ಗಡಿ ಭಾಗದಲ್ಲಿ ಆಕ್ರಮಣ ನಡೆಸಿದವರು ಯಾರು? ಚೀನಾದ ವಾದವೇನು?

ಭಾರತದ ಯಾವುದೇ ಭೂ ಭಾಗವನ್ನು ಚೀನಾ ಕಬಳಿಸಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿವರು ಸ್ಪಷ್ಟೀಕರಣ ನೀಡಿದ್ದಾರೆ. ಇದರ ಬೆನ್ನಲ್ಲೇ, ಗಾಲ್ವಾನ್ ಕಣಿವೆಯು ಚೀನಾ-ಭಾರತ ಗಡಿಯ ವಾಸ್ತವಿಕ ನಿಯಂತ್ರಣ ರೇಖೆಯ ಚೀನಾದ ಪಶ್ಚಿಮ ಭಾಗದಲ್ಲಿದ್ದು, ಅದು ಚೀನಾದ ಭೂಭಾಗ ಎಂದು ಚೀನಾ ಸರ್ಕಾರ ತಗಾದೆ ತೆಗೆದಿದೆ.

“ಪ್ರಸ್ತುತ ಗಾಲ್ವಾನ್ ಕಣಿವೆ ಭಾಗದಲ್ಲಿ ಭಾರತ ಮತ್ತು ಚೀನಾ ನಡುವಿನ ಸಂಘರ್ಷಕ್ಕೆ ಕಾರಣವಾಗಿರುವ ಪ್ರದೇಶ ಚೀನಾಗೆ ಸೇರಿದ್ದು” ಎಂದು ಚೀನಾ ವಿದೇಶಾಂಗ ಸಚಿವಾಲಯದ ವಕ್ತಾರ ಜಾವೋ ಲಿಜಿಯಾನ್ ಹೇಳಿಕೆ ನೀಡಿದ್ದಾರೆ.

ಅಲ್ಲದೆ, “ಹಲವು ವರ್ಷಗಳಿಂದ ಚೀನಾ ಪಡೆಗಳು ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿವೆ, ಕರ್ತವ್ಯ ನಿರ್ವಹಿಸುತ್ತಿವೆ. ಆದರೆ 2020ರ ಏಪ್ರಿಲ್ ತಿಂಗಳಿಂದ ಭಾರತೀಯ ಪಡೆಗಳು ಗಾಲ್ವಾನ್ ಕಣಿವೆಯ ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಏಕಪಕ್ಷೀಯವಾಗಿ ಮತ್ತು ನಿರಂತರವಾಗಿ ರಸ್ತೆ, ಸೇತುವೆ ಸೇರಿದಂತೆ ಇತರೆ ಸೌಲಭ್ಯಗಳನ್ನು ನಿರ್ಮಿಸಿವೆ. ಇದು ಅಕ್ಷಮ್ಯ” ಎಂದು ಲಿಜಿಯಾನ್ ಆರೋಪಿಸಿದ್ದಾರೆ.

ಭಾರತವೇಕೆ ಚೀನಾದೆದುರು ಮಂಡಿಯೂರಬೇಕು ...

ಇದರಿಂದ ಚೀನಾ ಯೋಧರು ಗಸ್ತು ತಿರುಗಲು ಅಡ್ಡಿಯಾಗಿದೆ. ನಿಯಂತ್ರಣ ಮತ್ತು ನಿರ್ವಹಣೆಯ ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸುವ ಪ್ರಯತ್ನದಲ್ಲಿ ಭಾರತೀಯ ಪಡೆಗಳು ಉದ್ದೇಶಪೂರಕವಾಗಿ ಪ್ರಚೋದನೆ ಮಾಡಿದ್ದಾರೆ” ಎಂದು ಅವರು ಆರೋಪಗಳ ಪಟ್ಟಿ ಮಾಡಿದ್ದಾರೆ.

ಕಳೆದ ಸೋಮವಾರ ರಾತ್ರಿ ಭಾರತ ಮತ್ತು ಚೀನಾ ಸೇನೆಯ ನಡುವೆ ಘರ್ಷಣೆ ನಡೆದಿದ್ದು, ಈ ಘರ್ಷಣೆಯಲ್ಲಿ ಭಾರತದ 20 ಸೈನಿಕರು ಮೃತಪಟ್ಟಿದ್ದಾರೆ. ಈ ಅಮಾನವೀಯ ಘಟನೆಗೆ ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್, ಜರ್ಮನಿ, ಜಪಾನ್ ಸೇರಿದಂತೆ ಹಲವು ದೇಶಗಳು ಖಂಡನೆ ಸೂಚಿಸಿರುವ ಬೆನ್ನಿಗೆ ಚೀನಾ ದೇಶದಲ್ಲಿ ಮತ್ತೆ ಇಂತಹದ್ದೊಂದು ಹೇಳಿಕೆ ಹೊರ ಬಂದಿರುವುದು ಅಂತಾರಾಷ್ಟ್ರೀಯ ಸಮುದಾಯದ ನಡುವೆ ಕೆಂಗಣ್ಣಿಗೆ ಗುರಿಯಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights