆಗೆ ಶತಾಯಗತಾಯ ಪ್ರಯತ್ನ ಪಡುತ್ತಿದೆ. ಈ ಮಧ್ಯೆ ರೆಮ್ಡೆಸಿವಿರ್ ಎಂಬ ಚಿಕಿತ್ಸೆ ವೈದ್ಯ ಲೋಕದಲ್ಲಿ ಮಂದಹಾಸ ಮೂಡಿಸಿದೆ.
ರೆಮ್ಡೆಸಿವಿರ್ ಎಂಬ ಚಿಕಿತ್ಸೆ ಕೋತಿಗಳಲ್ಲಿನ ಕೋವಿಡ್ ಪ್ರಗತಿಯನ್ನು ನಿಧಾನಗೊಳಿಸಿದ್ದು ಇದರ ಬಗ್ಗೆ ಮತ್ತಷ್ಟು ಪ್ರಯೋಗಗಳು ನಡೆಯುತ್ತಿವೆ. ತೀವ್ರ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾದ ಕೊರೊನಾ ಸೋಂಕಿತ ವಯಸ್ಕರು ಮತ್ತು ಮಕ್ಕಳಿಗೆ ಪ್ರಯೋಗಾಲಯ ದೃಢಪಡಿಸಿದ ರೆಮ್ಡೆಸಿವಿರ್ ನೀಡಲು ಡಿಸಿಜಿಐ ಅನುಮೋದನೆ ನೀಡಿದೆ ಎಂದು ಗಿಲ್ಯಾಡ್ ಸೈನ್ಸಸ್ ಪ್ರಕಟಿಸಿದೆ.
ಸಾರ್ಸ್ ಸೋಂಕಿಗೆ ರೆಮ್ಡೆಸಿವಿರ್ ಚಿಕಿತ್ಸೆ ಪರಿಣಾಮಕಾರಿ ಎಂದು ತಿಳಿಯಲಾಗಿದೆ. ರೆಮ್ಡೆಸಿವಿರ್ ಚಿಕಿತ್ಸೆ ಪಡೆದ ಪ್ರಾಣಿಗಳಲ್ಲಿ ಉಸಿರಾಟದ ತೊಂದರೆ ಕಾಯಿಲೆಯ ಲಕ್ಷಣಗಳನ್ನು ಕಂಡುಬಂದಿಲ್ಲ . ಜೊತೆಗೆ ರೇಡಿಯೋಗ್ರಾಫ್‌ಗಳಲ್ಲಿ ಕೊರೊನಾ ವೈರಸ್ ಶ್ವಾಸಕೋಶದ ಒಳನುಸುಳುವಿಕೆಯನ್ನು ಕಡಿಮೆ ಮಾಡಿದೆ.
ರೆಮ್ಡೆಸಿವಿರ್ ಎಂದರೇನು?
ರೆಮ್ಡೆಸಿವಿರ್ ವಿಶಾಲವಾದ ಆಂಟಿವೈರಲ್ ಚಟುವಟಿಕೆಯೊಂದಿಗೆ ನ್ಯೂಕ್ಲಿಯೊಟೈಡ್ ಅನಲಾಗ್ ಪ್ರೊಡ್ರಗ್ ಆಗಿದೆ. ಇದನ್ನು ಪ್ರಸ್ತುತ ಕೋವಿಡ್ -19 ಕ್ಲಿನಿಕಲ್ ಪ್ರಯೋಗಗಳಲ್ಲಿಚಿಕಿತ್ಸೆಗೆ ಬಳಸಲಾಗುತ್ತಿದೆ. ಇದು ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಶನ್‌ನಿಂದ ತುರ್ತು ಬಳಕೆ ಅನುಮತಿ ಪಡೆದಿದೆ. ಪ್ರಾಣಿಗಳಿಗೆ MERS-CoV, SARS-CoV ಸೋಂಕಿನ ವಿರುದ್ಧ ರೆಮ್ಡೆಸಿವಿರ್ ಚಿಕಿತ್ಸೆಯು ಪರಿಣಾಮಕಾರಿಯಾಗಿದೆ.
ನೆಕ್ರೋಪ್ಸಿಯಲ್ಲಿ, ರೆಮ್ಡೆಸಿವಿರ್ ಚಿಕಿತ್ಸೆ ಪಡೆದ ಪ್ರಾಣಿಗಳ ಶ್ವಾಸಕೋಶದಲ್ಲಿ ಕೊರೊನಾ ವೈರಸ್ ಕಡಿಮೆಯಾಗಿದ್ದು ಜೊತೆಗೆ ಶ್ವಾಸಕೋಶದ ಹಾನಿಯಲ್ಲಿ ಇಳಿಕೆ ಕಂಡುಬಂದಿದೆ. ಹೀಗಾಗಿ ಕೊರೊನಾ ಆತಂಕದಲ್ಲಿರುವ ಜನರಿಗೆ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಟ್ಟಂತಾಗಿದೆ.

