ಖಾಲಿಯಾಗಲು ಅದು ಸಿಎಂ ಕುಟುಂಬದ ಬೊಕ್ಕಸನಾ ? ಅಥವಾ ರಾಜ್ಯ ಸರ್ಕಾರದ ಬೊಕ್ಕಸನಾ..? ಮಾಜಿ ಸಿಎಂ ಕಿಡಿ

ಯಡಿಯೂರಪ್ಪ ಬೊಕ್ಕಸ ಖಾಲಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಮಾಜಿ ಸಿಎಂ ಕುಮಾರಸ್ವಾಮಿ ಅದು ಅವರ ಕುಟುಂಬದ ಬೊಕ್ಕಸನಾ ? ಅಥವಾ ರಾಜ್ಯ ಸರ್ಕಾರದ ಬೊಕ್ಕಸನಾ? ಅವರು ಹೇಳಬೇಕು ಎಂದು ವ್ಯಂಗ್ಯವಾಡಿದ್ದಾರೆ.

ನೆರೆ ಹಾವಳಿ ವಿಚಾರವಾಗಿ ಯಡಿಯೂರಪ್ಪ ಹೇಳಿಕೆ ಗಮನಿಸಿದ್ದೇನೆ. ವಿರೋಧ ಪಕ್ಷಗಳು ಬೊಬ್ಬೆ ಹೊಡೆಯುತ್ತಿವೆ. ನಮ್ಮ ಮಂತ್ರಿ ಶಾಸಕರು ಆಕ್ರೋಶದಿಂದ ಮಾತನಾಡಬಾರದು ಎಂದು ಹೇಳಿದ್ದಾರೆ. ಅಸಲಿಗೆ ರಾಜ್ಯದಲ್ಲಿ ಆರ್ಥಿಕವಾಗಿ ಸಮಸ್ಯೆ ಇಲ್ಲ ಅಂತಾ ಒಂದು ಕಡೆ ಹೇಳಿದ್ದಾರೆ. ಮತ್ತೊಮ್ಮೆ ಬೊಕ್ಕಸ ಖಾಲಿ ಇದೆ ಅಂತಾ ಹೇಳುತ್ತಾರೆ.

ನಾನು ಸಹಾ ಸಿಎಂ ಆಗಿದ್ದವನು. ಬೊಕ್ಕಸ ಸಂಪತ್ ಭರಿತವಾಗಿದೆ. ನೆರೆ ಪರಿಹಾರದ ವಿಚಾರವಾಗಿ ಕೇಂದ್ರದ ಮುಲಾಜಿಗೆ ಒಳಗಾಗುವ ಅವಶ್ಯಕತೆ ಇಲ್ಲ. ರಾಜ್ಯ ಸರ್ಕಾರವೇ ಸಹಾಯ ಮಾಡಬಹುದಾಗಿದೆ. ಇದಕ್ಕೆ ಆರ್ಥಿಕ ತೊಂದರೆ ಇಲ್ಲ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕದ್ದಾರೆ.

ಇನ್ನೂ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಬೊಕ್ಕಸ ಖಾಲಿ ಆಗಿರುವುದಾಗಿ ಒಪ್ಪಿಕೊಂಡ ಸಿಎಂ ಪುತ್ರ ವಿಜಯೇಂದ್ರ ಹೇಳಿಕೆಗೆ ಮಾಜಿ ಸಿಎಂ ಕುಮಾರಸ್ವಾಮಿ ಗರಂ ಆಗಿದ್ದಾರೆ. ಯಾರಪ್ಪ ಅವನು ? ಅವನಿಗೆ ಏನು ಗೊತ್ತಿದೆ ? ಅವನಿಗೆ ಆ ಹುಡುಗನಿಗೆ ಪ್ರಾಮುಖ್ಯತೆ ಏಕೆ ಕೊಟ್ಟಿದ್ದಾರೆ. ನೆನ್ನೆ ಮೊನ್ನೆ ಬಂದ ಅವನಿಗೆ ಏನು ಗೊತ್ತಿದೆ. ದುಡ್ಡು ಲಪಟಾಯಿಸುವುದು ಒಂದೇ ಅವನಿಗೆ ಗೊತ್ತಿರೋದು. ಬೊಕ್ಕಸ ಖಾಲಿಯಾಗಿರುವ ವಿಚಾರ. ಬಹುಶಃ ವಿಜಯೇಂದ್ರ ಬೊಕ್ಕಸ ಖಾಲಿಯಾಗಿದೆ‌‌. ಅದನ್ನು ತುಂಬಿಸಿಕೊಳ್ಳುಲು ಅವರು ಓಡಾಡುತ್ತಿದ್ದಾರೆ. ನೆನ್ನೆ ಮೊನ್ನೆ ಬಂದವನಿಗೆ ಅಷ್ಟು ಪ್ರಾಮುಖ್ಯತೆ ಕೊಡುವ ಅವಶ್ಯಕತೆ ಇಲ್ಲ ಎಂದರು.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights